ಹೆಬ್ಬಳ್ಳಿಯ ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿಯ ಅದ್ಯಕ್ಷ ಈರಣ್ಣ ತಟ್ಟಿಮನಿ ಸದಸ್ಯರಾದ ಹಟೇಲಸಾಬ ಗುಡಸಲಮನಿ ಶಿವಾನಂದ ಹಡಪದ ಇವರ ಶೈಕ್ಷಣಿಕ ಕಾಳಜಿಗೆ ಜಿಲ್ಲಾಧಿಕಾರಿಗಳ ಮೆಚ್ಚುಗೆ…..

Suddi Sante Desk

ಧಾರವಾಡ –

ಇಂದು ಧಾರವಾಡ ತಾಲೂಕಿನ ವನಹಳ್ಳಿ ಗ್ರಾಮದಲ್ಲಿ ಜರುಗಿದ‌, ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಅವರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯ ಶಾಲಾಭಿವೃದ್ದಿ ಹಾಗೂ ಮೇಲು ಸ್ತುವಾರಿ ಸಮಿತಿಯ ವತಿಯಿಂದ ಶಾಲೆಗೆ ಆಗಬೇಕಾದ ಪ್ರಮುಖ ಕಾರ್ಯಗಳು

1. ಹಳೆಯ ಐದು ಕೊಠಡಿಗಳನ್ನು ನೆಲಸಮ ಮಾಡಿ ಹೊಸಕಟ್ಟಡ ಕಟ್ಟಲು ಸರಕಾರಕ್ಕೆ ಮನವಿ ಮಾಡಿ ಅನುದಾನ ಬಿಡುಗಡೆ ಮಾಡಿಸುವುದು, 2 ಶಾಲೆಯ ಕಂಪೌಂಡ ಗೋಡೆಯನ್ನು ಎತ್ತರಿಸುವುದು, 3 ಸಿಸಿಟಿವಿ ಕ್ಯಾಮೆರಾ ಜೋಡಿಸುವುದು, 4 ಶಾಲೆಯ ಸುರಕ್ಷಿತವಾಗಿ ಇಡಲು ಶಾಲೆಯ ಒಬ್ಬ ಸೆಕ್ಯುರಿಟಿ ಗಾರ್ಡ ಅಥವಾ ಪಿಯ್ಯುನ್ ಕೊಡಬೇಕು ಎಂದು ಮನವಿ ಮಾಡಿದರು.

ಧಾರವಾಡ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬಮ್ಮಕ್ಕನವರ ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿಯ ಅದ್ಯಕ್ಷರಾದ ಈರಣ್ಣ ತಟ್ಟಿಮನಿ ಸದಸ್ಯರಾದ ಹಟೇಲಸಾಬ ಗುಡಸಲಮನಿ, ಶಿವಾನಂದ ಹಡಪದ ಇದ್ದರು, ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಶಾಲಾಭಿವೃದ್ದಿ ಸಮಿತಿಯ ಕಳಕಳಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.ಶಿಕ್ಷಕರಾದ ಎಲ್ ಐ ಲಕ್ಕಮ್ಮನವರ ಇದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.