ಹುಬ್ಬಳ್ಳಿ ಧಾರವಾಡ –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ಗಳ ಪೈನಲ್ ಪಟ್ಟಿ ಸಲ್ಲಿಕೆಯಾಗಿದೆ.ಈ ಹಿಂದೆ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ವಾರ್ಡ್ ಗಳನ್ನು ಘೋಷಣೆ ಮಾಡಿ ಮೀಸಲಾತಿ ಯನ್ನು ಕೂಡಾ ಬಿಡುಗಡೆ ಮಾಡಲಾಗಿತ್ತು. ನಂತರ ಈ ಕುರಿತು ತಕರಾರು ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶವನ್ನು ನೀಡಲಾಗಿತ್ತು. ಸಧ್ಯ ಎಲ್ಲವೂ ಮುಗಿಸಿದ್ದು ಹೀಗಾಗಿ ಲಿಸ್ಟ್ ನ್ನು ಪೈನಲ್ ಮಾಡಿ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಲ್ಲಿಕೆ ಮಾಡಿದರು.
ಹೌದು ಈಗಾಗಲೇ ಹುಬ್ಬಳ್ಳಿ ಧಾರವಾಡ ದಲ್ಲಿ 82 ವಾರ್ಡ್ ಗಳನ್ನು ಮಾಡಲಾಗಿದೆ. ಜೊತೆಯಲ್ಲಿ ಮೀಸಲಾತಿ ಯನ್ನು ಕೂಡಾ ಬಿಡುಗಡೆ ಮಾಡ ಲಾಗಿದೆ.ಸಧ್ಯ ಎಲ್ಲವೂ ಅಂತಿಮವಾದ ಹಿನ್ನಲೆ ಯಲ್ಲಿ ವಾರ್ಡ್ ಗಳ ಪಟ್ಟಿ ಯನ್ನು ಸಲ್ಲಿಕೆ ಮಾಡಲಾಗಿದೆ
ಸರ್ಕಾರ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕೆ ಎಲ್ ಪ್ರಸಾದ್ ಇದಕ್ಕೆ ಅಂತಿಮ ಸ್ಪರ್ಶ ನೀಡಿ ಸಲ್ಲಿಕೆ ಮಾಡಿದರು.
ಚುನಾವಣೆ ಆಯೋಗ, ಬೆಳಗಾವಿಯ ಪ್ರಾದೇಶಿಕ ಆಯುಕ್ತರು, ಪೌರಾಡಳಿತ ನಿರ್ದೇಶಾಲಯ,ಹಾಗೂ ಧಾರವಾಡ ಜಿಲ್ಲಾಧಿಕಾರಿ, ಹಾಗೇ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಇವರಿಗೆ ಸಲ್ಲಿಕೆ ಮಾಡಿದ್ದಾರೆ.
ಇನ್ನೂ ಅವಳಿ ನಗರದಲ್ಲಿ ಈ ಹಿಂದೆ 67 ವಾರ್ಡ್ ಗಳಿದ್ದವು ಈಗ ಅವುಗಳನ್ನು 82 ವಾರ್ಡ್ ಗಳಿಗೆ ವಿಸ್ತರಣೆ ಮಾಡಲಾಗಿದೆ
ಸಧ್ಯ 82 ವಾರ್ಡ್ ಗಳೊಂದಿಗೆ ಮೀಸಲಾತಿ ಯನ್ನು ಕೂಡಾ ಪೈನಲ್ ಮಾಡಿ ಸಲ್ಲಿಕೆ ಮಾಡಲಾಗಿದೆ
ಸಧ್ಯ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪೈನಲ್ ಮಾಡಿ ಸಲ್ಲಿಕೆ ಮಾಡಿದ್ದು ಇನ್ನೇನಿದ್ದರೂ ಚುನಾವಣೆ ದಿನಾಂಕ ಅಷ್ಟೇ ಘೋಷಣೆ ಬಾಕಿ ಉಳಿದಿದ್ದು ಇದಕ್ಕೆ ಯಾವ ಗ್ರೀನ್ ಸಿಗ್ನಲ್ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕು