ಹುಬ್ಬಳ್ಳಿ –
ಹಾವೇರಿಯಲ್ಲಿ ಬಾಲಕನೊಬ್ಬನನ್ನು ಕಿಡ್ನಾಪ್ ಮಾಡಿಕೊಂಡು ಬಂದು ಹುಬ್ಬಳ್ಳಿಯಲ್ಲಿ ಬಿಟ್ಟು ಹೋಗಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ನಿನ್ನೇ ಮಧ್ಯರಾತ್ರಿ ಈ ಒಂದು ಘಟನೆ ನಡೆದಿದೆ. ಮಧ್ಯಾಹ್ನ ಹಾವೇರಿಯಿಂದ ಬಾಲಕನನ್ನು ಅಪಹರಣ ಮಾಡಿಕೊಂಡು ಬಂದಿದ್ದಾರೆ. ನಂತರ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬಂದು ಬಿಟ್ಟು ಹೋಗಿದ್ದಾರೆ.

ಈ ಒಂದು ಘಟನೆಯಿಂದ ದೊಡ್ಡದೊಂದು ಅವಘಡ ತಪ್ಪಿದಂತಾಗಿದೆ. ಹಾವೇರಿಯಲ್ಲಿ ಮೊದಲು ಬಾಲಕನಿಗೆ ಪ್ರಜ್ಞೆ ತಪ್ಪುವಂತೆ ಮಾಡಿದ್ದಾರೆ. ಪ್ರಜ್ಞೆ ತಪ್ಪುತ್ತಿದ್ದಂತೆ ಹಾವೇರಿಯಿಂದ ಅಪಹರಣ ಮಾಡಿಕೊಂಡು ಬಂದು ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.ತಡರಾತ್ರಿ ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣದಲ್ಲಿ ಹುಡುಗ ಅಳುತ್ತಾ ಕುಳಿತುಕೊಂಡಿದ್ದನು. ಈ ಘಟನೆ ಕುರಿತು ಬಾಲಕ ಏನು ಹೇಳಿದ್ದಾನೆ ನೀವೆ ಕೇಳಿ
ನಗರದ ಹಳೇ ಬಸ್ ನಿಲ್ದಾಣದಲ್ಲಿ ಅಳುತ್ತಾ ಕುಳಿತಿದ್ದ ಬಾಲಕನನ್ನು ನೋಡಿದ ಸ್ಥಳೀಯ ವಾಹಿನಿಯ ರಿಪೋರ್ಟರ್ ವೆಂಕಟೇಶ್ ಕೂಡಲೇ ಬಾಲಕನನ್ನು ವಿಚಾರಣೆ ಮಾಡಿ ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಂಡು ಕೂಡಲೇ ಉಪನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಮಾಹಿತಿ ತಲುಪುತ್ತಿದ್ದಂತೆ ಕೂಡಲೇ ಸ್ಥಳಕ್ಕೇ ಬಂದ ಉಪ ನಗರ ಪೊಲೀಸ್ ಠಾಣೆ ಮುಖ್ಯ ಪೇದೆ ರವಿ ಹೂಗಾರ ಅಳುತ್ತಾ ಕುಳಿತಿದ್ದ ಬಾಲಕನನ್ನು ನೋಡಿ ಅವನಿಂದ ಪೋಷಕರ ಹೆಸರು ಪೊನ್ ನಂಬರ್ ತಗೆದುಕೊಂಡು ಮಧ್ಯರಾತ್ರಿಯೇ ಸಂಪರ್ಕ ಮಾಡಿದ್ದಾರೆ.ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೇ ಆಗಮಿಸಿದ ಉಪನಗರ ಪೊಲೀಸ್ ಠಾಣೆಯ ಮುಖ್ಯ ಪೇದೆ ರವಿ ಹುಗಾರ ಬಾಲಕನನ್ನು ವಿಚಾರಿಸಿ ಕೂಡಲೇ ಅವನ ತಂದೆಯನ್ನು ಸಂಪರ್ಕ ಮಾಡಿ ಕರೆಯಿಸಿಕೊಂಡಿದ್ದಾರೆ.

ಮಧ್ಯರಾತ್ರಿಯೇ ಇದೇಲ್ಲ ಕೆಲಸವಾಗಿದ್ದು ತಂದೆಯನ್ನು ಕರೆಯಿಸಿಕೊಂಡ ಪೇದೆ ರವಿ ಹೂಗಾರ ಬಾಲಕನನ್ನು ತಂದೆಗೆ ಒಪ್ಪಿಸಿದ್ದಾರೆ.ಮಗನ ಹುಡುಕಾಟದಲ್ಲಿದ್ದ ಕುಟುಂಬಕ್ಕೇ ಬಾಲಕನನ್ನು ಒಪ್ಪಿಸಿ ಮಾನವಿಯತೆ ಮೆರೆದಿದ್ದಾರೆ ಇಬ್ಬರು. ಮಧ್ಯರಾತ್ರಿ ಮಹಾನ್ ಕೆಲಸ ಮಾಡಿದ್ದಕ್ಕೇ ಪೊಲೀಸ್ ಪೇದೆ ರವಿ ಮತ್ತು ರಿಪೋರ್ಟರ್ ವೆಂಕಟೇಶ ನಿಗೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದ್ದು ಮಧ್ಯರಾತ್ರಿಯೇ ಪಾಲಕರ ಮಡಿಲು ಸೇರಿದ ಬಾಲಕನನ್ನು ಪೋಷಕರಿಗೆ ಒಪ್ಪಿಸಿದ ಪೊಲೀಸರು ನಿಟ್ಟಿಸಿರು ಬಿಟ್ಟಿದ್ದಾರೆ.

ಇನ್ನೂ ಇತ್ತ ಅಪಹರಣ ಮಾಡಿಕೊಂಡು ಬಂದು ಹುಬ್ಬಳ್ಳಿಯಲ್ಲಿ ಬಿಟ್ಟು ಹೋದವರಿಗಾಗಿ ಹುಡುಕಾಟ ಮಾಡುತ್ತಿರುವ ಉಪನಗರ ಪೊಲೀಸರು ಹಾವೇರಿಯಿಂದ ಅಪಹರಣ ಮಾಡಿಕೊಂಡು ಬಂದು ಹುಬ್ಬಳ್ಳಿಯಲ್ಲಿ ಯಾಕೇ ಬಿಟ್ಟು ಹೋದ್ರು ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದಾರೆ.ಸಧ್ಯ ಬಾಲಕನ ಮತ್ತು ಅವರ ಪೋಸಕರಿಂದ ಪೊಲೀಸರು ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಂಡಿದ್ದು ಅಪಹರಣ ಮಾಡಿಕೊಂಡು ಬಂದವರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.