ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ JDS ಅಭ್ಯರ್ಥಿಗಳ ಪಟ್ಟಿ ಪ್ರಕಟ…..

Suddi Sante Desk

ಧಾರವಾಡ –

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯ ವಿಚಾರ ಕುರಿತು BJP ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬೆನ್ನಲ್ಲೇ ಇತ್ತ JDS ಪಕ್ಷವೂ ಕೂಡಾ ಮೊದಲನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಹೌದು ಪಕ್ಷದ ಜಿಲ್ಲಾ ಅಧ್ಯಕ್ಷ ಗುರುರಾಜ ಹುಣಸಿಮರದ, ಮಾಜಿ ಶಾಸಕ ಎನ್ ಹೆಚ್ ಕೊನರಡ್ಡಿ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿನ ಒಟ್ಟು 82 ವಾರ್ಡಗಳಲ್ಲಿ ಪಕ್ಷದಿಂದ ಅಭ್ಯರ್ಥಿ ಗಳ‌ನ್ನು ಕಣಕ್ಕೆ ಇಳಿಸಲು ತೀರ್ಮಾನಿಸಲಾಗಿದ್ದು ಮೊದಲ ಹಂತದ 19 ಅಭ್ಯರ್ಥಿಗಳ ಪಟ್ಟಿಯನ್ನು ಧಾರವಾಡದಲ್ಲಿ ಬಿಡುಗಡೆ ಮಾಡಲಾಯಿತು

ಅತಿ‌ದೊಡ್ಡ ಮಹಾನಗರ ಪಾಲಿಕೆ ಇದಾಗಿದ್ದು ಜೆಡಿಎಸ್ ಪಕ್ಷದ ವತಿಯಿಂದ ಹು-ಧಾ ಮಹಾನಗರ ಅಧ್ಯಕ್ಷರಾದ ಗುರುರಾಜ ಹುಣಸಿಮರದ ಅವರೊ ಡನೆ ಜಂಟಿಯಾಗಿ ತಯಾರಿಸಿದ ಮೊದಲನೇಯ ಪಟ್ಟಿಯಲ್ಲಿ 19 ಅಭ್ಯರ್ಥಿಗಳನ್ನು ಅಂತಿಮ ಮಾಡಿ ಧಾರವಾಡದಲ್ಲಿ ಹು-ಧಾ ಮಹಾ ನಗರ ಅಧ್ಯಕ್ಷರೊ ಡನೆ ಜಂಟಿಯಾಗಿ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು.

ಧಾರವಾಡ 71 ನೇ ವಿಧಾನ ಸಭಾ ಕ್ಷೇತ್ರದಲ್ಲಿ, ಹಾಗೆ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 9 ವಾರ್ಡ್ ಗಳಿಗೆ ಪಕ್ಷದ ಅಭ್ಯರ್ಥಿ ಗಳನ್ನು ಘೋಷಣೆ ಮಾಡಲಾಗಿದೆ.

ಇನ್ನೂ ಇದರೊಂದಿಗೆ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರದಲ್ಲಿ 7 ವಾರ್ಡ್ ಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗಿದೆ

ಇದರೊಂದಿಗೆ ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನ ಸಭಾ ಕ್ಷೇತ್ರದಲ್ಲಿ ಎರಡು ವಾರ್ಡ್ ಗಳಿಗೂ ಹೆಸರನ್ನು ಘೋಷಣೆ ಮಾಡಲಾಗಿದೆ.ಒಟ್ಟಾರೆ ಅವಳಿ ನಗರದ ಒಟ್ಟು 82 ವಾರ್ಡ್ ಗಳಲ್ಲಿ 19 ವಾರ್ಡ್ ಗಳಿಗೆ ಹುರಿಯಾಳುಗಳನ್ನು ಘೋಷಣೆ ಮಾಡಲಾಗಿದೆ.

ಈ ಒಂದು ಸಮಯದಲ್ಲಿ ಗುರುರಾಜ ಹುಣಸಿ ಮರದ, ಎನ್ ಹೆಚ್ ಕೊನರಡ್ಡಿ, ರಾಜು ಅಂಬೊರೆ, ಸಚಿನ,ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.