ಧಾರವಾಡ-
ಕರೋನಾ ಮಹಾಮಾರಿಯಿಂದಾಗಿ ಸ್ಥಬ್ದಗೊಂಡಿಲ್ಲ ಎಲ್ಲಾ ಚಟುವಟಿಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಂತ ಹಂತವಾಗಿ ರಿಯಾಯಿತಿ ನೀಡುತ್ತಿದೆ. ಈಗಾಗಲೇ ಹತ್ತು ಹಲವಾರು ವಲಯಗಳಲ್ಲಿ ಸಡಿಲಿಕೆ ಮಾಡಿದ್ದು ನವಂಬರ್ 17 ರಿಂದ ಹಾಸ್ಟೇಲ್ ಆರಂಭಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಅತ್ತ ಸರ್ಕಾರ ಹಾಸ್ಟೇಲ್ ಆರಂಭಕ್ಕೇ ಅನುಮತಿ ನೀಡುತ್ತಿದ್ದಂತೆ ಇತ್ತ ಅಧಿಕಾರಿಗಳು ಸಿದ್ದತೆಯನ್ನು ಆರಂಭ ಮಾಡಿಕೊಂಡಿದ್ದಾರೆ. ಧಾರವಾಡ ಜಿಲ್ಲೆಯಲ್ಲೂ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಹಾಸ್ಟೇಲ್ ಆರಂಭಕ್ಕೇ ಈಗಾಗಲೇ ವಸತಿ ನಿಲಯಗಳಲ್ಲಿ ಎಲ್ಲಾ ವ್ಯವಸ್ಥೆಯೊಂದಿಗೆ ಸಿದ್ದತೆಗಳನ್ನು ಮಾಡಿಕೊಂಡಿದ್ದು ಈಗ ವಸತಿ ನಿಲಯಗಳಲ್ಲಿ ಕೆಲಸ ಮಾಡುವ ಸಿಬ್ಬಂದ್ದಿಗಳಿಗೆ ಕೊವೀಡ್ ಪರೀಕ್ಷೆಯೊಂದಿಗೆ ಆರೋಗ್ಯ ತಪಾಸಣೆಯನ್ನು ಮಾಡಿಸಿದರು

.ಈಗಾಗಲೇ 17 ರಿಂದ ಶಾಲಾ ಕಾಲೇಜುಗಳ ಆರಂಭಕ್ಕೇ ಸರ್ಕಾರಗಳು ಗ್ರೀನ್ ಸಿಗ್ನಲ್ ನೀಡಿದ್ದು ಹೀಗಾಗಿ ವಸತಿ ನಿಲಯಗಳಿಗೆ ಬರುವ ವಿದ್ಯಾರ್ಥಿಗಳ ವಾಸ್ತವ್ಯಕ್ಕೇ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಎಲ್ಲಾ ವ್ಯವಸ್ಥೆಯೊಂದಿಗೆ ಸಿದ್ದವಾಗಿದೆ. ಧಾರವಾಡ ಜಿಲ್ಲೆಯಲ್ಲಿ 13 ಹಾಸ್ಟೇಲ್ ಗಳಿದ್ದು ಸಧ್ಯ ಅಂತಿಮ ಪದವಿ ಮತ್ತು ಸ್ನಾತಕೊತ್ತರ ಪದವಿ ವಿದ್ಯಾರ್ಥಿಗಳಿಗೆ ಹಾಸ್ಟೇಲ್ ನಲ್ಲಿ ಉಳಿದುಕೊಳ್ಳಲು ಅವಕಾಶವಿದ್ದು ಜಿಲ್ಲೆಯಲ್ಲಿ ಒಟ್ಟು 896 ವಿದ್ಯಾರ್ಥಿಗಳ ವಸತಿಗೆ ಅವಕಾಶವಿದ್ದು ಸಧ್ಯ 500 ವಿದ್ಯಾರ್ಥಿಗಳು ಬರುವ ನೀರಿಕ್ಷೆಯಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿದ್ದಾರೆ.

