ಧಾರವಾಡ –
ಸಾಮಾನ್ಯವಾಗಿ ಎಲ್ಲಿಯಾದರೂ ಅಪಘಾತದರೆ ಯಾವುದೇ ಸಹಾಯವನ್ನು ಮಾಡದೇ ಥಟ್ ಅಂತಾ ಕೈಯಲ್ಲೊಂದು ಮೊಬೈಲ್ ಹಿಡಿದುಕೊಂಡು ಪೊಟೊ ವಿಡಿಯೋ ಮಾಡಿ ಸಿಕ್ಕ ಸಿಕ್ಕ ಗ್ರೂಪ್ ಗೆ ಶೇರ್ ಮಾಡೊದು ದೊಡ್ಡ ಕೆಲಸ.ಹೌದು ಇವೆಲ್ಲದರ ನಡುವೆ ಧಾರವಾಡದಲ್ಲೊಬ್ಬರು ಜೀವ ರಕ್ಷಕರೊಬ್ಬರಿದ್ದಾರೆ.

ಹೌದು ಧಾರವಾಡದ ನುಗ್ಗಿಕೇರಿ ಸುತ್ತ ಮುತ್ತ ಏನಾದರೂ ಅಪಘಾತಗಳಾದರೆ ಮೊದಲು ಸುದ್ದಿ ಮುಟ್ಟೊದು ಈ ಜೀವರಕ್ಷಕನಿಗೆ . ಏನೇ ಅಪಘಾತಗಳಾಗಲಿ ಸುದ್ದಿ ಬರುತ್ತಿದ್ದಂತೆ ಕ್ಷಣಾರ್ಧದಲ್ಲಿಯೇ ಸ್ಥಳಕ್ಕೇ ಹೋಗಿ ಮೊದಲು ಗಾಯಗೊಂಡವರನ್ನು ರಕ್ಷಣೆ ಮಾಡುತ್ತಾರೆ.

ಹೌದು ಪೇಡಾ ನಗರಿ ಧಾರವಾಡದಲ್ಲಿ ನಿನ್ನೇ ಬೆಳ್ಳಂ ಬೆಳಿಗ್ಗೆ ಜವರಾಯ ಅಟ್ಟಹಾಸಕ್ಕೆ 11 ಜನರು ಸಾವಿಗೀಡಾದ ಸಂಗತಿ ಗೊತ್ತಿರುವ ವಿಚಾರ. ಗೋವಾಗೆ ಸಂತೋಷ ಕೂಟ ಮಾಡಲು ಹೊರಟ್ಟಿದ್ದ 18 ಜನರಲ್ಲಿ ದಾವಣಗೆರೆಯ 11 ಜನರು ಅಸುನೀಗಿದ್ದಾರೆ.

ಇನ್ನು ಅಪಘಾತವಾದ ಸ್ಥಳಕ್ಕೆ ಭೇಟಿ ನೀಡಿದ್ದ ಆ ವ್ಯಕ್ತಿ ಕೆಲವರ ಜೀವ ಉಳಿಸಿ ದೇವರಾಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದವರನ್ನು ಆಸ್ಪತ್ರೆಗೆ ರವಾನಿಸಿ ಪ್ರಾಣ ಉಳಿಸಿದ್ದಾನೆ ಧಾರವಾಡದ ಈ ಜೀವರಕ್ಷಕ.

ಧಾರವಾಡದ ಇಟಿಗಟ್ಟಿ ಗ್ರಾಮದ ಬಳಿ ನಿನ್ನೇ ನಡೆದ ದೊಡ್ಡ ಅಪಘಾತದಲ್ಲಿ 11 ಅಪಘಾತದಲ್ಲಿ ಅಸುನೀಗಿದ್ದಾರೆ. ಒಂದು ಕಡೆ ಕುಟುಂಬಸ್ಥರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದರೆ ಇನ್ನೂ ಕೆಲವರು ಅಪಘಾತದಲ್ಲಿ ವ್ಯಕ್ತಿಯೋರ್ವನ ಸಮಯ ಪ್ರಜ್ಞೆಯಿಂದ ಬದುಕುಳಿದ್ದಾರೆ.

