ಹುಬ್ಬಳ್ಳಿ ಧಾರವಾಡ –
ಹುಬ್ಬಳ್ಳಿ-ಧಾರವಾಡ ಕಮೀಷನರೇಟ್ ನಲ್ಲಿ ಜಾರಿಗೆ ತಂದ ಸ್ಮಾರ್ಟ್ ಬೀಟ್ ತಾರತಮ್ಯ ಮತ್ತು ಅವ್ಯವಸ್ಥೆಯನ್ನು ಸರಿಪಡಿಸಿ ನ್ಯೂನತೆಗಳನ್ನು ತಿದ್ದುಪಡಿ ಮಾಡುವಂತೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಸಿಬ್ಬಂದಿ ಮನವಿ ಮಾಡಿದ್ದಾರೆ
1 ರಾತ್ರಿ ಸ್ಮಾರ್ಟ್ ಬೀಟಗಳನ್ನು
ನ್ಯೂ ಬೀಟ್ ವ್ಯವಸ್ಥೆಯಂತೆ ಠಾಣೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಹಂಚಿಕೆ, ಉಸ್ತುವಾರಿ ಮಾಡಿಸುವುದು, ತಾರತಮ್ಯ ಸರಿಪಡಿಸಿಬೇಕು.
2 ಸ್ಮಾರ್ಟ್ ಬೀಟ್ ಸಿಬ್ಬಂದಿಯ ಸ್ವಂತ ಮೊಬೈಲ್ ಕಾರ್ಯವನ್ನು ಮಾಡಲಾಗುತ್ತದೆ, ಇಲಾಖೆಯಿಂದ ಮೊಬೈಲ್ ಪೂರೈಕೆ ಮಾಡಬೇಕು..?
3 ಸ್ಮಾರ್ಟ್ ಬೀಟ್ ಸಿಬ್ಬಂದಿಯ ಮೊಬೈಲ್ ಬಳಕೆಯಿಂದ Wi Fi, Bluetooth, Location, GPS ಗಳು ಎಲ್ಲವೂ ಚಾಲನೆಗೊಳ್ಳುವುದರಿಂದ ಸ್ವಂತ ಮೊಬೈಲ್ ದೌರ್ಬಲ್ಯ ಹೊಂದಿದರೆ, ಜವಾಬ್ದಾರರು ಯಾರು..?
4 ಸ್ಮಾರ್ಟ್ ಬೀಟ್ Single ಬೀಟ್ ನ್ನು ನೇಮಿಸಬೇಕು, Combined ಬೀಟ್ ನೇಮಿಸಿದರಿಂದ ದಕ್ಷತೆ ಕೊರತೆ ಉಂಟಾಗುತ್ತದೆ, ಕಾನೂನು ಸುವ್ಯವಸ್ಥೆಯನ್ನು ನಿಯಂತ್ರಣ ತರುವುದು ಅಸಾಧ್ಯ, ಕೇವಲ ಪಾಯಿಂಟ್ ಬುಕಗಳನ್ನು ಚೆಕ್ ಮಾಡುವುದು ಅಷ್ಟೇ ಸಾಧ್ಯವಾಗುತ್ತದೆ.
5 Combined ಬೀಟ್ ಮಾಡುವುದರಿಂದ Motor bike ಬಳಸಲೇ ಬೇಕಾಗುತ್ತದೆ, ಇಲಾಖೆ ಇಂಧನ ಪೂರೈಸುತ್ತದೆ..?
6 ಸ್ಮಾರ್ಟ್ ಬೀಟ್ ರಾತ್ರಿ 09:00 ರಿಂದ ಮರುದಿನ ಬೆಳಿಗ್ಗೆ 06:00 ಗಂಟೆವರೆಗೆ ಬೀಟ್ Punch ಮಾಡಿ 100% ಮಾಡಬೇಕು ಅಂತ ಅಧಿಕಾರಿಗಳು ದಿನಾಲೂ ಕಿರುಕುಳ ನೀಡುತ್ತಿದ್ದಾರೆ.
7 ರಾತ್ರಿ ನೈಟ್ ಬೀಟ್ ಮುಗಿಸಿ ಮಧ್ನಾಹ 02:00 ಗಂಟೆಗೆ ಕರ್ತವ್ಯ ನೇಮಿಸುತ್ತಾರೆ, ಸಿಬ್ಬಂದಿಗಳ ಆರೋಗ್ಯದಲ್ಲಿ ಏರುಪೇರು ಆಗಿದ್ದು, ಇದಕ್ಕೆ ಪರಿಹಾರ ಇಲ್ಲವೇ..?
8 ರಾಣೆಯಲ್ಲಿ Motor bike ಗಳನ್ನು ಅಧಿಕಾರಿಗಳು ಅನವಶ್ಯಕ ಸಿಬ್ಬಂದಿಗಳಿಗೆ ಹಂಚಿಕೆ ಮಾಡಿ ವಾಹನ ಮತ್ತು ಇಂಧನ ದುರುಪಯೋಗ ಪಡೆಯುತ್ತಿದ್ದಾರೆ, ನಿರ್ಭಯಾ ವಾಹನದ ಸರಿಯಾದ ಬಳಕೆ ಇಲ್ಲದೇ ದುರುಪಯೋಗ ನಡೆಯುತ್ತಿದೆ.
9 ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಗಳಿಗೆ 02 ಪಾಳಿಯಲ್ಲಿ ಕರ್ತವ್ಯ ನೇಮಿಸುತ್ತಿದ್ದು, ಅದನ್ನು 03 ಪಾಳಿ ಕರ್ತವ್ಯವನ್ನು ಜಾರಿಗೊಳಸಿ ಜೀವ ಮತ್ತು ಜೀವನ ನಡೆಸಲು ಅವಕಾಶ ಮತ್ತು ಆರೋಗ್ಯದಿಂದ ಕರ್ತವ್ಯ ನಿರ್ವಹಿಸಲು ವ್ಯವಸ್ಥೆ ಮಾಡಿಕೊಡಬೇಕು.
ಬದಲಾವಣೆ ನಿಮ್ಮಿಂದ ಬಯಸುವ
ನೊಂದ ಪೊಲೀಸ್ ಸಿಬ್ಬಂದಿಗಳು
ಹುಬ್ಬಳ್ಳಿ-ಧಾರವಾಡ ನಗರ