ಪಶ್ಚಿಮ ಬಂಗಾಳ –
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಪ್ರಚಾರದ ಮಧ್ಯೆ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಹೋಳಿ ಆಚರಣೆ ಮಾಡಿದರು.
ಕಳೆದ ಒಂದು ವಾರದಿಂದ ಪಶ್ಚಿಮ ಬಂಗಾಳದಲ್ಲಿ ಚುನಾವಣೆಯ ಪ್ರಚಾರದಲ್ಲಿ ಬ್ಯೂಜಿಯಾಗಿರುವ ಅರವಿಂದ ಬೆಲ್ಲದ ಅವರು ಸಚಿವ ಅರವಿಂದ ಲಿಂಬಾವಳಿ ಮತ್ತು ಪಶ್ಚಿಮ ಬಂಗಾಳದ ಸ್ಥಳೀಯ ಪಕ್ಷದ ಮುಖಂಡರು ಕಾರ್ಯಕರ್ತರೊಂದಿಗೆ ಹೋಳಿ ಆಚರಣೆ ಮಾಡಿದರು.
ಹೋಳಿ ಆಚರಣೆ ಮಾಡುತ್ತಾ ಇದರೊಂದಿಗೆ ಚುನಾ ವಣೆ ಹಿನ್ನಲೆಯಲ್ಲಿ ಬರುಯಿಪುರ ಜಿಲ್ಲೆಯ ಐದು ಕ್ಷೇತ್ರದಲ್ಲಿ ಗೆಲವು ಸಾಧಿಸಲು ರೂಪುರೇಷಗಳ ನ್ನು ಸಿದ್ಧ ಪಡಿಸಿದರು.
ಅರಣ್ಯ ಸಚಿವರಾದ ಅರವಿಂದ ಲಿಂಬಾವಳಿ ಹಾಗೂ ಇನ್ನಿತರ ಮುಖಂಡರ ಜೊತೆ ಚರ್ಚಿಸಿ ಮುಂದಿನ ಒಂದು ವಾರದಲ್ಲಿ ಕೈಗೊಳ್ಳಬೇಕಾದ ಕಾರ್ಯ ತಂತ್ರದ ಬಗ್ಗೆ ವಿಸ್ತ್ರತವಾಗಿ ಚರ್ಚಿಸಿದರು.ನಂತರ ಪಕ್ಷದ ಮುಖಂಡರ ಜೊತೆ ಹೋಳಿ ಹಬ್ಬವನ್ನು ಸಾಂಕೇತಿಕವಾಗಿ ಆಚರಿಸಿ ಚುನಾವಣೆ ಮಧ್ಯೆಯೂ ಹೋಳಿ ಆಚರಣೆ ಮಾಡಿದರು.ಈ ಒಂದು ಸಂದರ್ಭದಲ್ಲಿ ಸಚಿವ ಅರವಿಂದ್ ಲಿಂಬಾವಳಿ, ಪಶ್ಚಿಮ ಬಂಗಾಲದ ಪಕ್ಷದ ಸ್ಥಳೀಯ ಮುಖಂಡರು ಕಾರ್ಯಕರ್ತರು ಹಾಗೇ ಬಸವರಾಜ ಸೇರಿದಂತೆ ಹಲವರು ಉಪಸ್ಥಿತರಿದ್ದರು