ಹುಬ್ಬಳ್ಳಿ ಧಾರವಾಡ –
ಹುಬ್ಬಳ್ಳಿ ಧಾರವಾಡದಲ್ಲಿ ಮನೆ ಮತ್ತು ಬೈಕ್ ಕಳ್ಳತನ ಮಾಡುತ್ತಿದ್ದ ಪ್ರಕರಣಗಳನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶ ನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಸಿಬಿ ಇನ್ಸ್ಪೆಕ್ಟರ್ ಅಧಿಕಾರಿಗಳಾದ ಭರತ್ ಎಸ್ ಆರ್ ಮತ್ತು ಅಲ್ಥಾಫ್ ಎಂ ಇವರ ನೇತ್ರತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧನ ಮಾಡಲಾಗಿದೆ.

ಇಬ್ಬರು ಆರೋಪಿಗಳಿಂದ ಬೈಕ್ ಮತ್ತು ಬಂಗಾರ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅನೀಲಕುಮಾರ ತಂದೆ ಮರಿಸಿದ್ದೇಗೌಡ , ಮೈಸೂರು ಸಧ್ಯ ಧಾರವಾಡದಲ್ಲಿ ವಾಸ್ತವ್ಯ, ಇನ್ನೂ ನಿಂಗಪ್ಪ ಯಲ್ಲಪ್ಪ ತಡಕೋಡ. ಧಾರವಾಡದ ನಾಗಲಾವಿ ಗ್ರಾಮದ ನಿವಾಸಿ ಇಬ್ಬರನ್ನು ಬಂಧಿಸಲಾಗಿದೆ.

110 ಗ್ರಾಂ ಬಂಗಾರದ ಆಭರಣ,2 ಕೆಜಿ ಬೆಳ್ಳಿ, 2 ಮೋಟಾರ್ ಸೈಕಲ್ ,5 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇನ್ನೂ ಈ ಒಂದು ಕಾರ್ಯಾಚರಣೆಯಲ್ಲಿ ಎ.ಎಸ್.ಐ ಶಿವಾಜಿ ಸಾಳುಂಕೆ, ಎಮ್ .ಎಚ್.ಶಿವರಾಜ ಪೊಲೀಸ್ ಸಿಬ್ಬಂದಿಗಳಾದ .ಎಸ್ ಪಿ.ಲಮಾಣಿ ರಾಜೀವ ಬಿಷ್ಟಂಡೇರ, ಎನ್.ಓ.ಜಾಧವ, ಎಮ್ ಎಸ್ ಚಿಕ್ಕಮಠ, ಪಿಸಿ ಸೋಗಿ,ಎನ್ ಐ ನೀಲಗಾರ, ಎನ್ ಎಸ್ ಬೊಗೂರ, ಆರ್ ಕೆ ಬಂಡಂಕರ್,ಸಿಪಿಸಿ ಡಿ ಎನ್ ಗುಂಡಗೈ,

ಎಸ್.ಎಚ್.ಕೆಂದೂಡಿ, ಅನಿಲ ಹುಗಿ, ಸಂತೋಷ ಇಚ್ಚಂಗಿ, ಆರ್.ಎಸ್ ಗುಂಬಳ, ವಿ.ಆರ್.ಮರಿಯಪ್ಪನವರ, ಬಿ ವಿ ಸನ್ನಪ್ಪನವರ. ಐ ಕೆ ಅತ್ತಾರ, ರವಿ ಗೋಮಪ್ಪನವರ, ಚಾಲಕ ಜಗದೀಶ ಪೂಜಾರ ಹಾಗೂ ಧಾರವಾಡ ಶಹರ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ಒಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.