ಹೌದು ಹೆಸರು ನಿಂಗಪ್ಪ ರುದ್ರಪ್ಪ ಕೂಡವಕ್ಕಲಿಗರ ನುಗ್ಗಿಕೇರಿಯ ನಿವಾಸಿ ಇವರೇ ನಿನ್ನೆ ನಡೆದ ಅಪಘಾತದಲ್ಲಿ ಎಂಟು ಜನರ ಪಾಲಿಗೆ ದೇವರಾಗಿ ಬಂದು ಜೀವ ಉಳಿಸಿದ್ದಾರೆ ಈ ವ್ಯಕ್ತಿ.ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಟೆಂಪೊ ಮತ್ತ ರಸ್ತೆಯಲ್ಲಿ ಬಿದ್ದಿದ್ದ ಎಂಟು ಜನರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ರವಾನಿಸಿ ಜೀವದಾನ ಮಾಡಿದ್ದಾನೆ.
https://youtu.be/0BozH32r2BM
ಹೌದು ಸರಿಯಾಗಿ 6 ಘಂಟೆ ಹೊತ್ತಿಗೆ ಅಪಘಾತವಾಗಿದೆ. ಕೆಲ ನಿಮಿಷಗಳ ನಂತರ ನಿಂಗಪ್ಪರಿಗೆ ಮಾಹಿತಿ ಬಂದಿದೆ. ಮಾಹಿತಿ ಕಿವಿಗೆ ಬೀಳುತ್ತಿದ್ದಂತೆ ಇನ್ನೂ ಹಾಸಿಗೆಯಲ್ಲಿ ಮಲಗಿಕೊಂಡಿದ್ದ ನಿಂಗಪ್ಪ ಎದ್ದೊ ಬಿದ್ದೊ ಎನ್ನುತ್ತಾ ಸ್ಥಳಕ್ಕೆ ಹೋಗಿದ್ದಾರೆ. ಹೋಗಿ ನೋಡುತ್ತಲೆ ಘೋರ ದುರಂತವನ್ನು ನೋಡಿ ದಿಕ್ಕು ತೋಚದಂತಾಗಿ ಏನು ಮಾಡಬೇಕು ಎಂದುಕೊಂಡು ಸುಮ್ಮನೇ ಕುಳಿತುಕೊಳ್ಳದೇ ಮೊದಲು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾನೆ ನಿಂಗಪ್ಪ.

ನಂತರ ಬೇರೆಯವರಿಗೆ ಪೊನ್ ಕರೆ ಮಾಡಿ ಮನೆಯಲ್ಲಿದ್ದ ತಮ್ಮ ಟಾಟಾ ಸುಮೊ ವಾಹನವನ್ನು ತಗೆದುಕೊಂಡು ಬರಲು ಹೇಳಿದ್ದಾನೆ. ಒಂದು ಕಡೆ ತುರ್ತು ವಾಹನಕ್ಕೆ ಪೊನ್ ಮಾಡಿ ಮತ್ತೊಂದೆಡೆ ಅವರಿವರಿಗೆ ಪೊನ್ ಮಾಡಿ ಟೆಂಪೊದಲ್ಲಿ ಸಿಲುಕಿಕೊಂಡಿದ್ದ ನರಳಾಡುತ್ತಿದ್ದವರನ್ನು ಮೊದಲು ರಕ್ಷಣೆ ಮಾಡಿದ್ದಾನೆ. ದಪ್ಪ ಮಿಸೆ ಬಿಟ್ಟುಕೊಂಡು ನಿಂತಿರೋ ಈ ವ್ಯಕ್ತಿ ನಿಂಗಪ್ಪ ಅವರೇ ಅಪಘಾತದಲ್ಲಿ ಎಂಟು ಜನರ ಪ್ರಾಣ ಉಳಿಸಿದ ಪುಣ್ಯಾತ್ಮ.

