ಬೆಂಗಳೂರು –
ರಾಜ್ಯ ಸಿವಿಲ್ ವಿಭಾಗದ ಇನ್ಸ್ಪೆಕ್ಟರ್ ಗಳನ್ನು ರಾಜ್ಯ ಸರ್ಕಾರ ಪೊಲೀಸ್ ಇಲಾಖೆ ವರ್ಗಾವಣೆ ಮಾಡಿ ಆದೇಶವನ್ನು ಮಾಡಿದೆ.
ರಾಜ್ಯಾಧ್ಯಂತ ಒಟ್ಟು 122 ಪೊಲೀಸ್ ಅಧಿಕಾರಿಗ ಳನ್ನು ವರ್ಗಾವಣೆ ಮಾಡಲಾಗಿದ್ದು ಅವಳಿ ನಗರಗ ಳಾದ ಹುಬ್ಬಳ್ಳಿ ಧಾರವಾಡದಲ್ಲೂ ಹೆಚ್ಚಿನ ಪ್ರಮಾಣ ದಲ್ಲಿ ಇನ್ಸ್ಪೆಕ್ಟರ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದ್ದು ಯಾರು ಯಾರು ಎಲ್ಲಿಗೆ ಬಂದಿ ದ್ದಾರೆ ಹೋಗಿದ್ದಾರೆ ಈ ಕೆಳಗಿನಂತಿದೆ.
ಪ್ರಮೋದ್ ಯಲಿಗಾರ ವರ್ಗಾವಣೆಯ ನಿರೀಕ್ಷೆ ಯಲ್ಲಿದ್ದ ಇವರು ಸಧ್ಯ ಜಿಲ್ಲಾ ಎಸ್ಪಿ ವಿಭಾಗದಲ್ಲಿನ ಸಿಇಎನ್ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿ ದ್ದಾರೆ.
ಎಮ್ ಎನ್ ದೇಶನೂರು ಪೊಲೀಸ್ ತರಭೇತಿ ಶಾಲೆ ಖಾನಾಪೂರದಿಂದ ಜಿಲ್ಲೆಯ ಕುಂದಗೋಳ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ
ಶ್ಯಾಮರಾವ್ ಸಜ್ಜನ ಹುಬ್ಬಳ್ಳಿ ಧಾರವಾಡದಲ್ಲಿ ಸಿಸಿಬಿ ಯಲ್ಲಿದ್ದ ಇವರನ್ನು ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ರಮೇಶ್ ಹೂಗಾರ್ ಪಿಟಿಎಸ್ ಖಾನಾಪೂರದಲ್ಲಿದ್ದ ಇವರನ್ನು ಧಾರವಾಡದ ಉಪನಗರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಸುರೇಶ್ ಕುಂಬಾರ ಇವರು ಹುಬ್ಭಳ್ಳಿಯ ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿದ್ದರು ಹುಬ್ಬಳ್ಳಿ ಯ ಸಿಸಿಬಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಜಗದೀಶ್ ಹಂಚಿನಾಳ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಇದ್ದ ಇವರನ್ನು ಹುಬ್ಬಳ್ಳಿಯ ಕೇಶ್ವಾಪೂರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಬಸವರಾಜ ಕಾಮನಬೈಲ್ ಲೋಕಾಯುಕ್ತದ ವರ್ಗಾವಣೆಯ ಆದೇಶದಲ್ಲಿರುವವರು ಇವರನ್ನು ಹುಬ್ಬಳ್ಳಿಯ ಮಹಿಳಾ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.