ಇನ್ನೂ ಹಾಸ್ಟೇಲ್ ಆರಂಭವಾಗುವ ಹಿನ್ನಲೆಯಲ್ಲಿ ಅಲ್ಲಿ ಕೆಲಸ ಮಾಡುವ ಅಡುಗೆ ಮಾಡುವವರಿಗೆ ಮತ್ತು ಇನ್ನಿತರ ಎಲ್ಲಾ ಸಿಬ್ಬಂದ್ದಿಗಳಿಗೆ ಹಾಗೇ ಹಾಸ್ಟೇಲ್ ವಾರ್ಡನ್ ಗಳಿಗೆ ಕೋವಿಡ್ ಟೆಸ್ಟ್ ನೊಂದಿಗೆ ಇನ್ನಿತರ ಆರೋಗ್ಯ ಪರೀಕ್ಷೆಯನ್ನು ಮಾಡಿಸಲಾಯಿತು. ಧಾರವಾಡದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ಅತ್ತ ಹುಬ್ಬಳ್ಳಿಯಲ್ಲಿ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಲಾಯಿತು. ಮುಂಚಿತವಾಗಿ ಕೊವಿಡ್ ಟೆಸ್ಟ್ ನೊಂದಿಗೆ ಆರೋಗ್ಯ ಪರೀಕ್ಷೆ ಮಾಡಿಸಿ ವೈಧ್ಯಕೀಯ ಸಧೃಢತೆಯ ಪ್ರಮಾಣ ಪತ್ರವನ್ನು ನೀಡಲಾಯಿತು.

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎನ್ ಆರ್ ಪುರುಷೋತ್ತಮ ಈಗಾಗಲೇ ಎರಡು ಮೂರು ಸಭೆಗಳನ್ನು ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿಗಳೊಂದಿಗೆ ಮಾಡಿ ಎಲ್ಲಾ ಸಿದ್ದತೆಗಳನ್ನು ಪರಿಶೀಲನೆ ಮಾಡಿ ಈಗ ಮತ್ತೊಂದು ಹೆಜ್ಜೆ ಮುಂದಿಟ್ಟು ವಸತಿ ನಿಲಯಗಳಲ್ಲಿ ಕೆಲಸ ಮಾಡುವ ಎಲ್ಲಾ ಸಿಬ್ಬಂದ್ದಿಗಳಿಗೆ ಕರೋನಾ ಟೆಸ್ಟ್ ಮಾಡಿಸಿದರು. ಇನ್ನೂ ವಸತಿ ನಿಲಯಗಳಿಗೆ ಬರುವ ಎಲ್ಲಾ ವಿದ್ಯಾರ್ಥಿಗಳು ಬರುವಾಗಲೂ ಟೆಸ್ಟ್ ಮಾಡಿಸಿಕೊಂಡು ರಿಪೋರ್ಟ್ ನೊಂದಿಗೆ ಬರಬೇಕು ಎಂದು
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ಧೇಶಕರಾದ ಎನ್ ಆರ್ ಪುರುಷೋತ್ತಮ ಸುದ್ದಿ ಸಂತೆಗೆ ಹೇಳಿದ್ದಾರೆ.

ಈಮಧ್ಯೆ ವಸತಿ ನಿಲಯಗಳ ಸಿಬ್ಬಂದ್ದಿಗಳ ಕರೋನಾ ಟೆಸ್ಟ್ ಕಾರ್ಯಕ್ರಮದಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎನ್ ಆರ್ ಪುರುಷೋತ್ತಮ ಸಹಾಯಕ ನಿರ್ದೇಶಕರಾದ ಎಮ್ ಬಿ ಸಮೀರ್ ಸೇರಿದಂತೆ ಇಲಾಖೆಯ ಹಲವು ಸಿಬ್ಬಂದ್ದಿಗಳು ಉಪಸ್ಥಿತರಿದ್ದರು.
ಹುಬ್ಬಳ್ಳಿಯಲ್ಲಿ ಚಿಟಗುಪ್ಪಿ ಆಸ್ಪತ್ರೆ