ಧಾರವಾಡದಕ್ಕೂ ಬ್ರಿಟನ್ ನಿಂದ ಆಗಮಿಸಿದ ಐವರು – ಐದು ಜನರಿಗೆ ಹೋಂ ಕ್ವಾರಂಟೈನ್ – ಜಿಲ್ಲಾಧಿಕಾರಿ ಮಾಹಿತಿ

Suddi Sante Desk

ಧಾರವಾಡ –

ಬ್ರಿಟನ್ ನಿಂದ ಧಾರವಾಡ ಜಿಲ್ಲೆಗೆ ಐದು ಜನ ಆಗಮಿಸಿದ್ದಾರೆ. ಜಿಲ್ಲೆಗೆ ಆಗಮಿಸಿದ ಐದು ಜನರಿಗೆ ಈಗಾಗಲೇ ಮನೆಯಲ್ಲಿಯೇ ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಹೇಳಿದ್ದಾರೆ.

ಪತ್ರಿಕಾ ಪ್ರಕಟಣೆಯ ಮೂಲಕ ಮಾಹಿತಿ ನೀಡಿದ ಜಿಲ್ಲಾಧಿಕಾರಿಯವರು ನಿನ್ನೆ ಡಿಸೆಂಬರ್ 21 ರವರೆಗೆ ಜಿಲ್ಲೆಗೆ ಐದು ಜನ ಆಗಮಿಸಿದ್ದಾರೆ. ಈ ಐದು ಜನರನ್ನು ಈಗಾಗಲೇ ಕ್ವಾರಂಟೈನ್ ಮಾಡಲಾಗಿದೆ ಎಂದರು. ಈ ಎಲ್ಲಾ ಐದು ಜನರ ಮೂಗು ಮತ್ತು ಗಂಟಲು ದ್ರವದ ಪ್ರಯೋಗಾಲಯ ಮಾದರಿಯನ್ನು ಆರ್ ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿದೆ.

ಇಂದು ರಾತ್ರಿ ಅವರೆಲ್ಲರ ತಪಾಸಣೆ ವರದಿಗಳು ದೊರೆಯಲಿವೆ. ಮುಂಜಾಗ್ರತಾ ಕ್ರಮವಾಗಿ ಈ ಐದು ಜನರನ್ನು ಹೋಂ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಅವರು ತಿಳಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.