This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

State News

ಕುಕ್ಕರ್ ಬಾಂಬ್ ಶಂಕಿತ ಉಗ್ರನ ಭಯಾನಕ ಸ್ಟೋರಿ ಬ್ಲಾಸ್ಟ್ – ಪ್ರೇಮಕುಮಾರ ಅಂತಾ ಹೆಸರನ್ನಿಟ್ಟುಕೊಂಡಿರುವ ಖತರ್ನಾಕ್ ಶಾರೀಕ್ ಬಗ್ಗೆ ಭಯಾನಕ ಇತಿಹಾಸ ಹೇಗಿದೆ ನೋಡಿ

ಕುಕ್ಕರ್ ಬಾಂಬ್ ಶಂಕಿತ ಉಗ್ರನ ಭಯಾನಕ ಸ್ಟೋರಿ ಬ್ಲಾಸ್ಟ್ – ಪ್ರೇಮಕುಮಾರ ಅಂತಾ ಹೆಸರನ್ನಿಟ್ಟುಕೊಂಡಿರುವ ಖತರ್ನಾಕ್ ಶಾರೀಕ್ ಬಗ್ಗೆ ಭಯಾನಕ ಇತಿಹಾಸ ಹೇಗಿದೆ ನೋಡಿ
WhatsApp Group Join Now
Telegram Group Join Now

ಮಂಗಳೂರು –

ಮಂಗಳೂರಿನಲ್ಲಿ ಕುಕ್ಕರ್‌ನಲ್ಲಿ ಬಾಂಬ್ ಇಟ್ಟಿದ್ದ ಶಾರೀಕ್ ನ ಕರಾಳ ಮುಖದ ಕಥೆ ಕ್ಷಣಕ್ಕೊಂದು ಹೊರಗೆ ಬರುತ್ತಿದ್ದು ಪ್ರೇಮ ಕುಮಾರ ಅಂತಾ ಹೆಸರನ್ನಿಟ್ಟುಕೊಂಡಿದ್ದ ಖತರ್ನಾಕ್ ಶಾರೀಕ್ ಶಂಕಿತ ಉಗ್ರನ ಭಯಾನಕ ಹಿಸ್ಟರಿ ಕೇಳಿದಗೆ ಶಾಕ್ ಆಗುತ್ತದೆ.ಹೌದು ಸೂಕ್ಷ್ಮ ಪ್ರದೇಶವಾದ ಕರಾವಳಿಯಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ನಿಂದಾಗಿ ಮತ್ತೆ ಆತಂಕದ ವಾತಾವರಣ ಮನೆ ಮಾಡಿದ್ದು ಆಟೋ ಬಾಂಬ್ ಬ್ಲಾಸ್ಟ್ ಕಾರಣ ವಾಗಿದ್ದು ಆಟೋದಲ್ಲಿ ಕುಕ್ಕರ್ ಹಿಡಿದುಕೊಂಡು ಬಂದಿದ್ದ ಅಪರಿಚಿತನೊಬ್ಬ ಭಾರೀ ವಿಧ್ವಂಸಕ ಕೃತ್ಯ ಸೃಷ್ಟಿಮಾಡುವ ಪ್ಲಾನ್ ಮಾಡಿದ್ದ.

