ಕಾರ್ಕಳ –
ಅಭಿನಂದಿಸಲು ಹಾರ ತುರಾಯಿ ತರಬೇಡಿ ಕೊಡಲೇಬೇಕು ಅಂತಿದ್ದರೆ ಒಂದು ಕನ್ನಡ ಪುಸ್ತಕ ತನ್ನಿ ಅದನ್ನು ಗ್ರಂಥಾಲಯಕ್ಕೆ ಕೊಡುವೆ ಹೀಗೆಂದು ಸಚಿವರಾಗುತ್ತಲೇ ಮನವಿ ಮಾಡಿದ್ದ ವಿ. ಸುನಿಲ್ ಕುಮಾರ್ ಅವರ ಮನವಿಗೆ ನಿರೀಕ್ಷೆಗೂ ಮೀರಿ ಸ್ಪಂದನೆ ದೊರಕಿದೆ.
ಹೌದು ಇದೇ ಮೊದಲ ಬಾರಿಗೆ ಸುನೀಲ್ ಕುಮಾರ್ ಸಚಿವರಾದ ಬೆನ್ನಲ್ಲೇ ಇಂಥಹದೊಂದು ಆದೇಶ ವನ್ನು ಮಾಡಿದ್ದರು.ಇವರ ಮನವಿಗೆ ಸಾಕಷ್ಟು ಪ್ರಮಾಣದಲ್ಲಿ ಸ್ಪಂದನೆ ಕಂಡು ಬಂದಿದೆ ಅವರ ನಿವಾಸ,ಕಚೇರಿ, ಬೆಂಗಳೂರು ಮುಂತಾದ ಕಡೆಗಳ ಲ್ಲಿ ಅಭಿನಂದಿಸಲು ಬಂದವರು ನೀಡಿದ ಒಟ್ಟು ಪುಸ್ತಕಗಳದ ಸಂಖ್ಯೆ 2 ಸಾವಿರ ದಾಟಿವೆ
ಭಗವದ್ಗೀತೆ ಸಹಿತ ಹೆಚ್ಚು ಮೌಲ್ಯದ ಪುಸ್ತಕಗಳು ಇದರಲ್ಲಿ ಸೇರಿದೆ. ಇನ್ನು ಕೂಡ ಪುಸ್ತಕ ರೂಪದಲ್ಲಿ ಶುಭಾಶಯಗಳು ಹರಿದು ಬರುತ್ತಲೇ ಇವೆ. ಸಂಗ್ರಹ ಗೊಂಡ ಈ ಎಲ್ಲ ಪುಸ್ತಕಗಳನ್ನು ಸ್ಥಳೀಯ ಗ್ರಂಥಾಲ ಯಗಳಿಗೆ ನೀಡಲು ಸಚಿವರು ನಿರ್ಧರಿಸಿದ್ದಾರೆ.
ಇದರಿಂದ ತನ್ನ ಕ್ಷೇತ್ರದ ವಿದ್ಯಾರ್ಥಿಗಳಿಗೆ ಜ್ಞಾನದಾಹಿ ಗಳಿಗೆ ಅನುಕೂಲವಾಗುತ್ತದೆ ಎನ್ನುವುದು ಅವರ ಆಶಯವಾಗಿದೆ.ಸರಕಾರವೂ ಕೂಡ ಇದೀಗ ಸಾರ್ವಜನಿಕ ಸರಕಾರಿ ಕಾರ್ಯಕ್ರಮಗಳಲ್ಲಿ ಹೂಗುಚ್ಚ ನಿಷೇಧಿಸುವಂತೆ ಆದೇಶ ಹೊರಡಿಸಿದ್ದು ನಾಡಿನ ಎಲ್ಲವೂ ಇದನ್ನು ಸ್ವಾಗತ ಮಾಡಿದ್ದಾರೆ