ಹುಬ್ಬಳ್ಳಿ –
ಸದಾ ಉತ್ಸಾಹಿಯಾಗಿ ಏನಾದರೊಂದು ಕೆಲಸ ಕಾರ್ಯಗಳನ್ನು ಮಾಡುತ್ತಾ ಕಾರ್ಯನಿರ್ವಹಣೆ ಮಾಡುತ್ತಿದ್ದ ಹುಬ್ಬಳ್ಳಿ ಹೊಟೇಲ್ ಸಂಘ ಕಳೆದ ಏಳು ತಿಂಗಳಿನಿಂದ ಅನಾಥವಾಗಿದೆ. ಲಾಕ್ ಡೌನ್ ಮುಂಚೆ ಬೇರೆ ಬೇರೆ ಕಾರ್ಯಕ್ರಮಗಳನ್ನು ಮಾಡುತ್ತಾ ದೊಡ್ಡ ಪ್ರಮಾಣದಲ್ಲಿ ಹುಬ್ಬಳ್ಳಿಯಲ್ಲಿ ಯಾವಾಗಲೂ ಆಕ್ಟೀವ್ ಆಗಿ ಕಾರ್ಯಕ್ರಮವನ್ನು ಮಾಡಿ ನಂತರ ಈವರೆಗೆ ಹುಬ್ಬಳ್ಳಿಯ ಹೊಟೇಲ್ ಸಂಘದವರು ಯಾವುದೇ ಒಂದೇ ಒಂದು ಸಣ್ಣ ಕಾರ್ಯಕ್ರಮವನ್ನು ಮಾಡದೇ ಸುಮ್ಮನಿದ್ದಾರೆ.
ಸಂಘದ ಈ ಒಂದು ಸೈಲೆಂಟ್ ನಿರ್ಧಾರದಿಂದಾಗಿ ಸಂಘವನ್ನು ನಂಬಿಕೊಂಡಿರುವ 300 ಕ್ಕೂ ಹೆಚ್ಚು ಉತ್ಸಾಹಿ ಹೊಟೇಲ್ ಉದ್ಯಮದ ಸದಸ್ಯರು ಬೇಸರಗೊಂಡಿದ್ದಾರೆ. ಹುಬ್ಬಳ್ಳಿಯ ಹೊಟೇಲ್ ಸಂಘವೆಂದರೆ ಒಂದು ದೊಡ್ಡ ಇತಿಹಾಸವಿದೆ. ಸದಾ ಉತ್ಸಾಹಿಯಾಗಿ ಒಂದಿಲ್ಲೊಂದು ಕೆಲಸ ಕಾರ್ಯ ಗಳನ್ನು ಮಾಡಿಕೊಂಡು ರಾಜ್ಯಕ್ಕೆ ಮಾದರಿ ಯಾಗಿದ್ದ ಹುಬ್ಬಳ್ಳಿ ಹೊಟೇಲ್ ಸಂಘ ಕಳೆದ ಏಳು ತಿಂಗಳಿ ನಿಂದ ಯಾಕೇ ಹೀಂಗೆ ಆಗಿದೆ ಆಡಳಿತ ಮಂಡಳಿ ಇದ್ದರೂ ಕೂಡಾ ಯಾಕೇ ಎಲ್ಲರೂ ಸುಮ್ಮನೆ ಇದ್ದಾರೆ ಯಾತಕ್ಕಾಗಿ ಸುಮ್ಮನಿದ್ದಾರೆ ಹೀಗೆ ಹತ್ತು ಹಲವಾರು ಪ್ರಶ್ನೆಗಳು ಸಂಘವನ್ನು ನೆಚ್ಚಿಕೊಂಡಿ ರುವ ಎಲ್ಲಾ ಸದಸ್ಯರನ್ನು ಕಾಡುತ್ತಿದೆ. ಸಾಮಾನ್ಯ ವಾಗಿ ಯಾವುದೇ ಸಂಘವನ್ನು ರಚನೆ ಮಾಡಿರುವ ಉದ್ದೇಶ ಮುಖ್ಯವಾಗಿ ಸಂಘದ ಸದಸ್ಯರಿಗೆ ಯಾವುದಾದರೂ ಸಮಸ್ಯೆ ಆದರೆ ಇಲ್ಲವೇ ಬೇರೆ ರೀತಿಯಲ್ಲಿ ಸಹಾಯ ಸಹಕಾರ ಬೇಕಾದರೆ ಸಭೆ ಮಾಡಿ ಅವರಿಗೆ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಕೆಲಸವನ್ನು ಮಾಡಲಾಗುತ್ತಿದೆ. ಆದರೆ ಈ ಹಿಂದೆ ದೊಡ್ಡದಾದ ಒಂದು ಕಾರ್ಯಕ್ರಮವನ್ನು ಮುಗಿಸಿದ ನಂತರ ಕಳೆದ ಏಳೆಂಟು ತಿಂಗಳಿನಿಂದ ಸಂಘದಲ್ಲಿ ಮಾತ್ರ ಯಾವುದೇ ರೀತಿಯ ಚಟುವಟಿಕೆಗಳು ನಡೆಯುತ್ತಿಲ್ಲ.
ಸಂಘ ಇದೇನಾ ಇಲ್ಲ ಎಂಬ ಅನುಮಾನ ಕಾಡುತ್ತಿದೆ ಅಲ್ಲದೇ ಮುಖ್ಯವಾಗಿ ಆಡಳಿತ ಮಂಡಳಿ ಇದ್ದರೂ ಕೂಡಾ ಯಾಕೇ ಹೀಗೆ ಮಾಡತಾ ಇದ್ದಾರೆ ಯಾತಕ್ಕಾಗಿ ಸುಮ್ಮನಿದ್ದಾರೆ ಹೀಗೆ ಹತ್ತಾರು ಪ್ರಶ್ನೆಗಳನ್ನು ಕೇಳುತ್ತಿರುವ ಸದಸ್ಯರಿಗೆ ಉತ್ತರಿಸು ವವರೇ ಕೈಕಟ್ಟಿ ಸುಮ್ಮನೆ ಕುಳಿತಿದ್ದಾರೆ. ಹುಬ್ಬಳ್ಳಿ ಹೊಟೇಲ್ ಸಂಘದ ಅಧ್ಯಕ್ಷರಾಗಿ ಉತ್ಸಾಹಿ ಹೊಟೇಲ್ ಉದ್ಯಮಿ ಸುಕುಮಾರ ಶೆಟ್ಟಿ, ಉಪಾಧ್ಯಕ್ಷರಾಗಿ ರವಿ ಗಾಯತೊಂಡ ಇವರೊಂದಿಗೆ ಪ್ರಧಾನ ಕಾರ್ಯದರ್ಶಿ ಹೀಗೆ ಟೀಮ್ ಇದ್ದರೂ ಕೂಡಾ ಉತ್ಸಾಹಿಯಾಗಿದ್ದ ಈ ಒಂದು ಸಂಘಟನೆ ಸಂಘ ಯಾತಕ್ಕಾಗಿ ಸ್ಥಬ್ದಗೊಂಡಿದೆ ಹೊಟೇಲ್ ಸಂಘ ಅನಾಥಗೊಂಡಿದ್ದು ಯಾಕೇ ಇನ್ನಾದರೂ ಆಕ್ಟೀವ್ ಆಗುತ್ತದೆನಾ ಎಂಬುದನ್ನು ಕಾದು ನೋಡಬೇಕು.