ಆದರೆ ಆತರ ಟಾರ್ಗೆಟ್  ಮಿಸ್ ಆಗಿ ದಾರಿ ಮಧ್ಯದಲ್ಲಿಯೇ ಕುಕ್ಕರ್ ಒಂದು ಸ್ಪೋಟಗೊಂ ಡಿತ್ತು ಅಂದಹಾಗೆ ಮೊದಲು ಅಂದೊಂದು ಆಕಸ್ಮಿಕ ಘಟನೆ ಅಂತ ಹೇಳಲಾಗಿತ್ತು. ಆದರೆ ಪೊಲೀಸರ ತನಿಖೆ ವೇಳೆ ಅದು ಉಗ್ರರ ಕೃತ್ಯ ಅನ್ನೋದು ಸಾಬೀತಾಗಿದ್ದು ಈ ಕೃತ್ಯ ನಡೆಸಿದ್ದವ ತನ್ನ ದಾಖಲೆಯಲ್ಲಿ ಪ್ರೇಮ್‌ಕುಮಾರ್ ಅಂತ ಹಾಕಿಕೊಂಡಿದ್ದ ಅಸಲಿಗೆ ಆತ ಪ್ರೇಮ್ ಕುಮಾರ್ ಆಗೇ ಇರಲಿಲ್ಲ ಅವನ ಅಸಲೀ ಹೆಸರೇ ಬೇರೆ ಯಾಗಿತ್ತು.

ಅಂದಹಾಗೆ ಅವನ ಹೆಸರು ಪ್ರೇಮ್‌ಕುಮಾರ್‌ ಅಲ್ಲ ಶಾರೀಕ್ ಹಾಗಿದ್ರೆ ಯಾರು ಈ ಶಾರೀಕ್ ಆತನ ಹಿನ್ನೆಲೆ ಏನು ಈ ಕುರಿತಂತೆ ನೋಡಿದರೆ ಶಾಕ್ ಆಗುತ್ತದೆ.ಶಂಕಿತ ಉಗ್ರ ಶಾರೀಕ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದವನು ಶಿವಮೊಗ್ಗದ ತೀರ್ಥಹಳ್ಳಿ ಸೊಪ್ಪಿನಗುಡ್ಡೆ ವಾಸಿ ತಂದೆ ಜೊತೆ ಬಟ್ಟೆ ಅಂಗಡಿ ನೋಡಿಕೊಳ್ತಿದ್ದ ತಂದೆ ಸಾವಿನ ಬಳಿಕ ಮಲತಾಯಿ ಜೊತೆಗಿದ್ದ ಶಂಕಿತ ಉಗ್ರರ ಪಟ್ಟಿಯಲ್ಲಿದ್ದ ಶಾರಿಕ್​​​​ ಖಾಕಿ ಹುಡುಕಾಡ್ತಿದ್ದಂತೆ ಕಣ್ಮರೆಯಾಗಿದ್ದ ಕೆಲವೊಂದು ಅಪರಾಧ ಕೃತ್ಯಗಳಲ್ಲಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ ಶಾರೀಕ್ ಆಗಸ್ಟ್ 15, 2022 ರ ಶಿವಮೊಗ್ಗ ಗಲಾಟೆ ಬಳಿಕ ಎಚ್ಚೆತ್ತುಕೊಂಡಿದ್ದ ಅಗಸ್ಟ್ 23ರ ಬಳಿಕ ಅಲ್ಲಿಂದ ಪರಾರಿಯಾಗಿದ್ದ.

ಈತ 2020ರಲ್ಲಿ ಮಂಗಳೂರಲ್ಲಿ ಲಷ್ಕರ್​​ಗೆ ಜೈಕಾರ ಗೋಡೆ ಮೇಲೆ ಬರಹ ಕೇಸ್​ನಲ್ಲಿ ಬಂಧನವಾಗಿ ಬಳಿಕ ರಿಲೀಸ್​ ಆಗಿದ್ದ. ಆಗಷ್ಟ್ 2022ರಲ್ಲಿ ಶಿವಮೊಗ್ಗದಲ್ಲಿ ಪ್ರೇಮ್​ಸಿಂಗ್​​ಗೆ ಚಾಕು ಶಾರಿಕ್​​ ಕೃತ್ಯ, ಕೈವಾಡ ಎಂದು ಖಾಕಿ ಘೋಷಿಸಿತ್ತು.ಸೆಪ್ಟೆಂಬರ್ 2022ರಲ್ಲಿ ಶಿವಮೊ ಗ್ಗದ ಹಲವೆಡೆ ಟ್ರಯಲ್​​ ಬ್ಲಾಸ್ಟ್ ಮಾಡಿದ್ದ ಕೃತ್ಯದಲ್ಲಿ ಈತ ಕೂಡ ಶಾಮೀಲಾಗಿದ್ದ ಈ ಘಟನೆಗೆ ಸಂಬಂಧಿಸಿದಂತೆ ಯಾಸಿನ್​ ಮಾಜ್​ ಎಂಬುವರ ಬಂಧನವಾಗಿತ್ತು.

ಈ ವೇಳೆ ಶಾರೀಕ್​ ಎಸ್ಕೇಪ್ ಆಗಿದ್ದ ಇನ್ನು ಇದೇ ಅಕ್ಟೋಬರ್ 2022ರಲ್ಲಿ ತಮಿಳುನಾಡಿನ ಕೊಯಮತ್ತೂರಲ್ಲಿ ನಡೆದ ಕಾರ್​ ಬ್ಲಾಸ್ಟ್​ನಲ್ಲೂ ಕೂಡ ಶಾರೀಕ್​ ಕೈವಾಡ ಇರೋ ಶಂಕೆ ವ್ಯಕ್ತವಾ ಗಿದೆ.ಶಾರಿಕ್​​ ಸಾಮಾನ್ಯದವ್ನಲ್ಲ ಅನ್ನೋದು ಗೊತ್ತಾಗಿದೆ.ಕುಕ್ಕರ್ ಬಾಂಬ್ ತಯಾರಿಸಿ ಐಸಿಸ್ ಮಾದರಿಯಲ್ಲೇ ಪೋಸ್​ ಕೊಟ್ಟಿದ್ದಾನೆ. ಇದನ್ನೆಲ್ಲಾ ಗಮನಿಸಿದ್ರೆ ಶಾರಿಕ್ ಐಸಿಸ್​ನಿಂದ ಪ್ರೇರಿತನಾ ಗಿದ್ದ ಅನ್ನೋದು ತಿಳಿದು ಬಂದಿದೆ. ಮತ್ತಷ್ಟು ಸ್ಫೋಟ ನಡೆಸೋಕೆ ಬೇಕಾದ ವಸ್ತುಗಳನ್ನ ಕೂಡಿಟ್ಟಿದ್ದ.

ಕುಕ್ಕರ್ ಬಾಂಬ್​ಗೆ ಪಾಸ್ಪರಸ್, ಸಲ್ಫರ್, ಪೊಟ್ಯಾಷಿಯಂ ನೈಟ್ರೇಟ್ ಬಳಸಿದ್ದ. ಆದರೆ ಬಾಂಬ್ ಸ್ಫೋಟಿಸಲು ತೆರಳುತ್ತಿದ್ದಾಗ ನಸೀಬು ಕೆಟ್ಟು ಕುಕ್ಕರ್ ಸ್ಫೋಟ ಸಂಭವಿಸಿದೆ ಅನ್ನೋದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.ಶಾರಿಕ್ ದೊಡ್ಟಮಟ್ಟದಲ್ಲಿ ವಿಧೃಂಸಕ ಕೃತ್ಯ ನಡೆಸೋಕೆ ಪ್ಲ್ಯಾನ್ ಮಾಡಿದ್ನಂತೆ. ಮೈಸೂರಿನಲ್ಲಿರೋ ಶಾರಿಕ್ ಬಾಡಿಗೆ ರೂಮ್​ನಲ್ಲಿ 5 ದೊಡ್ಡ ಚೀಲ ಗಳಷ್ಟು ಸ್ಫೋಟಕಗಳು ಸಿಕ್ಕಿವೆ.

