ಹುಬ್ಬಳ್ಳಿ –
ಹುಬ್ಬಳ್ಳಿ ಧಾರವಾಡ ನೂತನ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಶಶಿಕುಮಾರ್ – ಅಧಿಕಾರಿಗಳೊಂದಿಗೆ ನೂತನ ಪೊಲೀಸ್ ಆಯುಕ್ತರ ಸಭೆ
ಹುಬ್ಬಳ್ಳಿ ಧಾರವಾಡ ನೂತನ ಪೊಲೀಸ್ ಆಯುಕ್ತರಾಗಿ ಎನ್ ಶಶಿಕುಮಾರ್ ಅಧಿಕಾರ ವನ್ನು ವಹಿಸಿಕೊಂಡಿದ್ದಾರೆ.ಹೌದು ರಾಜ್ಯ ಸರ್ಕಾರ ಆದೇಶದ ಬೆನ್ನಲ್ಲೇ ಬೆಂಗಳೂರಿನಿಂದ ಆಗಮಿಸಿದ ನೂತನ ಪೊಲೀಸ್ ಆಯುಕ್ತರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾಗಿ ಅಧಿಕಾರ. ವನ್ನು ವಹಿಸಿಕೊಂಡರು.
ಕಚೇರಿಯಲ್ಲಿ ಅಧಿಕಾರವನ್ನು ವಹಿಸಿಕೊಳ್ಳುತ್ತಿ ದ್ದಂತೆ ಇತ್ತ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಪೊಲೀಸ್ ಇನ್ಸ್ ಪೆಕ್ಟರ್ ಗಳು ಸೇರಿದಂತೆ ಹಲವು ಅಧಿಕಾರಿಗಳು ಹೊಸ ಪೊಲೀಸ್ ಆಯುಕ್ತರನ್ನು ಸ್ವಾಗತಿಸಿಕೊಂ ಡರು.
ನಂತರ ಹುಬ್ಬಳ್ಳಿ ಧಾರವಾಡ ಎಲ್ಲಾ ಪೊಲೀಸ್ ಠಾಣೆಗಳ ಪೊಲೀಸ್ ಅಧಿಕಾರಿಗಳೊಂದಿಗೆ ನೂತನ ಪೊಲೀಸ್ ಆಯುಕ್ತರು ಸಭೆಯನ್ನು ಮಾಡಿದರು.ಅವಳಿ ನಗರದಲ್ಲಿ ಹೆಚ್ಚಾಗುತ್ತಿರುವ ಅಪರಾಧ ಚಟುವಟಿಕೆಗಳ ಕುರಿತಂತೆ ಮತ್ತು ಇತರೆ ಕೆಲವೊಂದಿಷ್ಟು ಅಕ್ರಮ ಚಟುವಟಿಕೆಗಳಿಗೆ ಯಾವುದೇ ಮುಲಾಜಿಲ್ಲದೇ ಕಡಿವಾಣವನ್ನು ಹಾಕುವಂತೆ ಖಡಕ್ ಸೂಚನೆಯನ್ನು ನೀಡಿದರು.
ಇದರೊಂದಿಗೆ ಹುಬ್ಬಳ್ಳಿ ಧಾರವಾಡ ಕಾನೂನು ಸುವ್ಯವಸ್ಥೆ ಡಿಸಿಪಿ ಯಾಗಿ ಮಹಾನಿಂಗ ಸಂಪಗಾವಿ ಯವರು ಕೂಡಾ ಅಧಿಕಾರ ವನ್ನು ವಹಿಸಿಕೊಂಡರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..