ಕಲಘಟಗಿ –
ಕಬ್ಬು ಕಡಿಯಲು ಬಂದ ಯುವಕನೊರ್ವ ಗ್ರಾಮದಲ್ಲಿನ ದೇವಸ್ಥಾನವೊಂದರ ಹಿತ್ತಾಳೆ ಪ್ರತಿಮೆ ಕಳ್ಳತನ ಮಾಡುವಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಘಟನೆ ಧಾರವಾಡದ ಕಲಘಟಗಿಯಲ್ಲಿ ನಡೆದಿದೆ.

ಕಲಘಟಗಿ ತಾಲೂಕಿನ ಅರಳಿಹೊಂಡ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.

ಅರಳಿಹೊಂಡ ಗ್ರಾಮದಲ್ಲಿರುವ ದೇವಸ್ಥಾನದ ದೇವರ ಹಿತ್ತಾಳೆ ಮೂರ್ತಿ ಕಳ್ಳತನ ಮಾಡಿ ಇನ್ನೇನು ಅಲ್ಲಿಂದ ಎಸ್ಕೇಪ್ ಆಗಬೇಕು ಎನ್ನುವಷ್ಟರಲ್ಲಿ ಕಳ್ಳನು ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಮಹಾರಾಷ್ಟ್ರದಿಂದ ಕಬ್ಬಿನ ಗ್ಯಾಂಗ್ ನಲ್ಲಿ ಕಬ್ಬು ಕಡಿಯಲು ಬಂದಿದ್ದಾನೆ.ಇವನನ್ನು ಈಗ ಗ್ರಾಮಸ್ಥರು ರೇಡ್ ಹ್ಯಾಂಡ್ ಅಸಗಿ ಹಿಡಿದಿದ್ದಾರೆ.
ಗ್ರಾಮಸ್ಥರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಗ್ರಾಮಕ್ಕೆ ಆಗಮಿಸಿ ಇವನನ್ನು ವಶಕ್ಕೆ ಪಡೆದು ಬಂಧಿಸಿ ಇವನ ಕಡೆಯಿಂದ ಹೆಚ್ಚಿನ ಮಾಹಿತಿ ಕಲೆ ಹಾಕಿ ತನಿಖೆ ಮಾಡುತ್ತಿದ್ದಾರೆ.