ಸ್ಫೋಟಕಗಳನ್ನು ಪುಡಿ ಮಾಡಲು ಮಿಕ್ಸರ್ ಗ್ರೈಂಡರ್ ತಂದಿದ್ನಂತೆ. ಹಲವು ರಾಸಾಯನಿಕ ಪೌಡರ್, ಕಚ್ಚಾವಸ್ತು ತಂದಿದ್ನಂತೆ. ಸದ್ಯ ಎಲ್ಲಾ ವಸ್ತುಗಳನ್ನು ಸೀಲ್ ಮಾಡಿ ಜಪ್ತಿ ಮಾಡಲಾಗಿದೆ. ಕೊಠಡಿಯಲ್ಲಿ ಆರು ಟೇಬಲ್​ಗಳ ಮೇಲೆ ಸ್ಫೋಟಕ ವಸ್ತುಗಳನ್ನ ಪೊಲೀಸ್ರು ಜೋಡಿಸಿ ದ್ದಾರೆ. ಅದ್ರ ಮಾಹಿತಿ ಪಡೆಯಲು ಮೈಸೂರ್ ಕಮಿಷನರ್​ಗೆ ಅಲೋಕ್ ಕುಮಾರ್ ಬುಲಾವ್ ಕೊಟ್ಟಿದ್ದಾರೆ. ಸೀಝ್ ಮಾಡಿದ ವಸ್ತುಗಳನ್ನು ಮಂಗಳೂರಿಗೆ ತರಲಾಗಿದೆ.

ಶಾರಿಕ್​ ಮೈಸೂರಿನಲ್ಲಿ ಮೊಬೈಲ್​ ಟ್ರೈನಿಂಗ್ ಸೆಂಟರ್​ನಲ್ಲಿ ಕೆಲಸ ಮಾಡ್ತಿದ್ದ. ಅದ್ರ ಬಗ್ಗೆ ಮಾತಾಡಿರೋ ಮೊಬೈಲ್ ಟ್ರೈನಿಂಗ್ ಸೆಂಟರ್ ಮಾಲೀಕ, ಶಾರಿಕ್​ನನ್ನು ನಿಜವಾಗಲೂ ಹಿಂದೂ ಎಂದುಕೊಂಡಿದ್ವಿ. ಆತ ಮುಸ್ಲಿಂ ಅನ್ನೋ ಬಗ್ಗೆ ಎಲ್ಲೂ ಅನುಮಾನ ಬರಲೇ ಇಲ್ಲ ಎಂದಿದ್ದಾರೆ.

ಪಿಎಫ್​​ಐ ಸಂಘಟನೆ ನಿಷೇಧ,ರಾಜ್ಯದಲ್ಲಿ ಹಿಜಾಬ್ ಸಂಘರ್ಷ, ಬಿಜೆಪಿ, ಆರ್​​ಎಸ್​ಎಸ್​ ಪ್ರಾಬಲ್ಯಕ್ಕೆ ಸಾಕ್ಷಿಯಾಗಿರೋ ಮಂಗಳೂರನ್ನೇ ಉಗ್ರರು ಟಾರ್ಗೆಟ್ ಮಾಡಿಕೊಂಡಿದ್ರಂತೆ. ISIS ಜೊತೆ ಸಂಪರ್ಕ ಹೊಂದಿದ್ದ ಶಂಕಿತ ಉಗ್ರ ಶಾರೀಕ್​​​, ಕದ್ರಿ ಬಳಿಯ ಗೋಡೆ ಬರಹ ಬರೆದು ​​ ಅರೆಸ್ಟ್ ಆಗಿದ್ದ. ಮಂಗಳೂರಿನಲ್ಲಿ ಗೋಲಿಬಾರ್ ನಡೆದಿದ್ದಾಗಲೂ ಸ್ಥಳದಲ್ಲಿದ್ದ. ಇದೇ ಕಾರಣಕ್ಕೆ ಶಾರೀಕ್​​​ ಮಂಗಳೂರನ್ನು ಆಯ್ಕೆ ಮಾಡಿಕೊಂಡಿ ದ್ನಂತೆ.

