ಬೆಳಗಾವಿ –
ಹುಟ್ಟು ನಮ್ಮ ಕೈಯಲ್ಲಿ ಇಲ್ಲ ಸಾವು ಕೂಡಾ ನಮ್ಮ ಕೈಯಲ್ಲಿ ಇಲ್ಲ . ಕೆಲವೊಮ್ಮೆ ನಾವು ಏನೆಲ್ಲಾ ಮಾಡಿದರು ನಮ್ಮ ಶ್ರಮ ದೇವರಿಗೆ ಕೆಲಮೊಮ್ಮೆ ಇಷ್ಟವಾಗೊದಿಲ್ಲ ಅನ್ನೊದಕ್ಕೆ ಬೆಳಗಾವಿಯ ಯರಗಟ್ಟಿ ಬಳಿ ನಿನ್ನೆ ನಡೆದ ಅಪಘಾತವೇ ಸಾಕ್ಷಿ.

ನಗು ನಗುತ್ತಾ ಬಂಧು ಬಳಗ ಆಪ್ತರು ಹೀಗೆ ಎಲ್ಲರನ್ನೂ ಕೂಡಿಸಿ ಲಕ್ಷಾಂತರ ರೂಪಾಉಮಯಿ ಖರ್ಚು ಮಾಡಿ ಇದ್ದ ಒಬ್ಬ ಮಗನ ಮದುವೆಯನ್ನು ನಾಲ್ಕು ದಿನದ ಹಿಂದೆಯಷ್ಟೇ ಮಾಡಿದ್ದರು ಬೆಳಗಾವಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ರುವ PSI ಲಕ್ಷ್ಮೀ ನೆಲವಡೆ.

ಧಾಮ್ ಧೂಮ್ ಆಗಿ ಮಗನ ಮದುವೆ ಮಾಡಿದ ತಾಯಿ ಮಗ,ಮತ್ತು ಸೊಸೆಯ ಜೊತೆ ಯಲ್ಲಮ್ಮನ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದುಕೊಂಡು ವಿಶೇಷವಾದ ಪೂಜೆ ಮಾಡಿ ದೇವಿಯ ಆಶಿರ್ವಾದ ಪಡೆದುಕೊಂಡು ಮನೆಗೆ ಮರಳಿ ಹೊರಟಿದ್ದರು. ಅರ್ಧ ದಾರಿಯಲ್ಲಿ ಬಂದ ನಂತರ ಆಗಿದ್ದೆ ಬೇರೆ

ಮನೆಗೆ ಖುಷಿ ಖುಷಿಯಿಂದ ಬರುವಾಗ ವಿಧಿಯ ಅಟ್ಟಹಾಸ ಎಂತಹದ್ದು ನೋಡಿ ಎಲ್ಲರನ್ನೂ ಬಾರದ ಲೋಕಕ್ಕೆ ಕಳುಹಿಸಿದೆ.

ಬೆಳಗಾವಿಯ ಮಹಿಳಾ ಪೋಲೀಸ್ ಠಾಣೆಯಲ್ಲಿ ಸಬ್ ಇನೆಸ್ಪೆಕ್ಟರ್ ಎಂದು ಕರ್ತವ್ಯ ನಿಭಾಯಿಸುತ್ತಿದ್ದ,ಲಕ್ಷ್ಮೀ ನೆಲವಡೆ ಅವರು ನಿವೃತ್ತಿಯಾಗಲು ಕೇವಲ ಒಂದು ತಿಂಗಳು ಮಾತ್ರ ಬಾಕಿ ಉಳಿದಿತ್ತು ಜನೇವರಿ 21 ರಂದು ಮಗ ಪ್ರಸಾದನ ಮದುವೆ ಮುಗಿಸಿ ಸವದತ್ತಿ ಯಲ್ಲಮ್ಮ ದೇವಿಯ ದರ್ಶನ ಪಡೆಯಲು ಇಂದು ಬೆಳಿಗ್ಗೆ ಮಗ ಪ್ರಸಾದ ಸೊಸೆ ಅಂಕಿತಾ ಮತ್ತು ಸೊಸೆಯ ಸೋದರತ್ತಿಯ ಮಗಳು ದೀಪಾ ಎಲ್ಲರೂ ಸೇರಿ ಕಾರಿನಲ್ಲಿ ಸವದತ್ತಿಗೆ ತೆರಳಿದ್ದರು.