ನಿಂಗಪ್ಪ ಕಳೆದ ಹಲವು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ಮೇಲೆ ಆಗುವ ಅಪಘಾತಗಳಲ್ಲಿ ಜನರನ್ನು ಉಳಿಸುವ ಕೆಲಸ ಮಾಡಿಕೊಂಡು ಬಂದಿದ್ದಾರೆ. ಹೆದ್ದಾರಿಯಲ್ಲಿ ಯಾವುದೇ ಅಪಘಾತ ಆದ್ರೆ ಸಾಕು ನಿಂಗಪ್ಪ ಅಲ್ಲಿ ಎಂಟ್ರಿ ಕೊಟ್ಟಿರ್ತಾನೆ. ಅಲ್ಲದೇ ಯಾರಾದರೂ ಅಪಘಾತಗಳನ್ನು ಕಂಡರೆ ಕೂಡಲೇ ನಿಂಗಪ್ಪನಿಗೆ ಸುದ್ದಿ ಮುಟ್ಟಿಸುತ್ತಾರೆ. ಹೀಗಾಗಿ ಎಂದಿನಂತೆ ನಿಂಗಪ್ಪನಿಗೆ ಅಪಘಾತದ ಮಾಹಿತಿ ಬಂದಿದೆ.

ಕೂಡಲೇ ನಿಂಗಪ್ಪ ಅಪಘಾತ ಸ್ಥಳಕ್ಕೆ ದೌಡಾಯಿಸಿದ್ದಾನೆ.ಆದ್ರೆ ಈ ಬಾರಿಯ ಅಪಘಾತ ನಿಂಗಪ್ಪನನ್ನೇ ಆಘಾತಗೊಳಿಸಿದೆ.ಧಾರವಾಡ ತಾಲೂಕಿನ ನುಗ್ಗಿಕೇರಿ ಗ್ರಾಮದ ನಿಂಗಪ್ಪ, ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಆಗಿರೋ 200 ಕ್ಕೂ ಹೆಚ್ಚು ಅಪಘಾತ ಪ್ರಕರಣಗಳಲ್ಲಿ 60 ಕ್ಕೂ ಹೆಚ್ಚು ಜನರ ಪ್ರಾಣ ಉಳಿಸಿದ್ದಾನೆ.

ಕಳೆದ 20 ವರುಷಗಳಿಂದ ಕೃಷಿಯೊಂದಿಗೆ ಇದನ್ನು ಮಾಡಿಕೊಂಡು ಬರುತ್ತಿದ್ದಾರೆ. ಗ್ರಾಮದ ಹತ್ತಿರವೇ ಇರುವ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಆಗದ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಪಘಾತಗಳು ಆಗುತ್ತಿವೆ.

ಹೀಗಾಗಿ ನಿಂಗಪ್ಪ ತನ್ನ ದೈನಂದಿನ ಕಾರ್ಯದ ಜೊತೆಗೆ ಸಮಾಜ ಸೇವೆ ಎಂದುಕೊಂಡು ತನ್ನದೇ ಕಾರಿನಲ್ಲಿ ಅಪಘಾತಕ್ಕೊಳಗಾದ ಜನರಿಗೆ ಸಹಾಯ ಮಾಡುತ್ತ ಮಾನವೀಯತೆ ಮೆರೆಯುತ್ತಿದ್ದಾನೆ. ಇನ್ನು ನಿಂಗಪ್ಪನ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ.

