ಕಲಬುರಗಿ –
ಮುಖ್ಯೋಪಾಧ್ಯಾಯ ಅಮಾನತು ಕರ್ತವ್ಯ ಲೋಪ ಹಿನ್ನಲೆಯಲ್ಲಿ ಅಮಾನತು ಮಾಡಿದ ಡಿಡಿಪಿಐ ಹೌದು ಕರ್ತವ್ಯಲೋಪ ಹಿನ್ನಲೆಯಲ್ಲಿ ಮುಖ್ಯೋಪಾಧ್ಯಯರೊಬ್ಬರನ್ನು ಅಮಾನತು ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಅಮಾನತುಗೊಂಡಿದ್ದು ಕರ್ತವ್ಯಲೋಪ ಎಸಗಿದ ಹಿನ್ನೆಲೆಯಲ್ಲಿ ಕಲಬುರಗಿಯ ಸರ್ಕಾರಿ ಪ್ರೌಢಶಾ ಲೆಯ ಪ್ರಭಾರಿ ಮುಖ್ಯೋಪಾಧ್ಯಾಯರನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇ ಶಕರು (ಡಿಡಿಪಿಐ) ಅಮಾನತುಗೊಳಿಸಿದ್ದಾರೆ.
ಮೇಲಧಿಕಾರಿಗಳ ಗಮನಕ್ಕೆ ತಾರದೆ ಶಾದಿಪುರ ಸರಕಾರಿ ಪ್ರೌಢಶಾಲೆಯ ಪ್ರಭಾರಿ ಮುಖ್ಯೋಪಾ ಧ್ಯಾಯ ಸಾಬಣ್ಣ ರಜೆ ಮೇಲೆ ತೆರಳಿದ್ದರು.ಅಲ್ಲದೆ ಮಧ್ಯಾಹ್ನದ ಊಟವನ್ನು ಸರಿಯಾಗಿ ವಿತರಿಸದ ಮತ್ತು ಹಣಕಾಸಿನ ವ್ಯವಹಾರ ನಿರ್ವಹಣೆ ಮಾಡದ ಆರೋಪಗಳೂ ಕೂಡ ಇವರ ಮೇಲೆ ಕೇಳಿ ಬಂದಿತ್ತು.
ಈ ಸಂಬಂಧ ಇಲಾಖಾ ವಿಚಾರಣೆ ಬಾಕಿಯಿದ್ದು ಈ ನಡುವಲ್ಲೇ ಸಾಬಣ್ಣ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ.
ರಕ್ಷಿತ ಸುದ್ದಿ ಸಂತೆ ನ್ಯೂಸ್ ಕಲಬುರಗಿ…..