ಹುಬ್ಬಳ್ಳಿ –
ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದಲ್ಲಿ ನೂತನ ಬಸ್ ಘಟಕ ನಿರ್ಮಾಣಗೊಂಡಿದೆ.

ಈ ಹಿಂದೆ ಕಾಂಗ್ರೇಸ್ ಪಕ್ಷದ ಸರ್ಕಾರದಲ್ಲಿ ಸಚಿವರಾಗಿದ್ದ ಸಂತೋಷ ಲಾಡ್ ಪ್ರಯತ್ನದಿಂದ ಪಟ್ಟಣದಲ್ಲಿ ಅವಶ್ಯಕವಿದ್ದ ಬಸ್ ಘಟಕಕ್ಕೆ ಪೂಜಿ ಮಾಡಿ ಚಾಲನೆ ನೀಡಲಾಗಿತ್ತು.

ನಂತರ ಸರ್ಕಾರ ಬದಲಾಯಿತು ಕ್ಷೇತ್ರದಲ್ಲೂ ಶಾಸಕರು ಬದಲಾದರು. ಇದೆಲ್ಲದರ ನಡುವೆ ಅವರ ಕಾಲದಲ್ಲಿ ಶಂಕುಸ್ಥಾಪನೆಗೊಂಡು ಈಗ ಸಂಪೂರ್ಣವಾಗಿ ಮುಕ್ತಾಯಾಗಿದ್ದು ಇಂದು ಉದ್ಘಾಟನೆಗೆ ನೂತನ ಕಲಘಟಗಿ ಬಸ್ ಘಟಕ ಸಿದ್ದವಾಗಿದೆ.

ಇನ್ನೂ ಪ್ರಮುಖವಾಗಿ ಅಂದು ಈ ಒಂದು ಬಸ್ ಘಟಕಕ್ಕೆ ಶಂಕುಸ್ಥಾಪನೆ ಮಾಡಿದ ಮಾಜಿ ಸಚಿವ ಸಂತೋಷ ಲಾಡ್ ಅವರನ್ನು ಕಲಘಟಗಿ ಕ್ಷೇತ್ರದ ಶಾಸಕರಾಗಲಿ ವಾಯವ್ಯ ಸಾರಿಗೆ ಇಲಾಖೆಯ ಅಧಿಕಾರಿಗಳಾಗಲಿ ಆಮಂತ್ರಣ ಮಾಡಿಲ್ಲ.

ಸಧ್ಯ ಸಂತೋಷ ಲಾಡ್ ಕ್ಷೇತ್ರದಲ್ಲಿ ಶಾಸಕರು ಇಲ್ಲ ಆದರೆ ಈ ಹಿಂದೆ ಇವರ ಅಧಿಕಾರವಧಿಯಲ್ಲಿ ಈ ಒಂದು ನೂತನ ಬಸ್ ಘಟಕಕ್ಕೆ ಶಂಕುಸ್ಥಾಪನೆ ಮಾಡಿದ್ದು ಅವರೇ ಹೀಗಾಗಿ ಅದಕ್ಕೊಸ್ಕರವಾದರೂ ಆಮಂತ್ರಣ ಮಾಡಬೇಕಾಗಿತ್ತು ಆದರೆ ಆಮಂತ್ರಣ ಮಾಡಿದವರು ಇವರನ್ನು ಮರೆತಿದ್ದಾರೆ.

ಇದರಿಂದ ಸಂತೋಷ ಲಾಡ್ ಅಭಿಮಾನಿಗಳು ಕಾಂಗ್ರೇಸ್ ಪಕ್ಷದ ಮುಖಂಡರು ಕಾರ್ಯಕರ್ತರು ಗರಂ ಆಗಿದ್ದಾರೆ. ಈ ಕುರಿತಂತೆ ತಾಲೂಕು ಬ್ಲಾಕ್ ಅಧ್ಯಕ್ಷ ಇದನ್ನು ಗಂಭೀರವಾಗಿ ತಗೆದುಕೊಂಡಿದ್ದು ಬರುವ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ.