This is the title of the web page
This is the title of the web page

Live Stream

[ytplayer id=’1198′]

November 2024
T F S S M T W
 123456
78910111213
14151617181920
21222324252627
282930  

| Latest Version 8.0.1 |

Local News

SSLC ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಗೆ ಸನ್ಮಾನ – ಹೆಬ್ಬಳ್ಳಿ ಗ್ರಾಮದಲ್ಲಿ ಬ್ರಹ್ಮಪುರಿ ಸಾಂಸ್ಕೃತಿಕ ಬಳಗ‌ ದಿಂದ ಸನ್ಮಾನಿಸಿ ಗೌರವ…..

WhatsApp Group Join Now
Telegram Group Join Now

ಧಾರವಾಡ –

ಎಸ್ ಎಸ್ ಎಲ್ ಸಿ ಪರೀಕ್ಷೆ ಧಾರವಾಡ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಧಾರವಾಡದ ಹೆಬ್ಬಳ್ಳಿ ಗ್ರಾಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ಹೌದು ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ 2021-22 ಸಾಲಿನಲ್ಲಿ ಎಸ್ ಎಸ್ ಎಲ್ ಸಿಯಲ್ಲಿ ಪ್ರಥಮ ಸ್ಥಾನ ಪಡೆದ ತಾಲೂಕಿನ ಗರಗ ಗ್ರಾಮದ ಕುಮಾರಿ ಸಹನಾ ಚ ಅಂಗಡಿ ಶಿಶುವಿನಹಳ್ಳಿಯ ಕಾಂತೇಶರಡ್ಡಿ‌ ಕಿರೇಸೂರ ಹೆಬ್ಬಳ್ಳಿ ಗ್ರಾಮದ ಅನ್ನಪೂರ್ಣ ಸಂಶಿ ತನುಶ್ರಿ ಬನ್ನಿಗಿಡದ ಕವಿತಾ ಹುಬ್ಬಳ್ಳಿ ರಮಜಾನಬಿ ದಸ್ತಗೀರ ಇವರುಗಳಿಗೆ ಬ್ರಹ್ಮಪುರಿ ಸಾಂಸ್ಕೃತಿಕ ಬಳಗ‌ ಹೆಬ್ಬಳ್ಳಿಯ ಆಶ್ರಯದಲ್ಲಿ ಸತ್ಕರಿಸಿ ಗೌರವಿಸಲಾಯಿತು, ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಧಾರವಾಡದ ಕರ್ನಾ ಟಕ ವಿದ್ಯಾವರ್ಧಕ ಸಂಘದ ಪ್ರದಾನ ಕಾರ್ಯದರ್ಶಿ ಶಂಕರ ಹಲಗತ್ತಿ ಇದೊಂದು ಅವಿಸ್ಮರಣೀಯ ಕಾರ್ಯ ಕ್ರಮ ಎಸ್ ಎಸ್ ಎಲ್ ಸಿಯಲ್ಲಿ 625 ಕ್ಕೆ 620 ಅಂಕಗ ಳನ್ನು ಧಾರವಾಡ ತಾಲೂಕಿನ ಮಕ್ಕಳು ಗಳಿಸಿರುವುದು ಅತ್ಯಂತ ದೊಡ್ಡ ಸಾಧನೆಯಾಗಿದೆ ನಿಮ್ಮ ಸಾಧನೆಯನ್ನು ಗುರುತಿಸಿ ನಿಮ್ಮ ಮುಂದಿನ ಶಿಕ್ಷಣ ಉಜ್ವಲವಾಗಲಿ ಅನ್ನುವ ಸದುದ್ದೇಶದಿಂದ ಹೆಬ್ಬಳ್ಳಿಯ ಬ್ರಹ್ಮಪುರಿ ಸಾಂಸ್ಕೃ ತಿಕ ಬಳಗ ನಿಮಗೆ ಗೌರವಿಸಿ ಹಾರೈಸಿರುವುದು ಈ ಬಳ ಗದ ಶೈಕ್ಷಣಿಕ ಕಳಕಳಿಯನ್ನು ಎತ್ತಿ ತೋರಿಸಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬಮ್ಮಕ್ಕನವರ ಮಾತನಾಡಿ ಶಿಕ್ಷಕ ವೃತ್ತಿ ಎಲ್ಲರಿಗೂ ಸಿಗುವುದಿಲ್ಲ ಈ ವೃತ್ತಿ ಪಡೆಯಲು ಪುಣ್ಯ ಮಾಡಿರಬೇಕು ಈ ಪವಿತ್ರ ಹುದ್ದೆಯಲ್ಲಿ ಬದಲಾದ ಈ ಸನ್ನಿವೇಶದಲ್ಲಿ ಮಕ್ಕಳಿಗೆ ತಿದ್ದುವ ಕಾರ್ಯವನ್ನು ಮನ ಸಾರೆ ಮಾಡಬೇಕು ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.

ಹೆಬ್ಬಳ್ಳಿ ಗ್ರಾಮದಲ್ಲಿ ಮನೆಪಾಠದ ಸಲುವಾಗಿ ಜನನಿ ಪ್ರತಿಷ್ಠಾನದ ವತಿಯಿಂದ ತಾಲೂಕಿನಲ್ಲಿ ಅತೀ ಹೆಚ್ಚು ಕಲಿಕಾ ಕೇಂದ್ರಗಳನ್ನು ಹೆಬ್ಬಳ್ಳಿ ಗ್ರಾಮದಲ್ಲಿ ತೆರೆಯಲಾಗಿದೆ ಅವುಗಳ ಸದುಪಯೋಗ ಪಡೆಯಬೇಕು ಎಂದು ಮಕ್ಕಳಿಗೆ ತಿಳಿಸಿದರು ಈ ದಿನ ಬ್ರಹ್ಮಪುರಿ ಸಾಂಸ್ಕೃತಿಕ ಬಳಗದವರು ಹಮ್ಮಿಕೊಂಡ ಈ ಕಾರ್ಯಕ್ರಮ ಈ ವರ್ಷದ SSLC ಮಕ್ಕ ಳಿಗೆ ಸತ್ಕರಿಸುವ ಮೊದಲ ಕಾರ್ಯಕ್ರಮ ಇದಾಗಿದೆ ಎಂದರು.ಸದ್ಯದಲ್ಲೇ ಹೊಸದಾಗಿ ಶಿಕ್ಷಕರ ನೇಮಕಾತಿ ಆಗಲಿದೆ ನಮ್ಮ ತಾಲ್ಲೂಕಿನಲ್ಲಿ ಕೊರತೆ ಇರುವ ಶಾಲೆಗಳಿಗೆ ಶಿಕ್ಷಕರನ್ನು ಭರ್ತಿ ಮಾಡಲಾಗುವುದು,ಜನಸಮುದಾಯ, ಶಿಕ್ಷಣದ ಪ್ರಗತಿಗಾಗಿ ಸಾಕಷ್ಟು ಸಹಕಾರ ಸಹಾಯ ಮಾಡಿದೆ ಎಂದರು.ಅಕ್ಷರತಾಯಿ ಲೂಸಿ ಸಾಲ್ಡಾನರವರು ಇದುವರೆಗೂ ಇಪ್ಪತ್ತು ಲಕ್ಷಕ್ಕೂ ಅಧಿಕ ಹಣವನ್ನು ದತ್ತಿ ನೀಡಿರುತ್ತಾರೆ.ಅವರ ದತ್ತಿಯಿಂದ ಪ್ರೇರಿತರಾದ ಶಿಕ್ಷಣ ಪ್ರೇಮಿಗಳು ಬಹುತೇಕ ಶಾಲೆಗಳಲ್ಲಿ ದತ್ತಿನಿಧಿ ಸ್ಥಾಪಿಸುತ್ತಿ ರುವುದು ಒಳ್ಳೆಯ ಬೆಳವಣಿಗೆ ಎಂದರು.ಶಾಲಾಭಿವೃದ್ದಿ ಸಮಿತಿಯ ಸದಸ್ಯ ಚಂದ್ರಶೇಖರ ಮಟ್ಟಿ ಮಾತನಾಡಿ
ಶಿಕ್ಷಣದ ಮೂಲ ಉದ್ದೇಶ ಕೇವಲ ಮಾರ್ಕ್ಸ್ ತೆಗೆದುಕೊಳ್ಳು ವುದಷ್ಟೆ ಅಲ್ಲ ಬದುಕಿನಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳು ವುದಾಗಿದೆ.ಇದು ಬದುಕಿನಲ್ಲಿ ಛಲ ಬೇಕು.ಮಕ್ಕಳಲ್ಲಿರುವ ಸಾಮರ್ಥ್ಯವನ್ನು ಗುರ್ತಿಸದಿದ್ದರೆ ಅದು ನಾಶವಾಗಿಬಿಡಬ ಹುದು.ಉದಾಹರಣೆಗೆ ಥಾಮಸ್ ಆಲ್ವಾ ಎಡಿಸನ್ ವಿಷಯದಲ್ಲಿ ವರ್ಗದ ಶಿಕ್ಷಕರಿಗೆ ಕಾಣಲಾರದ್ದು ತಾಯಿ ಶಿಕ್ಷಕಿ ತನ್ನ ಮಗುವಿನ ಸಾಮರ್ಥ್ಯವನ್ನು ಗುರ್ತಿಸದಿದ್ದರೆ ಇಂದು ನಮಗೆ ಬೆಳಕೆ ಸಿಗುತ್ತಿರಲಿಲ್ಲ ಎಂದು ಹೇಳಿದರು. ಬಡಮಕ್ಕಳಿಗಾಗಿ ದತ್ತಿ ಇಡುತ್ತಿರುವ ಮಹಾತಾಯಿ ಎಲ್ ಕೆ ಸಾಲ್ಡಾನ ರವರ ಮಕ್ಕಳ ಬಗ್ಗೆ ಇರುವ ಕಳಕಳಿ ಮರೆಯಲಾ ಗದು.