ಹುಬ್ಬಳ್ಳಿ –
ಗಾಂಜಾ ಮಾರಾಟ ಮಾಡುತ್ತಿದ್ದ ಜಾಲವನ್ನು ಹುಬ್ಬಳ್ಳಿಯಲ್ಲಿ ಹುಬ್ಬಳ್ಳಿ ಧಾರವಾಡ ನಗರ ಆರ್ಥಿಕ ಅಪರಾಧ ಮತ್ತು ಆರ್ಥಿಕ ಮಾದ ವಸ್ತುಗಳ ಅಪರಾಧ ಪೊಲೀಸರು ಪತ್ತೆ ಮಾಡಿದ್ದಾರೆ. ನಗರದ ರಾಮನಗರದಲ್ಲಿ ಶಾಲೆಯೊಂದರ ಮುಂದೆ ನಿಂತುಕೊಂಡು ಮಾರಾಟ ಮಾಡುತ್ತಿದ್ದರು ಖಚಿತವಾದ ಮಾಹಿತಿಯನ್ನು ಪಡೆದುಕೊಂಡ ಪೊಲೀಸರು ಕಾರ್ಯಾಚರಣೆ ಮಾಡಿ ಜಾಲವನ್ನು ಭೇದಿಸಿದ್ದಾರೆ.ಅರ್ಧ ಕೆಜೆ ಗಾಂಜಾ ಮತ್ತು ಎರಡು ಮೊಬೈಲ್ ನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧನ ಮಾಡಲಾಗಿದೆ.

ಹರೀಶ್ ಚಂದ್ರಶೇಖರ್ ಚಲವಾದಿ ಮತ್ತು ನಿಖಿಲ್ ಪತಿಕೊಂಡ ಬಂಧಿತ ಆರೋಪಿಗಳಾಗಿದ್ದಾರೆ. ಇಬ್ಬರು ಹುಬ್ಬಳ್ಳಿಯ ನಿವಾಸಿಗಳಾಗಿದ್ದು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪೊಲೀಸ್ ಅಧಿಕಾರಿಗಳಾದ ಎಮ್ ಎಸ್ ಹೂಗಾರ ಮತ್ತು ಎಸ್ ಜಿ ಕಾನಟ್ಟಿ ಇವರ ನೇತ್ರತ್ವದಲ್ಲಿ ನಡೆದ ಈ ಒಂದು ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಎಮ್ ಎಸ್ ಕುರಹಟ್ಟಿ.ಸಿ ಎಮ್ ಕಂಬಾಳಿಮಠ, ಎಮ್ ಎಚ್ ಹಾಲಾವರ,ಸಿ ಎಮ್ ತಹಶೀಲ್ದಾರ,ಪಿ ಕೆ ಚಿಕ್ಕನಗೌಡರ,ಗಿರೀಶ್ ಬಡಿಗೇರ,ರವಿ ಕೋಳಿ, ಫಕಿರೇಶ ಸುಣಗಾರ,ಶ್ರೀಮತಿ ಜಯಶ್ರೀ ಚಲ್ಲೂರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.