ಸವದತ್ತಿ ಯಲ್ಲಮ್ಮನ ದರ್ಶನ ಪಡೆದು ಮರಳುತ್ತಿರುವಾಗ,ಮುರಗೋಡ ಪೋಲೀಸ್ ಠಾಣೆಯ ಚಚಡಿ ಕ್ರಾಸ್ ಬಳಿ ಬಸ್ ಮತ್ತು ಕಾರು ಮುಖಾ ಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ನಾಲ್ವರೂ ಸ್ಥಳದಲ್ಲೇ ಮೃತಪಟ್ಟರು.

ಸೇವೆಯಿಂದ ನಿವೃತ್ತಿಯಾಗುತ್ತಿದ್ದೇನೆ,ಅಷ್ಟರೊಳಗೆ ಮಗನ ಮದುವೆ ಮಗಿಸಿ ಫೆಬ್ರುವರಿ 28 ಕ್ಕೆ ನಿವೃತ್ತಿಯಾಗಲಿದ್ದ ಪಿಎಸ್ಐ ಲಕ್ಷ್ಮೀ ನೆಲವಡೆ ನಾಲ್ಕು ದಿನಗಳ ಹಿಂದಷ್ಟೇ ಸಂಗಾತಿ ಜೀವನಕ್ಕೆ ಕಾಲಿಟ್ಟಿದ್ದ ಮಗ ಪ್ರಸಾದ ಸೊಸೆ ಅಂಕಿತಾ,ಜೊತೆ ಬದುಕಿನ ಪಯಣ ಮುಗಿಸಿದ್ದು ದುರ್ದೈವ ನಾಲ್ಕು ದಿನದ ಹಿಂದಷ್ಟೇ ಜರುಗಿದ್ದ ಮದುವೆಗೆ ಬಂದಿದ್ದ ಸೊಸೆ ಅಂಕೀತಾ ಅವರ ಸೋದರತ್ತೆಯ ಮಗಳು ದೀಪಾ ಕೂಡಾ ಇಂದು ನವದಂಪತಿಗಳ.

ಜೊತೆಗೆ ತೆರಳಿ ಬದುಕು ಮುಗಿಸಿದ್ದು ವಿಧಿಯಾಟವೇ ಸರಿ. ಏನೇ ಆಗಲಿ ಖುಷಿಯಿಂದ ನಗು ನಗುತ್ತಾ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಗನ ಮದುವೆ ಮಾಡಿ ಮುಂದಿನ ತಿಂಗಳು ಇದ್ದ ಒಬ್ಬ ಮಗನ ಜೊತೆಯಲ್ಲಿ ನಿವೃತ್ತಿ ಜೀವನ ನಡೆಸುವ ಜನಸು ಕಂಡಿದ್ದ ಕನಸು ಹಾಗೇ ಉಳಿದಿದೆ.ಇತ್ತ ಹೊಸ ಬಾಳಿಗೆ ಕಾಲಿಟ್ಟಿದ್ದ ಪ್ರಸಾದ್ ಮತ್ತು ನವವಿವಾಹಿತೆ ಧಾರುಣ ಸಾವು ದುರ್ದೈವದ ಸಂಗತಿ.ಯಾಕೋ ಈ ಒಂದು ಕುಟುಂಬದ ಸಾವು ತುಂಬಾ ತುಂಬಾ ನೋವಾಯಿತು. ಮೊನ್ನೆ ಮೊನ್ನೆಯಷ್ಟೇ ಧಾರವಾಡ ಹೊರವಲಯದಲ್ಲಿ ನಡೆದ ಭೀಕರ ಅಪಘಾತ ಮಾಸುವ ಮುನ್ನವೇ ಮತ್ತೊಂದು ಅಪಘಾತ ಮತ್ತೆ ಮರೆಯಲಾಗದಂತೆ ಮಾಡಿದ್ದು ವಿಷಾದದ ಸಂಗತಿ .