ಹುಬ್ಬಳ್ಳಿ –
ಕುಂದಗೋಳದ ಅಂಚಟಗೇರಿ ಗ್ರಾಮದ ಚನ್ನಾಪೂರ ರಸ್ತೆಯ ಪಕ್ಕದಲ್ಲಿರುವ ಸರ್ಕಾರಿ ನೀಲಗಿರಿಯ ಅರಣ್ಯ ಪ್ರದೇಶದಲ್ಲಿ ಇಸ್ಪೀಟು ಆಡುತ್ತಿದ್ದ ಅಡ್ಡೆ ಮೇಲೆ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ದಾಳಿ ಮಾಡಿದ್ದಾರೆ.
ಅಂಚಟಗೇರಿ ಗ್ರಾಮಕ್ಕೆ ಹೊಂದಿಕೊಂಡಿರುವ ಈ ನೀಲಗಿರಿ ಅರಣ್ಯ ಪ್ರದೇಶದಲ್ಲಿ ಹುಬ್ಬಳ್ಳಿ ಸೇರಿದಂತೆ ಬೇರೆ ಬೇರೆ ಊರುಗಳಿಂದ ಬಂದು ಜೂಜಾಟ ಆಡುತ್ತಿದ್ದರು.
ಈ ಕುರಿತು ಮಾಹಿತಿ ಪಡೆದ ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರಮೇಶ ಗೋಕಾಕ ಪಿಎಸೈ ಪಾರ್ವತಿ ಎಸ್ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಿ ಇಸ್ಪೇಟು ಆಡುತ್ತಿದ್ದವರನ್ನು ಬಂಧಿಸಿದ್ದಾರೆ.
ಈ ಇಬ್ಬರು ಅಧಿಕಾರಿಗಳು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಇಸ್ಪೀಟು ಅಡ್ಡೆ ಮೇಲೆ ದಾಳಿ ಮಾಡಿದ್ದಾರೆ.ದಾಳಿಯ ಸಮಯದಲ್ಲಿ ಒಂಬತ್ತು ಜನರನ್ನು ಬಂಧಿಸಿ ಅವರಿಂದ 60500 ಹಣ 11 ಮೊಬೈಲ್ 5 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಹುಬ್ಬಳ್ಳಿಯ ಹೊರವಲಯದ ಅಂಚಟಗೇರಿ ಗ್ರಾಮದ ಬಳಿ ಇರುವ ನೀಲಗಿರಿ ಅರಣ್ಯ ಪ್ರದೇಶದಲ್ಲಿ ಅಂದರ್ ಬಾಹರ್ ಅಡುತ್ತಿದ್ದರು.
ಬಸವರಾಜ ದುರುಗಪ್ಪ ಗುಂಜಳ್ಳಿ, ಮಂಜುನಾಥ ಹಿರೇಮಠ, ಯೇಸುದಾಸ್ ವಳಗುಂದಿ, ಅರ್ಜುನ ಖಾಲಿಗಾಡಿ, ಉಮೇಶ ಧರಣಿ, ವಿಶಾಲ್ ಹನುಮಸಾಗರ, ಕೃಷ್ಣಾ ದಲಬಂಜನ್, ಚಂದನ ನಾಯಕ, ನೀಲಪ್ಪ ಭಗವತಿ ಬಂಧಿತರಾಗಿದ್ದಾರೆ.
ಬಂಧಿತರೆಲ್ಲರೂ ಹುಬ್ಬಳ್ಳಿಯ ನಿವಾಸಿಗಳಾಗಿದ್ದು ಇವರನ್ನು ವಶಕ್ಕೇ ತಗಹೆದುಕೊಂಡಿರುವ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ತನಿಖೆ ಮಾಡ್ತಾ ಇದ್ದಾರೆ.
ಜಿಲ್ಲೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ
ನಡೆದ ಈ ಒಂದು ದಾಳಿ ಗ್ರಾಮೀಣ ಠಾಣೆಯ ಇನ್ಸ್ಪೆಕ್ಟರ್ ರಮೇಶ ಗೋಕಾಕ, ಪಿಎಸೈ ಪಾರ್ವತಿ ಹಾಗೂ ಸಿಬ್ಬಂದ್ದಿಗಳಾದ ಡೇವಿಡ್ ,
ನಾರಾಯಣ ಹಿರಿಹೋಳಿ,ಎಂ ಎಫ್ ವಾಲೀಕರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.