ಧಾರವಾಡ –
ಕಳ್ಳತನ ಪ್ರಕರಣದಲ್ಲಿ ಆರೋಪಿಗಳಂತೆ ನಮಗೂ ಚಿತ್ರಹಿಂಸೆಯನ್ನು ಪೊಲೀಸರು ನೀಡುತ್ತಿದ್ದಾರೆಂದು ಆರೋಪಿಸಿ ಧಾರವಾಡದಲ್ಲಿ ಬಂಗಾರ ಅಂಗಡಿಗಳ ವ್ಯಾಪಾರಿಗಳು ಪ್ರತಿಭಟನೆ ಮಾಡಿದರು.

ನಗರದ ಮಾರುಕಟ್ಟೆಯಲ್ಲಿನ ಎಲ್ಲಾ ಬಂಗಾರದ ಅಂಗಡಿಗಳ ವ್ಯಾಪಾರಿಗಳಿಗೆ ಕಳೆದ ಹಲವಾರು ದಿನಗಳಿಂದ ಪೊಲೀಸರಿಂದ ಸಿಕ್ಕಾಪಟ್ಟಿ ಕಿರುಕುಳವಾಗುತ್ತಿದೆ.

ಕಳ್ಳತನ ಪ್ರಕರಣದಲ್ಲಿ ಆರೋಪಿಗಳನ್ನು ಕರೆದುಕೊಂಡು ಬಂದು ಅವರಿಗೆ ಕೊಟ್ಟಷ್ಟು ಶಿಕ್ಷೆಯನ್ನು ನಮಗೂ ಕೊಡಲಾಗುತ್ತಿದೆ ಹೀಗಾಗಿ ಪೊಲೀಸರ ಈ ಒಂದು ಕಿರುಕುಳು ಹೆಚ್ಚಾಗುತ್ತಿದ್ದು ಇದರಿಂದ ನಗರದಲ್ಲಿ ಬಂಗಾರದ ವ್ಯಾಪಾರಿಗಳು ಪ್ರತಿಭಟನೆ ಮಾಡಿದರು.

ನಗರದ ಗಾಂಧೀ ಚೌಕನಲ್ಲಿ ಎಲ್ಲಾ ಬಂಗಾರದ ಅಂಗಡಿಗಳ ವ್ಯಾಪಾರಿಗಳು ದಿಢೀರನೇ ಪ್ರತಿಭಟನೆ ಮಾಡಿದರು. ವ್ಯಾಪಾರಿಗಳ ತಿಲಕರಾಜ ಮಹಾಜನ ಶೇಠ್.ವಿವೇಕ ಪಾಲನಕರ,

ವೆಂಕಟೇಶ ರಾಯ್ಕರ್. ಮಹೇಶ್ ರಾಯ್ಕರ್, ಗಜಾನನ ರಾಯ್ಕರ್.ಪ್ರಶಾಂತ ಜೈನ್, ಸೇರಿದಂತೆ ನಗರದ ಎಲ್ಲಾ ಬಂಗಾರದ ವ್ಯಾಪಾರಿಗಳು ಈ ಒಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
