ಚಂಡೀಗಢ –
ಎಷ್ಟೇ ಹೇಳಿದರು ಜಾಗೃತಿ ಮೂಡಿಸಿದರು ಸೂಚನೆ ನೀಡಿದರು ಮನೆ ಮನೆಗೆ ಹೋಗಿ ಆಂದೋಲನ ಮಾಡಿದರು ಕೂಡಾ ಇನ್ನೂ ಸಾಕಷ್ಟು ಪ್ರಮಾಣದಲ್ಲಿ ತಿಳಿ ಹೇಳಿದರು ಕೂಡಾ ಇನ್ನೂ ಸಾರ್ವಜನಿಕರು ಅದರಲ್ಲೂ ಸರ್ಕಾರಿ ನೌಕರರು ನೂರೆಂಟು ನೆಪಗ ಳನ್ನು ಮುಂದಿಟ್ಟುಕೊಂಡು ಈವರೆಗೆ ಲಸಿಕೆಯನ್ನು ತಗೆದುಕೊಂಡಿಲ್ಲ ಹೀಗಾಗಿ ಇದನ್ನೇಲ್ಲವನ್ನು ಅರಿತ ಚಂಡೀಗಢ ರಾಜ್ಯದ ಮುಖ್ಯಮಂತ್ರಿ ಉತ್ತಮವಾದ ಪ್ಲಾನ್ ಮಾಡಿದ್ದಾರೆ.
ಹೌದು ವೈದ್ಯಕೀಯ ಹೊರತುಪಡಿಸಿ ಇತರ ಕಾರಣ ಗಳಿಗಾಗಿ ಕೊರೊನಾವೈರಸ್ ಲಸಿಕೆಯ ಮೊದಲ ಡೋಸ್ ಸ್ವೀಕರಿಸಲು ವಿಫಲರಾದ ಪಂಜಾಬ್ ಸರ್ಕಾರಿ ನೌಕರರನ್ನ ಸೆಪ್ಟೆಂಬರ್ 15ರ ನಂತರ ಕಡ್ಡಾ ಯವಾಗಿ ರಜೆಯ ಮೇಲೆ ಕಳುಹಿಸಲಾಗುತ್ತದೆ. ಈ ಆದೇಶವನ್ನು ಶುಕ್ರವಾರ ಮುಖ್ಯಮಂತ್ರಿ ಕಚೇರಿ (CMO) ಹೊರಡಿಸಿದೆ.ಇದರೊಂದಿಗೆ, ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಮುಂಬ ರುವ ಹಬ್ಬದ ಋತುವಿನ ದೃಷ್ಟಿಯಿಂದ ಅಸ್ತಿತ್ವದ ಲ್ಲಿರುವ ಕೋವಿಡ್ ನಿರ್ಬಂಧಗಳನ್ನ ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲು ಆದೇಶಿಸಿದ್ದಾರೆ ಎಂದು CMO ಹೇಳಿದೆ.ಈ ನಿರ್ಬಂಧಗಳ ಅಡಿಯಲ್ಲಿ, ರಾಜಕೀಯ ಕೂಟ ಗಳು ಸೇರಿದಂತೆ ಎಲ್ಲಾ ಕೂಟಗಳಲ್ಲಿ 300 ಜನರಿ ಗಿಂತ ಹೆಚ್ಚು ಜನ ಸೇರುವಂತಿಲ್ಲ. ಇನ್ನು ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ವನ್ನ ಕಟ್ಟುನಿಟ್ಟಾಗಿ ಕಾಪಾಡುವಂತೆ ಆದೇಶಿಸಲಾ ಗಿದೆ