ಧಾರವಾಡ –
ಮಳೆರಾಯನ ಅಬ್ಬರ ಆರ್ಭಟ ಧಾರವಾಡದಲ್ಲಿ ಜೋರಾಗಿದೆ.ಗುಡುಗು ಸಿಡಿಲಿನೊಂದಿಗೆ ಆರ್ಭಟಿ ಸುತ್ತಿರುವ ಮಳೆ ಧಾರವಾಡದಲ್ಲಿ ಹಲವಾರು ಅವಾಂತರಗಳನ್ನು ಸೃಷ್ಟಿಸಿದೆ
ಹೌದು ಜೋರಾದ ಗಾಳಿ ಇದರೊಂದಿಗೆ ಗುಡುಗು ಸಿಡಿಲು ಇವೆರಡರ ನಡುವೆ ಮಳೆ ಸಾಕಷ್ಟು ಪ್ರಮಾ ಣದಲ್ಲಿ ಆಗಿದ್ದು ನಗರದ ಕುಮಾರೇಶ್ವರ ನಗರದ ಎರಡನೇ ಕ್ರಾಸ್ ನಲ್ಲಿ ಎರಡು ಮರಗಳು ನೆಲಕ್ಕು ರುಳಿದ್ದು ಯಾವುದೇ ರೀತಿಯ ಯಾವುದೇ ಅನಾಹು ತಗಳಾಗಿಲ್ಲ.
ಇನ್ನೂ ಇತ್ತ ನಗರದ ತಗ್ಗು ಪ್ರದೇಶಗಳಲ್ಲಿ ನೀರು ಜೋರಾಗಿ ಹರಿಯುತ್ತಿದ್ದು ಟೋಲ್ ನಾಕಾ ದಲ್ಲಿ ಅದೇ ಪರಿಸ್ಥಿತಿ ಅದೇ ಕಥೆಯಾಗಿದ್ದು KMF. ಬಳಿ ರಸ್ತೆಯಲ್ಲಿ ನೀರು ನಿಂತುಕೊಂಡು ಹರಿಯುತ್ತಿದೆ
ಬೆಳ್ಳಂ ಬೆಳಿಗ್ಗೆ ಸಾಕಷ್ಟು ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಆಗಿದ್ದು ಕಂಡು ಬಂದಿತು. ಸಧ್ಯ ಇದನ್ನು ಬಿಟ್ಟರೆ ನಗರದಲ್ಲಿ ಯಾವುದೇ ರೀತಿಯ ಅನಾಹುತ ಆಗಿದ್ದು ಕಂಡು ಬಂದಿಲ್ಲ ಅಲ್ಲದೇ ಸಾಕಷ್ಟು ಪ್ರಮಾ ಣದಲ್ಲಿ ಮಳೆಯಾಗುತ್ತಿದ್ದು ಬಿಸಿಲಿನ ಬೇಗೆ ಯಿಂದ ಕಂಗಾಲಾಗಿದ್ದ ಜನತೆಗೆ ಮಳೆರಾಯ ಕೂಲ್ ಕೂಲ್ ಮಾಡಿದ್ದಾರೆ