ಧಾರವಾಡ –
ಕರೋನ ಮಹಾಮಾರಿಯನ್ನು ಕಟ್ಟಿಹಾಕಲು ಹಗಲು ರಾತ್ರಿ ಎನ್ನುತ್ತಾ ಕೆಲಸವನ್ನು ಮಾಡಿದ ವಾರಿಯರ್ಸ್ ಕಾರ್ಯ ದೊಂದಿಗೆ ಅವರ ಸೇವೆಯನ್ನು ಗುರುತಿಸಿ ಗೌರವಿಸುವ ಮಹಾನ್ ಕಾರ್ಯವನ್ನು ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಮಾಡತಾ ಇದ್ದಾರೆ.
ಈ ಒಂದು ನಿಟ್ಟಿನಲ್ಲಿ ಕಳೆದ ಒಂದು ವಾರದಿಂದ ಕ್ಷೇತ್ರದಲ್ಲಿ ಕರೋನ ವಾರಿಯರ್ಸ್ ರಾಗಿ ಕೆಲಸ ಮಾಡಿದವರನ್ನು ಗುರುತಿಸಿ ಅವರಿಗೆ ಪ್ರಶಂಸೆನಾ ಪತ್ರದೊಂದಿಗೆ ಪ್ರತಿಯೊಬ್ಬರಿಗೂ ಆರ್ಥಿಕ ನೆರವನ್ನು ನೀಡತಾ ಇದ್ದಾರೆ
ಮುಖ್ಯವಾಗಿ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆ ಯರು,ಗ್ರಾಮ ಪಂಚಾಯತ ಸಿಬ್ಬಂದಿ ವರ್ಗ,ನರ್ಸಿಂಗ್ ಸಿಬ್ಬಂದಿ ಕರೋನ ಕಾಳಜಿ ಕೇಂದ್ರ ದ ಸಿಬ್ಬಂದಿ ಗಳಿಗೆ ಹೀಗೆ ವಾರಿಯರ್ಸ್ ಆಗಿ ಕೆಲಸ ಮಾಡಿದವರಿಗೆ ಪ್ರಶಂಸನಾ ಪತ್ರದೊಂದಿಗೆ ಗೌರವಿ ಸಿದರು
ಕರೋನ ಸಮಯದಲ್ಲಿ ವಾರಿಯರ್ಸ್ ಆಗಿ ಕೆಲಸ ಮಾಡಿದ ಇವರುಗಳಿಗೆ ಶಾಸಕ ಅಮೃತ ದೇಸಾಯಿ ಅವರು ಗೆಳೆಯರ ಬಳಗದಿಂದ ಆರ್ಥಿಕ ಸಹಾಯದ 2000 ರೂಪಾಯಿ ನೆರವನ್ನು ನೀಡಿ ಇದರೊಂದಿಗೆ ಪ್ರಶಂಸನಾ ಪತ್ರ ವನ್ನು ನೀಡಿದ ಶಾಸಕರು ಅಭಿನಂ ದಿಸಿ ಗೌರವಿ ಸಿದರು.
ಇದರೊಂದಿಗೆ ತಮ್ಮ ಕ್ಷೇತ್ರದಲ್ಲಿ ಕಾರ್ಯವನ್ನು ಮಾಡಿದವರಿಗೆ ಅಭಿನಂದನೆ ಹೇಳಿ ಯಾಕೇ ಈ ಒಂದು ಕಾರ್ಯಕ್ರಮ ಹಾಗೆ ಆರ್ಥಿಕ ನೆರವು ಎಂಬು ದಕ್ಕೆ ಶಾಸಕ ಅಮೃತ ದೇಸಾಯಿ ಮಾತನಾಡಿ ನಿಮ್ಮ ಕೆಲಸ ಕಾರ್ಯಗಳಿಗೆ ಇದೊಂದು ಪ್ರಶಸ್ತಿ ಇದ್ದ ಹಾಗೇ ಎಂದು ಮಾರ್ಮಿಕವಾಗಿ ಮಾತನಾಡಿದರು.
ಬೇಲೂರು ಗ್ರಾಮದಲ್ಲಿ ನಡೆದ ಈ ಒಂದು ಕಾರ್ಯ ಕ್ರಮದಲ್ಲಿ ತಾಲ್ಲೂಕಿನ ಅಧಿಕಾರಿಗಳು ಸೇರಿದಂತೆ ಹಲವರು ಶಾಸಕರ ಈ ಒಂದು ಕಾರ್ಯಕ್ಕೆ ಸಾಥ್ ನೀಡಿದರು.ಇದರೊಂದಿಗೆ ತೆಗೂರ ಗ್ರಾಮದಲ್ಲೂ ಕೂಡಾ ಕರೋನ ವಾರಿಯರ್ಸ್ ಗೆ ಪ್ರಶಂಸನಾ ಪತ್ರವನ್ನು ಹಾಗೇ 2000 ರೂಪಾಯಿ ಆರ್ಥಿಕ ನೆರವನ್ನು ನೀಡಿ ಗೌರವಿಸಿದರು.ರಾಜ್ಯದಲ್ಲಿ ಯಾರು ಮಾಡಲಾರದ ಕೆಲಸ ಕಾರ್ಯವನ್ನು ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ನೇತೃತ್ವದಲ್ಲಿ ಅವರ ಗೆಳೆಯರ ಬಳಗದವರು ಮಾಡತಾ ಇದ್ದಾರೆ.ಕಾರ್ಯಕ್ರಮವನ್ನು ಶಿಕ್ಷಕ ಶಂಕರ ಗಟ್ಟಿ ನಿರೂಪಣೆ ಮಾಡಿದರು