ಹುಬ್ಬಳ್ಳಿ ಧಾರವಾಡ –
ಮಳೆಯಿಂದ ಕೆರೆಯಾದ ರಸ್ತೆ ಹೇಳುವವರು ಇಲ್ಲ ಕೇಳುವವರು ಇಲ್ಲ…!

ಹೌದು ಹುಬ್ಬಳ್ಳಿ ಧಾರವಾಡ ದಲ್ಲಿ ಮಳೆ ಬಂದರೇ ಸಾಕು ರಸ್ತೆಗಳಲ್ಲ ಕೆರೆಯಂತಾಗುತ್ತವೆ.ಇದಕ್ಕೆ ಸಾಕ್ಷಿಯೆಂಬಂತೆ ಹುಬ್ಬಳ್ಳಿಯ ನವನಗರದ ಕ್ಯಾನ್ಸರ್ ಆಸ್ಪತ್ರೆಯ ಹತ್ತಿರದಲ್ಲಿ ಮಧ್ಯಾಹ್ನದ ವೇಳೆ ಸುರಿದ ಮಳೆಯಿಂದ ಸಂಪೂರ್ಣ ಜಲಾವೃತಗೊಂಡಿದ್ದು ವಾಹನ ಸವಾರರು ಪರದಾಡುವಂ ತಾಗಿದೆ.
ಹೌದು… ಇಲ್ಲಿ ಅವೈಜ್ಞಾನಿಕ ರೀತಿಯಲ್ಲಿ ರಸ್ತೆ ನಿರ್ಮಾಣ ಮಾಡಿದ್ದು ಮಳೆಯ ನೀರು ರಸ್ತೆಯಿಂದ ಹೊರಹೋಗದೇ ರಸ್ತೆಯಲ್ಲಿಯೇ ನಿಲ್ಲುವುದರಿಂದ ದ್ವಿಚಕ್ರ ವಾಹನ ಸವಾರರ ಗೋಳು ಹೇಳ ತೀರದಾಗಿದೆ. ಅಲ್ಲದೇ ಸ್ವಲ್ಪ ಪ್ರಮಾಣದಲ್ಲಿ ಮಳೆಯಾದರೂ ಕೂಡ ರಸ್ತೆಯಲ್ಲ ಕರೆಯಾಗಿ ಮಾರ್ಪಡು ವಂತಾಗಿದೆ.

ಈಗಾಗಲೇ ಬಿ.ಆರ್.ಟಿ.ಎಸ್ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಈ ಭಾಗದ ಜನರು ಧ್ವನಿ ಎತ್ತಿದ್ದು ಈಗ ಸ್ವತಃ ತಾವೇ ಸಮಸ್ಯೆ ಅನುಭವಿಸುವಂತಾಗಿದೆ.ಇನ್ನೂ ಈ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಕೂಡ ಯಾವುದೇ ಅಧಿಕಾರಿ ಗಳು ಕಾಳಜಿ ವಹಿಸದೇ ಇರುವುದು ನಿಜಕ್ಕೂ ಚಿಂತಾಜನಕ ಸಂಗತಿಯಾಗಿದೆ.ಇನ್ನೂ ಇತ್ತ ಧಾರವಾಡ ದಲ್ಲಿ ಇದೇ ರೀತಿ ಚಿತ್ರಣವಾಗಿದ್ದು ಜನರು ಪರದಾಡುವಂತಾಗಿದೆ.