ಹುಬ್ಬಳ್ಳಿ –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮರಿಚಿಕೆಯಾದ ಅಭಿವೃದ್ದಿ – ಅಧಿಕಾರಿಗಳಿಗೆ ಪೈಲ್ ಸಹಿ ಮಾಡಿಸಿಕೊಳ್ಳೊದು ಚಿಂತೆಯಾದ್ರೆ ಸದಸ್ಯರಿಗೆ ಅನುದಾನದ ಚಿಂತೆ……
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಅಭಿವೃದ್ದಿ ಎಂಬೊದು ಮರಿಚೀಕೆಯಾಗಿದೆ.ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರದಿಂದ ಸಾಕಷ್ಟು ಅನಧಾನ ಯೋಜನೆಗಳು ಬಂದರು ಕೂಡಾ ಹುಬ್ಬಳ್ಳಿ ಧಾರವಾಡ ಮಾತ್ರ ಸ್ವಚ್ಚ ಸುಂದರವಾಗುತ್ತಿಲ್ಲ ಎಲ್ಲಿ ನೋಡಿದಲ್ಲಿ ತೆಗ್ಗು ಬಿದ್ದ ರಸ್ತೆಗಳು ಧೂಳಿನಿಂದ ಕೂಡಿದ ರಸ್ತೆಗಳು ಅವಳಿ ನಗರವನ್ನು ಒಮ್ಮೆ ಸುತ್ತಾಡಿದರೆ ಸಾಕು ಎಲ್ಲಿಯೂ ಸುಂದರವಾದ ರಸ್ತೆಗಳು ಕಾಣೊದಿಲ್ಲ ಸಿಗೊದಿಲ್ಲ
ಇದರೊಂದಿಗೆ ಎಲ್ಲೇಂದರಲ್ಲಿ ಕಸ ಗಲೀಜು ಹೀಗೆ ಕಂಡು ಬರುತ್ತಿದೆ ಈ ಒಂದು ಕುರಿತಂತೆ ಗಮನ ಹರಿಸಬೇಕಾದ ಪಾಲಿಕೆಯ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಕೊಂಡು ತಾವು ಆಯಿತು ತಮ್ಮ ಕೆಲಸ ಆಯಿತು ಎನ್ನುತ್ತಿದ್ದಾರೆ.ಯಾರೂ ಕೂಡಾ ಹುಬ್ಬಳ್ಳಿ ಧಾರವಾಡ ಸ್ಚಚ್ಚ ಸುಂದರದ ಬಗ್ಗೆ ತಲೆ ಕೇಡಿಸಿಕೊಳ್ಳುತ್ತಿಲ್ಲ ಇನ್ನೂ ಹಿರಿಯ ಅಧಿಕಾರಿಗಳು ಆಯುಕ್ತರಿಂದ ಪೈಲ್ ಗಳಿಗೆ ಸಹಿ ಮಾಡಿಸಿಕೊಳ್ಳುವ ಚಿಂತೆ ಕೆಳ ಹಂತದ ಅಧಿಕಾರಿ ಗಳು ಸಿಬ್ಬಂದಿಗಳು ಒಂದಿಷ್ಟು ಗಮನಹರಿಸದರೆ ಮೇಲಾಧಿಕಾರಿಗಳಿಗೆ ಕಡತಗಳಿಗೆ ಸಹಿ ಮಾಡಿಸಿಕೊ ಳ್ಳೊದೆ ದೊಡ್ಡ ಚಿಂತೆಯಾಗಿದೆ.
ಇತ್ತ ಪಾಲಿಕೆಯ ಸದಸ್ಯರಿಗೆ ಅನುದಾನದ ಚಿಂತೆ ಯಾಗಿದೆ ಇವರು ಕೂಡಾ ಅಭಿವೃದ್ದಿಗಾಗಿ ಅನುದಾನ ತಗೆದುಕೊಂಡು ಬರುತ್ತಾರೆ ಆದರೆ ಹೇಗೆ ಬಳಸಬೇಕು ಹೇಗೆ ಅಭಿವೃದ್ದಿ ಕೆಲಸ ಕಾರ್ಯಗಳು ನಡೆಯುತ್ತಿವೆ ಎಂಬ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಹೀಗಾಗಿ ರಾಜ್ಯದ ಎರಡನೇಯ ದೊಡ್ಡ ಮಹಾನಗರ ಪಾಲಿಕೆಯಾಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಆಡಳಿತ ವ್ಯವಸ್ಥೆ ಹಳ್ಳ ಹಿಡಿದಿದೆ ಎಂಬೊದಕ್ಕೆ ಸಧ್ಯ ಪಾಲಿಕೆಯಲ್ಲಿ ಕಂಡು ಬರುತ್ತಿರುವ ವ್ಯವಸ್ಥೆಯೆ ಸಾಕ್ಷಿಯಾಗಿದೆ
ಹೊಸದಾಗಿ ಪಾಲಿಕೆಗೆ ಬಂದಿರುವ ಆಯುಕ್ತರು ಪಾಲಿಕೆಯ ಲೆಕ್ಕಪತ್ರ ವಿಭಾಗ,ವಲಯ ಕಚೇರಿಗಳು, ಯೋಜನಾ ವಿಭಾಗ, ಸೇರಿದಂತೆ ಎಲ್ಲಾ ವಿಭಾಗಗಳಿಗೆ ಸರ್ಜರಿ ಮಾಡಿ ಬಿಸಿ ಮುಟ್ಟಿಸಿ ಆಡಳಿತ ಯಂತ್ರವನ್ನು ಚುರುಕುಗೊಳಿಸಲಿ ಎಂಬೊದು ಸಾರ್ವಜನಿಕರ ಪಾಲಿಕೆಯ ಸದಸ್ಯರ ಗುತ್ತಿಗೆದಾರರ ಆಶಯವಾಗಿದ್ದು ಡಾ ರುದ್ರೇಶ ಘಾಳಿ ಯವರು ಏನು ಮಾಡ್ತಾರೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..