ಹುಬ್ಬಳ್ಳಿ ಧಾರವಾಡ –
ಹುಬ್ಬಳ್ಳಿ ಧಾರವಾಡ ಅವಳಿ ನಗರಗಳಲ್ಲಿ ಮಹಾ ನಗರ ಪಾಲಿಕೆ ಸಾರ್ವಜನಿಕರ ಅನುಕೂಲಕ್ಕಾಗಿ ಇಂದಿನಿಂದ ಬರೊಬ್ಬರಿ 67 ಕಡೆಗಳಲ್ಲಿ ಕೋವಿಡ್ ವ್ಯಾಕ್ಸಿನ್ ಕೇಂದ್ರಗಳನ್ನು ತೆರೆದಿದೆ.
ಹೌದು ದೊಡ್ಡ ಪ್ರಮಾಣದಲ್ಲಿ ಮಹಾನಗರ ಪಾಲಿಕೆ ಅವಳಿ ನಗರಗಳಲ್ಲಿ ಇಷ್ಟೋಂದು ವಾಕ್ಸಿನ್ ಕೇಂದ್ರ ಗಳನ್ನು ಸಾರ್ವಜನಿಕರಿಗಾಗಿ ತೆರೆದಿದೆ.ಇದೊಂದು ಅಭಿಯಾನದ ರೂಪದಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗಬಾರದು ಹಾಗೇ ಎಲ್ಲರಿಗೂ ವಾಕ್ಸಿನ್ ಸಿಗಲಿ ಎಂಬ ಒಂದೇ ಒಂದು ಕಾರಣಕ್ಕಾಗಿ ಜಿಲ್ಲಾಡಳಿತ ಹಾಗೇ ಆರೋಗ್ಯ ಇಲಾಖೆ ಇವರ ಸಹಯೋಗದೊಂದಿಗೆ ಪಾಲಿಕೆಯ ಆಯುಕ್ತರಾದ ಸುರೇಶ್ ಇಟ್ನಾಳ್ ಮತ್ತು ಪಾಲಿಕೆ ಯ ಎಲ್ಲಾ ಅಧಿಕಾರಿಗಳ ಪ್ರಯತ್ನದಿಂದಾಗ ಈ ಒಂದು ಕೇಂದ್ರಗಳನ್ನು ತೆರೆಯಲಾಗಿದೆ
ಇಂದಿನಿಂದ ಅವಳಿ ನಗರದಲ್ಲಿ ಕೇಂದ್ರಗಳು ಕಾರ್ಯವನ್ನು ಮಾಡಲಿದ್ದು ಸಾರ್ವಜನಿಕರು ಇದರ ಬಳಕೆಯನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.
ಸಾರ್ವಜನಿಕರಿಗೆ ಅನುಕೂಲ ಆಗಲೆಂದು ಬಹುತೇಕ ಪ್ರಮಾಣದಲ್ಲಿ ವಾರ್ಡ್ ಅಕ್ಕ ಪಕ್ಕದಲ್ಲಿ ಇಲ್ಲವೇ ಅವರ ಬಡಾವಣೆಗಳಲ್ಲಿ ಈ ಒಂದು ಕೇಂದ್ರಗಳನ್ನು ತೆರೆಯಲಾಗಿದೆ.ವಾಕ್ಸಿನ್ ತಗೆದುಕೊಳ್ಳಲು ಹೋಗು ವಾಗ ಆಧಾರ್ ಕಾರ್ಡ್ ಝರಾಕ್ಸ್ ಪ್ರತಿ ತೆಗೆದು ಕೊಂಡು ಹೋಗಿ