ಅದರಗುಂಚಿ –
ಕೋವಿಡ್ ಪಾಸಿಟಿವ್ ಸೋಂಕು ಬಂದಿದ್ದಕ್ಕೆ ಭಯ ಗೊಂಡು ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂ ಡ ಘಟನೆ ಹುಬ್ಬಳ್ಳಿಯ ಅದರಗುಂಚಿ ಗ್ರಾಮದಲ್ಲಿ ನಡೆದಿದೆ.ಅದರಗುಂಚಿ ಗ್ರಾಮದ ಹೊರ ವಲಯದ ಶಂಕ್ರಣ್ಣ ಬಿಜವಾಡ ಎಂಬುವರ ಕಲ್ಲಿನ ಕ್ವಾರಿಯಲ್ಲಿ ಈ ಒಂದು ಘಟನೆ ನಡೆದಿದೆ
ಅದರಗುಂಚಿ ಗ್ರಾಮದ ನಿವಾಸಿ ಬಸಮ್ಮ ಸಹದೇವ ಬಳ್ಳೂರು ಎಂಬ ಮಹಿಳೆಗೆ ಕರೋನಾ ಸೋಂಕು ಕಾಣಿಸಿಕೊಂಡಿದೆ ಇದಿರಂದ ಭಯಗೊಂಡ ಮಹಿಳೆ ಬಾವಿಗೆ ಬಿದ್ದು ಸಾವಿಗೆ ಶರಣಾಗಿದ್ದಾರೆ.50 ವಯ ಸ್ಸಿನ ಈ ಒಂದು ಮಹಿಳೆ ಕಲ್ಲುಕ್ವಾರಿ ಗುಂಡಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಕೋವಿಡ್-19 ಪಾಸಿಟಿ ವ್ ಎಂದು ದೃಢಪಟ್ಟಿದ್ದಕ್ಕೆ ಹೆದರಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನೂ ಸುದ್ದಿ ತಿಳಿದ ಹುಬ್ಬಳ್ಳಿಯ ಗ್ರಾಮೀಣ ಪೊಲೀ ಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಈ ಕುರಿತಂತೆ ಪ್ರಕರಣವನ್ನು ದಾಖಲು ಮಾಡಿಕೊಂ ಡಿರುವ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂ ಡಿದ್ದಾರೆ.