ಧಾರವಾಡ –
ಮನೆಯ ಹಿತ್ತಿಲ ಬಾಗಿಲು ಮುರಿದು ಕಳ್ಳತನ ಮಾಡಿದ ಘಟನೆ ಧಾರವಾಡದ ಮಾರಡಗಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶಿವಲಿಂಗಪ್ಪ ಮೆಟ್ಟಿನ ಎಂಬುವರ ಮನೆಯಲ್ಲಿ ಕಳ್ಳತನವಾಗಿದೆ.

ನಿನ್ನೆ ತಡರಾತ್ರಿ ಈ ಒಂದು ಘಟನೆ ನಡೆದಿದೆ. ಮನೆಯಲ್ಲಿ ಎಲ್ಲರೂ ಇದ್ದ ಸಮಯದಲ್ಲಿ ಮನೆಯ ಹಿತ್ತಲ ಬಾಗಿಲು ಮುರಿದ ಖದೀಮರು ಮನೆಗೆ ಕನ್ನ ಹಾಕಿದ್ದಾರೆ. ಮನೆಯಲ್ಲಿನ ಮೂರೂವರೆ ತೊಲೆ ಬಂಗಾರ ಸೇರಿದಂತೆ ಹಲವಾರು ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ.

ಇನ್ನೂ ಕಳ್ಳತನದ ವಿಷಯ ತಿಳಿದ ಕೂಡಲೇ ಮೇಲ್ದರ್ಜೆಗೊಂಡ ಧಾರವಾಡ ಗ್ರಾಮೀಣ ಪೊಲೀಸ್ ಇನ್ಸ್ಪೆಕ್ಟರ್ ಶ್ರೀಧರ್ ಸತಾರೆ ಅವರು ತಮ್ಮ ಸಿಬ್ಬಂದಿ ಯೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಶ್ವಾನ ದಳದ ಟೀಮ್ ನೊಂದಿಗೆ ಪರಿಶೀಲನೆ ಮಾಡುತ್ತಿದ್ದಾರೆ. ಇನ್ಸ್ಪೆಕ್ಟರ್ ಅವರು ಈಗಷ್ಟೇ ಮೇಲ್ದರ್ಜೆಗೆ ಏರಿಕೆಯಾದ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ಎರಡು ದಿನಗಳ ಹಿಂದೆ ಇನ್ಸ್ಪೆಕ್ಟರ್ ಆಗಿ ಶ್ರೀಧರ್ ಸತಾರೆ ಅವರು ಹೊಸ ಅಧಿಕಾರ ವಹಿಸಿಕೊಂಡಿದ್ದು ಮೊದಲ ಕಳ್ಳತನ ಪ್ರಕರಣ ಇದಾಗಿದೆ.

ಸಧ್ಯ ಸಿಬ್ಬಂದಿ ಗಳಾದ ASI ಮಂಟೂರ ಸೇರಿದಂತೆ ಹಲವರೊಂದಿಗೆ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
