ಹುಬ್ಬಳ್ಳಿ –
ಲಾಕ್ ಡೌನ್ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ವಿಮಾನ ಪ್ರಯಾಣ ಆನ್ ಲಾಕ್ ನಿರ್ದೇಶನದ ಮೇರೆಗೆ ಪ್ರಯಾಣ ಪ್ರಾರಂಭ ಮಾಡಿದ್ದು, ಹುಬ್ಬಳ್ಳಿಯ ವಿಮಾನ ನಿಲ್ದಾಣ ಈಗ ದೇಶದಲ್ಲಿಯೇ ಪ್ರಮುಖ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಸೇರಿದ್ದು,ದಕ್ಷಿಣ ವಲಯದ ವಿಮಾನ ನಿಲ್ದಾಣಗಳಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣ ಮೂರನೇ ಸ್ಥಾನದಲ್ಲಿದೆ.

ಹೌದು..ಸುಧಾರಣೆ ಎಂಬುವುದು ಮುಂದುವರಿದ ಪ್ರಕ್ರಿಯೆಯಾಗಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣ ಪ್ರಯಾಣಿಕರ ಸಂತೋಷಕ್ಕಾಗಿ ಬದ್ಧವಾಗಿದ್ದು, ಪ್ರಯಾಣಿಕರನ್ನು ನೋಡಿಕೊಳ್ಳಲು ಹಾಗೂ ಗುಣಮಟ್ಟದ ಸೇವೆಯನ್ನು ನೀಡುವಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣ ಜನಪ್ರಿಯತೆ ಪಡೆದಿದೆ.

ಇನ್ನೂ ಸಂತೃಪ್ತ ಗ್ರಾಹಕರ ಸರ್ವೆಯಲ್ಲಿ ಜುಲೈ – ಡಿಸೆಂಬರ್ 2020 ರ ಅವಧಿಯಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣ ದಕ್ಷಿಣ ವಲಯ ವಿಮಾನ ನಿಲ್ದಾಣಗಳಲ್ಲಿ 3 ನೇ ಸ್ಥಾನದಲ್ಲಿದೆ ಮತ್ತು ಭಾರತದಾದ್ಯಂತ 15 ನೇ ಸ್ಥಾನದಲ್ಲಿದೆ.

ಭಾರತದಲ್ಲಿ 56 ವಿಮಾನ ನಿಲ್ದಾಣಗಳೊಂದಿಗೆ ಸ್ಪರ್ಧಿಸಿದ ನಂತರ ಗ್ರಾಹಕ ತೃಪ್ತಿ ಸಮೀಕ್ಷೆ (ಸಿಎಸ್ಎಸ್) -2020. ವಿಮಾನ ನಿಲ್ದಾಣ ಪ್ರಾಧಿಕಾರಗಳು (ಎಎಐ) 2020 ರ ಜುಲೈ ಮತ್ತು ಡಿಸೆಂಬರ್ ನಡುವೆ ಪ್ರಯಾಣಿಕರೊಂದಿಗೆ ರೌಂಡ್- II ಸಮೀಕ್ಷೆಯನ್ನು ನಡೆಸಿತು.

ಒಟ್ಟಾರೆ ತೃಪ್ತಿ, ಪ್ರವೇಶ, ಪಾಸ್‌ಪೋರ್ಟ್ ನಿಯಂತ್ರಣ, ಭದ್ರತೆ, ಸೌಲಭ್ಯಗಳು, ಪರಿಸರ, ಸೇವೆಗಳು ಮತ್ತು ಪ್ರಯಾಣದ ವಿವರಗಳಂತಹ ಹಲವಾರು ನಿಯತಾಂಕಗಳಿಂದ ಹುಬ್ಬಳ್ಳಿ ವಿಮಾನ ನಿಲ್ದಾಣ ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ.

ಇನ್ನೂ ಈ ಕುರಿತು ಸುದ್ದಿ ಸಂತೆ ಮಾಹಿತಿ ನೀಡಿರುವ ಹುಬ್ಬಳ್ಳಿ ವಿಮಾನ ನಿಲ್ದಾಣದ ವ್ಯವಸ್ಥಾಪಕ ಪ್ರಮೋದ್ ಠಾಕ್ರೆ, ರಾಜ್ಯದಲ್ಲಿ ಗ್ರಾಹಕರಿಗೆ ಗುಣಮಟ್ಟದ ವಿಮಾನ ಸೇವೆ ನೀಡುವಲ್ಲಿ ಸಾಕಷ್ಟು ಯೋಜನೆಯನ್ನು ಸರ್ಕಾರದ ನಿರ್ದೇಶನದ ಮೇರೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಡಲಾಗಿದೆ. ಅಲ್ಲದೆ ಈ ಎಲ್ಲ ಅಭಿವೃದ್ಧಿಗೆ ಗ್ರಾಹಕರ ಬೆಂಬಲವೇ ಕಾರಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.