ಧಾರವಾಡ – ಕಳ್ಳರನ್ನು ಹಿಡಿಲು ಬಂದಿದ್ದ ಆಂಧ್ರ ಪ್ರದೇಶದ ಪೊಲೀಸರ ಮೇಲೆಯೇ ಕಳ್ಳರು ಅಟ್ಯಾಕ್ ಮಾಡಿದ ಘಟನೆ ಧಾರವಾಡದಲ್ಲಿ ನಡೆದಿದೆ.
ಕಳ್ಳತನ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ, ಧಾರವಾಡ ಇರಾನಿ ಗ್ಯಾಂಗಿನ ಕಳ್ಳರನ್ನು ಹಿಡಿಯಲು ಆಂದ್ರ ಪ್ರದೇಶದಿಂದ ಪೊಲೀಸರು ಬಂದಿದ್ದಾರೆ. ನಗರಕ್ಕೆ ಆಂದ್ರಪೊಲೀಸರು ಆಗಮಿಸಿ ಅವರನ್ನು ಹಿಡಿಯುಲು ಮುಂದಾದಾಗ ಕಳ್ಳರು ಪೊಲೀಸರ ಮೇಲೆ ಅಟ್ಯಾಕ್ ಮಾಡಿದ್ದಾರೆ.ನಗರದ ಲೈನ್ ಬಜಾರ್ ನಲ್ಲಿರು ಹನುಮಾನ್ ದೇವಾಲಯ ಬಳಿ ನಡೆದಿದೆ.ನಗರದ ಸಂಗಮ್ ವೃತದ ಬಳಿಯಲ್ಲಿ ಇರಾನಿ ಗ್ಯಾಂಗಿನ ನಾಲ್ಕು ಜನರು ನಿಂತುಕೊಂಡಿದ್ದರು.
ನಾಲ್ಕು ಜನರು ಸಂಗಮ ವೃತದಲ್ಲಿ ನಿಂತಿರುವ ಮಾಹಿತಿ ಪಡೆದುಕೊಂಡ ಆಂದ್ರ ಪ್ರದೇಶದ ಪೊಲೀಸರು ಬಂಧಿಸಲು ಬಂದರು. ಇದೇ ಸದಸ್ಯರನ್ನು ಹುಡುಕುತ್ತಾ ಧಾರವಾಡಕ್ಕೆ ಆಗಮಿಸಿದ ಆಂದ್ರ ಪೊಲೀಸರ ಕಣ್ಣಿಗೆ ಇವರು ನಾಲ್ಕು ಜನ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ತಕ್ಷಣವೇ ಅಲರ್ಟ್ ಆದ ಪೊಲೀಸರು ಇವರನ್ನು ಹಿಡಿಯಲು ಮುಂದಾಗಿದ್ದಾರೆ. ಆಗ ಗಲಿಬಿಲಿಗೊಂಡ ನಾಲ್ಕು ಜನ ಕಳ್ಳರು ಪೊಲೀಸ್ ಎಂದು ಹೇಳುತ್ತಿದ್ದಂತೆ ತಪ್ಪಿಸಿಕೊಳಲು ಯತ್ನಿಸಿ ಪೊಲೀಸರ ಮೇಲೆ ಅಟ್ಯಾಕ್ ಮಾಡಿದ್ದಾರೆ. ಅಲ್ಲದೆ ಅಲ್ಲಿಯೇ
ಇದ್ದ ಬಿಯರ್ ಬಾಟಲಿಯಿಂದ ತಮಗೆ ತಾವೇ ಇರಿದುಕೊಂಡು ಪರಾರಿಯಾಗಲು ಯತ್ನಿಸಿದರು. ಸದ್ಯ ಇರಾನಿ ಗ್ಯಾಂಗ ಕಳ್ಳರನ್ನು ವಶಕ್ಕೆ ಪಡೆದಿರುವ ಆಂದ್ರ ಪೊಲೀಸರು ಸ್ಥಳಿಯ ಶಹರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದುಕೊಂಡ ಧಾರವಾಡ ಎಸಿಪಿ ಅನುಷಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.ಇತ್ತ ಗಾಯಗೊಂಡಿರುವ ಆಂದ್ರ ಪ್ರದೇಶದ ಪೊಲೀಸರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.