ಕಲಘಟಗಿ –

ಸಾಮಾನ್ಯವಾಗಿ ಯಾವುದೇ ಒಂದು ರಾಜಕೀಯ ನಾಯ ಕರ ಹುಟ್ಟು ಹಬ್ಬವನ್ನು ಅವರವರ ಅಭಿಮಾನಿಗಳು ಕಾರ್ಯಕರ್ತರು ಮುಖಂಡರು ಹಾಗೇ ಹೀಗೆ ಆಚರಣೆ ಮಾಡುತ್ತಾರೆ ಆದರೆ ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನಸಭಾ ಕ್ಷೇತ್ರದ ಮಾಜಿ ಸಚಿವ ಜನಪ್ರೀಯ ನಾಯಕ ಸಂತೋಷ ಲಾಡ್ ಅವರ ಹುಟ್ಟು ಹಬ್ಬವನ್ನು ಕಲಘಟಗಿ ಯಲ್ಲಿ ಸಂತೋಷ ಲಾಡ್ ಅಭಿಮಾನಿ ಬಳಗದವರು ವಿಶೇಷವಾಗಿ ಅದರಲ್ಲೂ ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಿದ್ದಾರೆ.

ಹೌದು ನಮ್ಮ ನಾಯಕರ ಹುಟ್ಟು ಹಬ್ಬ ಇದೆ ಎಂದು ಕೊಂಡು ಅದ್ದೂರಿಯಾಗಿ ಆ ಕಾರ್ಯಕ್ರಮ ಈ ಕಾರ್ಯಕ್ರ ಮವನ್ನು ಮಾಡದೇ ಸಮಾಜಕ್ಕೆ ನಾಲ್ಕು ಜನರ ಜೀವಕ್ಕೆ ಅವಶ್ಯಕವಾಗಿರುವ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಮಾಡುತ್ತಿದ್ದಾರೆ. ಸಂತೋಷ ಲಾಡ್ ಅವರ ಆಪ್ತ ಕಾರ್ಯದರ್ಶಿ ಹರಿಶಂಕರ ಮಠದ ಹಾಗೇ ಉಧ್ಯಮಿ ಅಶೋಕ ಶೆಟ್ಟಿ,ಬಾಬಾ ಅಂಚಟ ಗೇರಿ,ಗಂಗಾಧರ ಚಿಕ್ಕಮಠ,ಬಾಳು ಖಾನಾಪೂರ,

ಸೇರಿದಂತೆ ಹತ್ತಾರು ಜನರು ಸೇರಿಕೊಂಡು ಪಟ್ಟಣದ ಎರಡೇತ್ತಿನ ಮಠದಲ್ಲಿ ಬೃಹತ್ ಪ್ರಮಾಣದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದಾರೆ. ಬೆಳಿಗ್ಗೆ 10 ಗಂಟೆಯಿಂದ ಈ ಒಂದು ಶಿಬಿರವು ನಡೆಯಲಿದ್ದು ಸಾಕಷ್ಟು ಪ್ರಮಾಣ ದಲ್ಲಿ ರಕ್ತವನ್ನು ಶಿಬಿರದಲ್ಲಿ ಶೇಖರಣೆ ಮಾಡಿ ಈ ಮೂಲಕ ನಾಯಕರ ಹುಟ್ಟು ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ.

ಇನ್ನೂ ವಿಶೇಷವಾದ ಈ ಒಂದು ಅರ್ಥಪೂರ್ಣ ಕಾರ್ಯ ಕ್ರಮಕ್ಕೆ ನೀವು ಬನ್ನಿ ಹಾಗೇ ನಿಮ್ಮವರನ್ನು ಕರೆದುಕೊಂಡು ಬಂದು ಸಮಾಜಕ್ಕೆ ಮಾದರಿಯಾಗುವ ಕಾರ್ಯಕ್ರಮವನ್ನು ಆಯೋಜಿಸಿರುವ ನಮಗೆ ಮತ್ತಷ್ಟು ಶಕ್ತಿ ತುಂಬಿ ಎಂದು ಸ್ವಾಗತ ಕೋರಿದ್ದಾರೆ ಸಂತೋಷ ಲಾಡ್ ಅಭಿಮಾನಿ ಬಳಗದ ಸರ್ವ ಸದಸ್ಯರು


