ಧಾರವಾಡ –
ಹಿಂದೂಸ್ಥಾನಿ ಗಾಯಕ ಮಲ್ಲಿಕಾರ್ಜುನ ಮನಸೂರ್ ರ 32ನೇ ಪುಣ್ಯಸ್ಮರಣೆ ಆಚರಣೆ – ಮಲ್ಲಿಕಾರ್ಜುನ ಮನಸೂರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ…..ಮೇಯರ್,ಉಪಮೇಯರ್ ಗೆ ಸಾಥ್ ನೀಡಿದ ಪಾಲಿಕೆಯ ಅಧಿಕಾರಿಗಳಾದ ಅರವಿಂದ ಜಮಖಂಡಿ,ಶಂಕರಗೌಡ ಪಾಟೀಲ್,ಗಿರೀಶ್ ತಳವಾರ ಮತ್ತು ಟೀಮ್
ನಾಡು ಕಂಡ ಹಿರಿಯ ಸಂಗೀತ ಗಾಯಕರಲ್ಲಿ ಧಾರವಾಡದ ಮಲ್ಲಿಕಾರ್ಜುನ ಮನಸೂರ್ ಕೂಡಾ ಒಬ್ಬರಾಗಿದ್ದಾರೆ.ಇವರ 32ನೇ ಪುಣ್ಯಸ್ಮರ ಣೆಯನ್ನು ಧಾರವಾಡದಲ್ಲಿ ಆಚರಣೆ ಮಾಡ. ಲಾಯಿತು.
ಹೌದು ನಗರದ ಕಲಾಭವನದಲ್ಲಿರುವ ಮಲ್ಲಿಕಾರ್ಜುನ ಮನಸೂರ್ ಅವರ ಭಾವಚಿತ್ರಕ್ಕೆ ಪಾಲಿಕೆಯಿಂದ ವಿಶೇಷವಾದ ಗೌರವವನ್ನು ಸಲ್ಲಿಸಿ ಪುಣ್ಯಸ್ಮರಣೆಯನ್ನು ಆಚರಣೆ ಮಾಡ ಲಾಯಿತು.ಪಾಲಿಕೆಯ ಮೇಯರ್ ರಾಮಣ್ಣ ಬಡಿಗೇರ,ಉಪಮೇಯರ್ ದುರ್ಗಮ್ಮ ಬಿಜವಾಡ ಸೇರಿದಂತೆ ಪಾಲಿಕೆಯ ಅಧಿಕಾರಿಗಳು ಮಲ್ಲಿಕಾರ್ಜುನ ಮನಸೂರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವವನ್ನು ಸಲ್ಲಿಸಿ ನೆನೆದರು.
ಇದರೊಂದಿಗೆ 32ನೇ ಪುಣ್ಯ ಸ್ಮರಣೆಯ ದಿನ ದಿಂದ ದಿವಂಗತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವಿಸಲಾಯಿತು.ಒಬ್ಬ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ ಮಲ್ಲಿಕಾರ್ಜುನ ಮನ್ಸೂರ್ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕರಾಗಿದ್ದು ತಮ್ಮದೇ ಯಾದ ಗಾಯನದ ಮೂಲಕ ನಗರದ ಜಿಲ್ಲೆಯ ಹೆಸರನ್ನು ರಾಜ್ಯ ದೇಶದ ಮಟ್ಟದಲ್ಲಿ ಹೆಚ್ಚಿಸಿದ್ದಾರೆ ಅವರ ಸಾಧನೆ ದಾರಿ ನಮ್ಮೇಲ್ಲರಿಗೂ ಪ್ರೇರಣೆ ಎಂದು ಗಣ್ಯರು ಹೇಳಿದರು.
ಈ ಒಂದು ಸಂದರ್ಭದಲ್ಲಿ ಮೇಯರ್ ರಾಮಣ್ಣ ಬಡಿಗೇರ ಅವರೊಂದಿಗೆ ಉಪಮೇಯರ್ ದುರ್ಗಮ್ಮ ಬಿಜವಾಡ ಇವರೊಂದಿಗೆ ಪಾಲಿಕೆಯ ಅಧಿಕಾರಿಗಳಾದ ಶಂಕರಗೌಡ ಪಾಟೀಲ, ಅರವಿಂದ ಜಮಖಂಡಿ,ಗಿರೀಶ್ ತಳವಾರ ಸೇರಿದಂತೆ ಸಿಬ್ಬಂದಿಗಳ ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..