This is the title of the web page
This is the title of the web page

Live Stream

[ytplayer id=’1198′]

December 2024
T F S S M T W
 1234
567891011
12131415161718
19202122232425
262728293031  

| Latest Version 8.0.1 |

international News

ಹೈಟೆಕ್ ವೇಶ್ಯಾವಾಟಿಕೆ ಜಾಲ ಪತ್ತೆ ಇಬ್ಬರು ನಟ ‌ನಟಿ ಸೇರಿ ಐವರ ಬಂಧನ – ಪೊಲೀಸರ ಭರ್ಜರಿ ಕಾರ್ಯಾಚರಣೆ…..

WhatsApp Group Join Now
Telegram Group Join Now

ಮಹಾರಾಷ್ಟ್ರ –

ಮಹಾರಾಷ್ಟ್ರದ ಥಾಣೆ ನಗರದಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.ಥಾಣೆ ಇಲ್ಲಿನ ಗುನ್ಹೆ ಯುನಿಟ್ -1ರ ಸಿಸಿಬಿ ತಂಡವು ಹೈ ಪ್ರೊಫೈಲ್ ಸೆಕ್ಸ್ ದಂಧೆಯನ್ನು ಬಯಲಿಗೆಳೆದಿದ್ದು, ಇಬ್ಬರು ತಮಿಳು ನಟಿಯರು ಸೇರಿದಂತೆ ಐವರನ್ನು ಬಂಧಿಸಿದೆ.ಇಬ್ಬರು ತಮಿಳು ನಟಿಯರು ಮುಂಬೈನ ಸೆಕ್ಸ್ ರಾಕೆಟ್ ಏಜೆಂಟ್ ಜೊತೆ ಸಂಪರ್ಕದಲ್ಲಿದ್ದರು. ಆ ಏಜೆಂಟ್ ಮೂಲಕ ವೇಶ್ಯಾವಾಟಿಕೆಗಾಗಿ ಥಾಣೆಗೆ ಬಂದಿದ್ದರು.

ಇಬ್ಬರು ನಟಿಯರು ಏಜೆಂಟರಿಂದ 2 ಲಕ್ಷ ರೂ. ಬೇಡಿಕೆಯಿಟ್ಟಿದ್ದರು.ಕೊನೆಗೆ 1, 80,000 ರೂ.ಗೆ ಡೀಲ್ ಕುದುರಿಸಿದ್ದರು‌.ಏಜೆಂಟ್ ಜೊತೆ ಡೀಲ್ ಮಾಡಿಕೊಂಡ ಬಳಿಕ ಇಬ್ಬರು ಥಾಣೆಯ ಪಚ್ಪಖಡಿ ಯಲ್ಲಿರುವ ನಟರಾಜ್ ಸೊಸೈಟಿಯ ಫ್ಲ್ಯಾಟ್ ಗೆ ನಿಗದಿತ ಸಮಯಕ್ಕೆ ಬಂದಿದ್ದರು.

ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಪೊಲೀಸರು ಫ್ಲ್ಯಾಟ್ ಮೇಲೆ ದಾಳಿ ನಡೆಸಿದ್ದು ಇಬ್ಬರು ನಟಿ ಯರು,ಫ್ಲ್ಯಾಟ್ ಮಾಲೀಕ,ಓರ್ವ ಪುರುಷ ಮತ್ತು ಓರ್ವ ಮಹಿಳಾ ಏಜೆಂಟರನ್ನು ಬಂಧಿಸಿದ್ದಾರೆ‌

ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.ಬಂಧಿತ ಇಬ್ಬರು ನಟಿಯರು ಪ್ರಮುಖ ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ.ಜೊತೆಗೆ ಬಾಲಿವುಡ್‌ ನ ಹಲವು ಚಿತ್ರ ಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿದ್ದಾರೆ.

ಟಿವಿ ಧಾರವಾಹಿಗಳಲ್ಲೂ ಕಾಣಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಐವರ ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಪಡಿ ಸಿಕೊಂಡಿದ್ದು ಅದರಲ್ಲಿ ಹಲವು ನಟಿಯರ ಫೋಟೋಗಳು ಕಂಡು ಬಂದಿವೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ


Google News

 

 

WhatsApp Group Join Now
Telegram Group Join Now
Suddi Sante Desk