ಯಾವುದೇ ಅಪಘಾತದ ಸುದ್ದಿ ಮಾಹಿತಿ ಬರುತ್ತಿದ್ದಂತೆ ಕೂಡಲೇ ಸ್ಥಳಕ್ಕೇ ಹೋಗಿ ಪರಸ್ಥಿತಿಯನ್ನು ಅವಲೋಕನ ಮಾಡುತ್ತಾ ನಂತರ ತೀವ್ರವಾಗಿ ಗಾಯಗೊಂಡವರನ್ನು ಅವರಿವರ ಸಹಾಯ ಪಡೆದುಕೊಂಡು ಆಸ್ಪತ್ರೆಗೆ ಶಿಪ್ಟ್ ಮಾಡೊದೆ ದೊಡ್ಡ ಕೆಲಸ. ಹೀಗಾಗಿ ಈವರೆಗೆ ಸಾಕಷ್ಟು ಜನರ ಜೀವವನ್ನು ಉಳಿಸಿರುವ ನಿಂಗಪ್ಪ ನಿನ್ನೇ ಕೂಡಾ 8 ಜನರ ಜೀವವನ್ನು ಉಳಿಸಿದ್ದಾರೆ. ಹಿಂದೆ ಮುಂದೆ ನೋಡದೆ ಅಖಾಡಕ್ಕಿಳಿದು ಪೊಲೀಸರು ಬರುವ ಮುಂಚೆಯೇ ಸ್ಥಳಕ್ಕೇ ಬಂದು ತನ್ನ ವಾಹನದಲ್ಲಿಯೇ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡುತ್ತಾರೆ.

ಧಾರವಾಡದ ನುಗ್ಗಿಕೇರಿಯ ರಾಷ್ಟ್ರೀಯ ಹೆದ್ದಾರಿಯ ಜೀವರಕ್ಷಕವಾಗಿರುವ ಮೀಸೆ ನಿಂಗಪ್ಪ ಅವರು ಕಳೆದ 20 ವರುಷಗಳಿಂದ ನಿರಂತರವಾಗಿ ಈ ಒಂದು ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ. ಯಾರಿಂದಲೂ ಯಾವ ನಿರೀಕ್ಷೆಯನ್ನು ಮಾಡದೇ ತಮ್ಮ ಪಾಡಿಗೆ ಕಾಯಕವೇ ಕೈಲಾಸ ಎಂದುಕೊಂಡು ಈ ಒಂದು ಕೆಲಸವನ್ನು ನಿಂಗಪ್ಪ ಮಾಡುತ್ತಿದ್ದಾರೆ.
ನಿಂಗಪ್ಪನ ಈ ಕಾರ್ಯದಿಂದಾಗಿ ನೂರಾರು ಜನರ ಪ್ರಾಣ ಉಳಿಯುತ್ತಿದೆ. ಅಲ್ಲದೇ ನಿಂಗಪ್ಪನ ಸಾಮಾಜಿಕ ಕೆಲಸಕ್ಕೆ ಹಲವು ಪ್ರಶಸ್ತಿಗಳನ್ನು ನೀಡಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಅಭಿನಂದನೆ ಸಲ್ಲಿಸುತ್ತಲೇ ಬಂದಿದೆ. ನಿತ್ಯ ನಡೆಯುವ ಅಪಘಾತ ಪ್ರಕರಣಗಳನ್ನು ಕಂಡು ಕಾಣದಂತೆ ಹೋಗುವ ಜನರಲ್ಲಿ, ನಿಂಗಪ್ಪ ತನ್ನ ಕಾರಿನಲ್ಲಿಯೇ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿ ಜೀವ ಉಳಿಸುವ ಕೆಲಸ ಮಾಡುತ್ತಿರೋದು ಪ್ರಶಂಸನಾರ್ಹವೇ ಸರಿ.

ಪೊಲೀಸರೊಂದಿಗೆ ಸೇರಿಕೊಂಡು ಈ ಒಂದು ಸೇವೆಯನ್ನು ಮಾಡುತ್ತಿದ್ದು ಸೇವೆ ಮುಂದುವರೆಯಲಿ ಎಂಬುದು ಬದುಕುಳಿದವರ ಮತ್ತು ಇವರ ಸೇವೆ ಕೆಲಸವನ್ನು ನೋಡುತ್ತಿರುವವ ಆಶಯವಾಗಿದೆ.