This is the title of the web page
This is the title of the web page

Live Stream

[ytplayer id=’1198′]

November 2024
T F S S M T W
 123456
78910111213
14151617181920
21222324252627
282930  

| Latest Version 8.0.1 |

Local News

ಒಂದನೆಯ ಮದುವೆಯಾಗಿ ಎರಡನೇ ಮದುವೆ ಮಾಡಿಕೊಳ್ಳು ತ್ತಿದ್ದವನಿಗೆ ಮೊದಲನೇ ಹೆಂಡತಿ ಶಾಕ್ ಮದುವೆ ತಡೆದರು…..

WhatsApp Group Join Now
Telegram Group Join Now

ಧಾರವಾಡ –

ಒಬ್ಬಳು ಹೆಂಡತಿ ಇರುವಾಗಲೇ ಇನ್ನೊಬ್ಬಳನನ್ನು ಮದುವೆಯಾಗಲು ಹೊರಟವನನ್ನು ಮೊದಲ ಪತ್ನಿ ಸ್ಥಳಕ್ಕೇ ತೆರಳಿ ಮದುವೆ ನಿಲ್ಲಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ‌.ಹೌದು ಆ ಮೂಲಕ ಒಬ್ಬಳಿಗೆ ಕೈಕೊಟ್ಟು ಇನ್ನೊಬ್ಬಳನ್ನು ಕೈಹಿಡಿಯಲು ಹೋದವನಿಗೆ ಎರಡನೇ ಮದುವೆ ಅವಕಾಶ ಸದ್ಯಕ್ಕೆ ಕೈತಪ್ಪಿಹೋಗಿದೆ.

ಬೆಳಗಾವಿ ಜಿಲ್ಲೆ ಕಿತ್ತೂರ ಮೂಲದ ಡ್ಯಾನಿಷ್ ಎರಡನೇ ಮದುವೆಯಾಗಲು ಮುಂದಾದಾಗ ಈತನಿಗೆ ರಾಜಬಿ ಮನಿಯಾರ್ ಎಂಬಾಕೆಯ ಜೊತೆ ಈಗಾಗಲೇ ಮದುವೆಯಾಗಿದೆ. ಒಂಬತ್ತು ವರ್ಷಗಳ ಹಿಂದೆ ಮದುವೆ ಆಗಿರುವ ಇವರಿಬ್ಬರಿಗೆ ಇಬ್ಬರು ಮಕ್ಕಳಿದ್ದಾರೆ. ಅದಾಗ್ಯೂ ಡ್ಯಾನಿಷ್ ಮತ್ತೊಬ್ಬಳನ್ನು ಮದುವೆಯಾಗಲು ಮುಂದಾಗಿದ್ದ.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನ ದರ್ಗಾದಲ್ಲಿ ಇಂದು ಡ್ಯಾನಿಷ್ನ ಎರಡನೇ ವಿವಾಹ ಕ್ಕೆ ಏರ್ಪಾಟು ಮಾಡಲಾಗಿತ್ತು. ಈ ಬಗ್ಗೆ ವಿಷಯ ತಿಳಿದ ಮೊದಲನೇ ಪತ್ನಿ ರಾಜಬಿ, ದರ್ಗಾಗೇ ತೆರಳಿ ರಂಪ ಮಾಡಿದ್ದಾಳೆ.ಈ ಸಂದರ್ಭದಲ್ಲಿ ಇಬ್ಬರ ಮಧ್ಯೆ ಗಲಾಟೆಯಾಗಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ ದ್ದರು. ಕೊನೆಗೂ ಡ್ಯಾನಿಷ್ನ ಎರಡನೇ ಮದುವೆ ಯನ್ನು ನಿಲ್ಲಿಸುವಲ್ಲಿ ಮೊದಲ ಪತ್ನಿ ಯಶಸ್ವಿಯಾಗಿ ದ್ದಾಳೆ.

ಈ ದಂಪತಿ ಧಾರವಾಡದಲ್ಲಿ ವಾಸವಿದ್ದು, ರಾಜಬಿ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿ ದ್ದಾಳೆ. ಡ್ಯಾನಿಷ್ ಸದ್ಯ ಎಲ್ಲಿಯೂ ಕೆಲಸ ಮಾಡುತ್ತಿ ಲ್ಲ ಎಂಬುದು ಪತ್ನಿ ರಾಜಬಿಯ ಆರೋಪ. ಆದರೆ ಅದನ್ನು ಅಲ್ಲಗಳೆಯುವ ಡ್ಯಾನಿಷ್ ಆಕೆಗೆ ಬೇರೊಬ್ಬನ ಜತೆ ಸಂಬಂಧವಿದೆ. ಕೆಲಸಕ್ಕೆ ಹೋಗುವುದಾಗಿ ಹೇಳಿ ಅವನೊಂದಿಗೆ ಹೊರಗಡೆ ಸುತ್ತಾಡುತ್ತಿದ್ದಾಳೆ. ಜಮಾತ್ ನಲ್ಲಿ ಡೈವೋರ್ಸ್ ಮಾಡಿಸಲು ಕರೆಸಿದ್ದರೂ ಸರಿಯಾಗಿ ಸ್ಪಂದಿಸಿಲ್ಲ. ಕೋರ್ಟ್ ನೋಟಿಸ್ ಕೂಡ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಆಕೆಯೊಂದಿಗೆ ಬದುಕಲು ಇಷ್ಟ ಇಲ್ಲದ್ದ ರಿಂದ ಮತ್ತೊಂದು ಮದುವೆಗೆ ಮುಂದಾಗಿದ್ದೇನೆ ಎಂದು ಸಮಜಾಯಿಷಿ ನೀಡಿದ್ದು. ಒಟ್ಟಿನಲ್ಲಿ ಸದ್ಯಕ್ಕಂತೂ ಎರಡನೇ ಮದುವೆ ನಿಂತುಹೋಗಿದೆ.


Google News

 

 

WhatsApp Group Join Now
Telegram Group Join Now
Suddi Sante Desk