ಇಂತಹ ಕಾರ್ಯಕ್ರಮಗಳು ಜರುಗಲು ಗ್ರಾಮದ ಜನರ ಸಹಕಾರ ಅತೀ ಅವಶ್ಯ.ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಸುರೇಶ ಇಟ್ನಾಳ ಅವರು ಶಾಲೆಗಳಿಗೆ ವಿಶೇಷವಾಗಿ ಅನುದಾನವಿ ಡಲು ಆದೇಶ ಮಾಡಿದಕ್ಕಾಗಿ ಕೃತಜ್ಞತೆಗಳನ್ನು ಸಲ್ಲಿಸಲಾ ಯಿತು ಮತ್ತು ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಯೂ ಸಹ ಶಾಲಾಬಿವೃದ್ದಿ ಸಮಿತಿಗೆ ಬೆಂಬಲಿಸಿದೆ.ಮತ್ತು ಗ್ರಾಮದ ಎಲ್ಲಾ ಶಿಕ್ಷಕರ ಶ್ರಮದಿಂದ ಇಂತಹ ಅಭೂತಪೂರ್ವ ಕಾರ್ಯಕ್ರಮಗಳು ಜರುಗುತ್ತಿವೆ ಶೈಕ್ಷಣಿಕ ಪ್ರಗತಿಯತ್ತ ನಮ್ಮ ಊರು ಮುಂದೆ ಸಾಗುತ್ತಿದೆ,ಎಂದರು ಶಾಲಾಭಿವೃದ್ದಿ ಸಮಿತಿಯ ಅದ್ಯಕ್ಷರಾದ ಇಮಾಮಸಾಬ ಕೊಣ್ಣೂರ,ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮ ದಲ್ಲಿ ಅಕ್ಷರತಾಯಿ ಲೂಸಿ ಸಾಲ್ಡಾನ,ಮಂಜುನಾಥ ವಾಸಂಬಿ ನಿಂಗಪ್ಪ ಮೊರಬದ ಸುಮಂಗಲಾ ಕೌದೆಣ್ಣವರ, ಎಲ್ ಐ ಲಕ್ಕಮ್ಮನವರ ಮಲ್ಲಿಕಾರ್ಜುನ ಉಪ್ಪಿನ,ಎಂ ಆರ್ ಪಾಲ್ತಿ ರಾಜೀವ ಹಲವಾಯಿ,ಮುಖ್ಯ ಶಿಕ್ಷಕಿ ಗೀತಾ ದೊಡಮನಿ,ರಾಮು ಭಜಂತ್ರಿ ವಿಜಯ ಅಣ್ಣಿಗೇರಿ,ಸಂಜು ಮೊರಬದ,ನಿಂಗಪ್ಪ ಹೊಂಗಲ ಅಮಿನಸಾಬ ದೊಡಮನಿ, ನಿರ್ಮಲ ದೇಸಾಯಿ,ರಜಿಯಾಬಾನು ಕೊಣ್ಣೂರ, ಬಸವ ರಾಜ ಮೂಗಪ್ಪ ಶಿವಳ್ಳಿ,ಭಕ್ಷು ದಸ್ತಗೀರ ಎಸ್ ಎಸ್ ಸಾಂಬ್ರಾಣಿ,ಚಂಪಾ ನರೇಗಲ್, ಸಿ ಡಿ ಬುಯ್ಯಾರ, ರಾಜೇ ಶ್ವರಿ ಕೊಡಬಾಳ ಎಸ್ ಆರ್ ದೇಸಾಯಿ ಎಸ್ ಎಸ್ ದಳವಾಯಿ,ಮುಂತಾದವರು ಇದ್ದರು,ಇದೇ ಸಂದರ್ಭದಲ್ಲಿ ಅಕ್ಷರತಾಯಿ ಲೂಸಿ ಸಾಲ್ಡಾನ ಇಪ್ಪತ್ತು ಸಾವಿರ ದತ್ತಿಯನ್ನು ಸರಕಾರಿ ಹಿರಿಯ ಪ್ರಾಥಮಿಕ ಜನತಾ ಪ್ಲಾಟ ಹೆಬ್ಬಳ್ಳಿ ಶಾಲೆಗೆ ನೀಡಿದರು.


Google News

 

 

WhatsApp Group Join Now
Telegram Group Join Now
Suddi Sante Desk