ತನ್ನ ಹ್ಯಾಂಡ್ಲರ್​ಗಳ ಸೂಚನೆಯಂತೆ ಪಂಪ್​​​ವೆಲ್ ಬಳಿ ಸ್ಫೋಟಕ್ಕೆ ನಿರ್ಧರಿಸಿದ್ನಂತೆ. ಪ್ಲಾನ್ ಪ್ರಕಾರ ಸ್ಫೋಟ ಸಂಭವಿಸಿದ್ರೆ ದೊಡ್ಡ ಮಟ್ಟದ ಅನಾಹುತ ಸಂಭವಿಸ್ತಿತ್ತು.ಶಂಕಿತ ಶಾರಿಕ್ ಜೊತೆ ಸಂಪರ್ಕ ದಲ್ಲಿರೋ ಅಬ್ದುಲ್ ಮತೀನ್ ಅಹ್ಮದ್ ತಾಹಗೆ ಎನ್​ಐಎ ತಲಾಶ್ ನಡೆಸ್ತಿದೆ. ಮತಿನ್ ಎನ್‌ಐಎ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದಾನೆ. ಸುದ್ದಗುಂ ಟೆಪಾಳ್ಯದ NIA ಕೇಸ್​ನಲ್ಲಿ ತಾಹ A12 ಆರೋ ಪಿಯಾಗಿದ್ದು,ಸುದ್ದಗುಂಟೆಪಾಳ್ಯ ಮನೆ ಮೇಲೂ ಪೊಲೀಸರು ರೇಡ್​ ಮಾಡಿದ್ದಾರೆ. ತೀರ್ಥಹಳ್ಳಿಯ ಸೊಪ್ಪುಗುಡ್ಡೆ ಮೂಲದ ತಾಹ ಮೆಹಬೂಬ್ ಪಾಷಾ ಜೊತೆಗೂಡಿ ಉಗ್ರ ಕೃತ್ಯದಲ್ಲಿ ಭಾಗಿಯಾ ಗಿದ್ನಂತೆ. ಜತೆಗೆ ಮಂಗಳೂರು ಸ್ಫೋಟದಲ್ಲೂ ಮತಿನ್ ಹೆಸರು ತಳುಕು ಹಾಕಿಕೊಂಡಿದೆ.

ಸದ್ಯ ಪ್ರಕರಣದ ತನಿಖೆ ಚುರುಕುಗೊಂಡಿದೆ. ಹಲವು ರೀತಿಯಲ್ಲಿ ತನಿಖೆ ನಡೆಸಲಾಗ್ತಿದೆ. ಎನ್‌ಐಎ ಈ ಘಟನೆಯ ತನಿಖೆ ನಡೆಸುತ್ತಿದ್ದು, ಉಗ್ರರ ಜಾಡು ಹಿಡಿದು ಹೊರಟಿದ್ದು ಇನ್ನೂ ಎಲ್ಲೇಲ್ಲಿ ಈ ಒಂದು ಜಾಲ ವ್ಯಾಪಾಸಿದೆ ಎಂಬೊದು ಪೊಲೀಸರ ಈ ಒಂದು ತನಿಖೆ ಯಿಂದ ತಿಳಿದು ಬರಲಿದ್ದು ಒಟ್ಟಾರೆ ಈ ಒಂದು ಕುಕ್ಕರ್ ಬ್ಲಾಸ್ ಕರಾವಳಿ ಪ್ರದೇಶದಲ್ಲಂತೂ ದೊಡ್ಡದಾದ ಆತಂಕವನ್ನು ತಂದಿಟ್ಟಿದ್ದು ಪೊಲೀಸರಿಂದ ಇನ್ನಷ್ಟು ಮಾಹಿತಿ ತಿಳಿದು ಬರಲಿದೆ

ಚಕ್ರವರ್ತಿ ಜೊತೆ ಮಂಜುನಾಥ ಬಡಿಗೇರ ಸುದ್ದಿ ಸಂತೆ ನ್ಯೂಸ್


Google News

 

 

WhatsApp Group Join Now
Telegram Group Join Now
Suddi Sante Desk