ಧಾರವಾಡ –
ಆಟ್ಯಾಪಾಟ್ಯಾ ಫೆಡರೇಷನ್ ಏಷ್ಯಾ ಖಂಡದ ಹಾಗೂ ಭಾರತೀಯ ಆಟ್ಯಾಪಾಟ್ಯಾ ಫೆಡರೇಷನ್ ಅಧ್ಯಕ್ಷ V D ಪಾಟೀಲ ಧಾರವಾಡ ದಲ್ಲಿ ನಿಧನರಾದರು.ಅವರಿಗೆ 57 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಒಬ್ಬ ಮಗ ಒಬ್ಬ ಮಗಳನ್ನು ಅಗಲಿದ್ದಾರೆ.
V D ಪಾಟೀಲ್ ರವರು ಆಟ್ಯಾಪಾಟ್ಯಾ ಆಟದ ಅಂತರಾ ಷ್ಟ್ರೀಯ ಆಟಗಾರ ಹಾಗು ಕೊಕ್ಕೋ ಆಟದ ರಾಷ್ಟ್ರೀಯ ಆಟಗಾರರಾಗಿದ್ದರು.ರಾಷ್ಟ್ರೀಯ ಆಟ್ಯಾಪಾಟ್ಯಾ ತಂಡಕ್ಕೆ ಉಪನಾಯಕರಾಗಿದ್ದರು.ಭಾರತದಲ್ಲಿ ಆಟ್ಯಾಪಾಟ್ಯಾ ಕ್ರೀಡೆ ಬೆಳೆಯಲು ಪ್ರಮುಖ ಕಾರಣಿಕರ್ತರಲ್ಲಿ ಒಬ್ಬರಾಗಿದ್ದರು.
ಸದ್ಯ ಅವರು ಧಾರವಾಡದ ಯೂನಿವರ್ಸಿಟಿ ಸ್ಕೂಲ್ ನಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.ಇನ್ನೂ V D ಪಾಟೀಲರ ನಿಧನಕ್ಕೆ ಮಾಜಿ ಮೇಯರ್ ಶಿವುಹಿರೇ ಮಠ,ಮಹೇಶ್ ಶೆಟ್ಟಿ, BM. ಪಾಟೀಲ, KS. ಭೀಮಣ್ಣವರ, PH. ನೀರಲಕೇರಿ,ಅಶೋಕ ಮೋಟೆಬೆನ್ನೂರ,ಬಸವರಾಜ ಪಟಾತ್,ಖಾಲಿದ್ ಖಾನ್,ಜಿನೇಂದ್ರ ಕುಂದಗೋಳ ಸಂತಾಪ ಸೂಚಿಸಿದ್ದಾರೆ