ಬೆಂಗಳೂರು –
ನಾಡಿನ ಹಿರಿಯ ಹೆಸರಾಂತ ಖ್ಯಾತ ಶಿಕ್ಷಣ ತಜ್ಞ ‘ಅಲ್-ಅಮೀನ್’ಎಜುಕೇಷನಲ್ ಸೊಸೈಟಿ ಹಾಗೂ ‘ಡೈಲಿ ಸಾಲಾರ್’ ಪತ್ರಿಕೆಯ ಸ್ಥಾಪಕ ಹಾಗೂ ಅಲಿ ಗಢ ಮುಸ್ಲಿಂ ವಿಶ್ವ ವಿದ್ಯಾಲಯದ ಮಾಜಿ ಪ್ರೊ. ಚಾನ್ಸಲರ್ ಡಾ.ಮುಮ್ತಾಝ್ ಅಹ್ಮದ್ ಖಾನ್ ನಿಧನರಾಗಿದ್ದಾರೆ.ಅವರಿಗೆ 86 ವರ್ಷ ವಯಸ್ಸಾ ಗಿತ್ತು.ಅವರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಸಂಖ್ಯೆಯ ಬಂಧು ಮಿತ್ರರು ಹಾಗೂ ಗೆಳೆಯರನ್ನು ಅಗಲಿದ್ದಾರೆ.

ಡಾ.ಮುಮ್ತಾಝ್ ಅಹ್ಮದ್ ಖಾನ್ 1966ರಲ್ಲಿ ಅಲ್-ಅಮೀನ್ ಎಜುಕೇಷನಲ್ ಸೊಸೈಟಿಯನ್ನು ಸ್ಥಾಪಿಸಿದರು. ಈಗ ಅಲ್-ಅಮೀನ್ ಸಂಸ್ಥೆಗಳ ಸಮೂಹವು ಕರ್ನಾಟಕ ಹಾಗೂ ದೇಶಾದ್ಯಂತ 200 ಕ್ಕೂ ಹೆಚ್ಚು ಸಂಖ್ಯೆಯಲ್ಲಿವೆ.ಬೆಂಗಳೂರಿನಲ್ಲಿ ಅಲ್ ಅಮೀನ್ ಸಂಸ್ಥೆಯು ಪದವಿಪೂರ್ವ,ಪದವಿ, ಸ್ನಾತ ಕೋತ್ತರ ಶಿಕ್ಷಣ ಸಂಸ್ಥೆ, ಕಾಲೇಜ್ ಆಫ್ ಫಾರ್ಮಸಿ ಹಾಗೂ ಕಾನೂನು ಕಾಲೇಜು ಸಹಿತ ಅಲ್- ಅಮೀ ನ್ ಶಿಕ್ಷಣ ಮಹಾ ವಿದ್ಯಾಲಯದ ತನಕ ವಿವಿಧ ಕಾಲೇಜುಗಳನ್ನು ಹೊಂದಿದೆ.

1965ರಲ್ಲಿ ಬೆಂಗಳೂರಿಗೆ ಆಗಮಿಸಿದರು.1966ರಲ್ಲಿ ಅವರು ಅಲ್-ಅಮೀನ್ ಎಜುಕೇಷನ್ ಸೊಸೈಟಿ ಯನ್ನು ಆರಂಭಿಸಿದರು.ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1990), ಕೆಂಪೇಗೌಡ ಪ್ರಶಸ್ತಿ, ಜೂನಿಯರ್ ಜಯೀಸ್ ಪ್ರಶಸ್ತಿ ಹಾಗೂ ಪಬ್ಲಿಕ್ ರಿಲೇಶನ್ ಸೊಸೈಟಿ ಆಫ್ ಇಂಡಿಯಾ ಪ್ರಶಸ್ತಿ ಮುಂತಾದ ಹಲವು ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ. ಮೃತರಾದ ಈ ಮಹಾನ್ ಶಿಕ್ಷಣ ತಜ್ಞರಿಗೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕರು ಭಾವಪೂರ್ಣ ನಮನ ಸಲ್ಲಿಸಿ ಸಂತಾಪವನ್ನು ಸೂಚಿಸಿದ್ದಾರೆ