ಧಾರವಾಡ –
ಹಿಟ್ ಅಂಡ್ ರನ್ ಗೆ ಬೈಕ್ ಸವಾರನೊಬ್ಬ ಸಾವಿಗೀಡಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡ ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಹೆಬ್ಬಳ್ಳಿ ಗ್ರಾಮದ ತಿರ್ಲಾಪೂರ ರಸ್ತೆಯಲ್ಲಿ ಬೈಕ್ ಗೆ ಅಪರಿಚಿತ ವಾಹನವೊಂದು ಡಿಕ್ಕಿಯಾಗಿದೆ ಬೈಕ್ ಸವಾರ ರಸ್ತೆಯ ಪಕ್ಷದಲ್ಲಿ ಬಿದ್ದು ಕೂಡಲೇ ಅಲ್ಲೇ ಸಾವಿಗೀಡಾಗಿದ್ದಾನೆ.

ಸ್ಥಳದಲ್ಲೇ ಮೃತರಾಗಿದ್ದು ಶಾಹನೂರ ಶರೀಫ ಕೊಣ್ಣೂರ ಸಾವಿಗೀಡಾದ ಬೈಕ್ ಸವಾರನಾಗಿದ್ದಾನೆ. ಹೆಬ್ಬಳ್ಳಿ ಗ್ರಾಮದ ಯುವಕನಾಗಿದ್ದಾನೆ.ಯಾವುದೋ ಒಂದು ಅಪರಿಚಿತ ವಾಹನ ಬೈಕ್ ಗೆ ಡಿಕ್ಕಿಯಾಗಿದೆ ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಬೈಕ್ ನಿಂದ ಹೊಲದಲ್ಲಿ ಹೋಗಿ ಬಿದ್ದಿದ್ದಾರೆ.

ತಲೆಗೆ ಸಿಕ್ಕಾಪಟ್ಟಿ ಗಾಯವಾಗಿದ್ದು ಸ್ಥಳದಲ್ಲೇ ಶಾಹನೂರ ಸಾವಿಗೀಡಾಗಿದ್ದಾನೆ. ಇನ್ನೂ ವಿಷಯ ತಿಳಿದ ಗ್ರಾಮಸ್ಥರು ಧಾರವಾಡದ ಗ್ರಾಮೀಣ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಹೆಬ್ಬಳ್ಳಿಯ ಉಪ ಪೊಲೀಸ್ ಠಾಣೆಯ ಸಿಬ್ಬಂದಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.