ಹುಬ್ಬಳ್ಳಿ –
ವಿಕೇಂಡ್ ಕರ್ಫ್ಯೂನ ಕರ್ತವ್ಯದ ನಡುವೆಯೂ ಕೂಡಾ ಹುಬ್ಬಳ್ಳಿಯಲ್ಲಿ ಪೊಲೀಸರು ಮಾನವೀಯತೆಯನ್ನು ಮೆರೆದಿದ್ದಾರೆ.ಹೌದು ನಗರದ ಚನ್ನಮ್ಮ ವೃತ್ತದಲ್ಲಿ ಹುಬ್ಬಳ್ಳಿ ಯ ಪೊಲೀಸರು ಮಾನವೀಯತೆಯ ಕೆಲಸವನ್ನು ಮಾಡಿ ಮೆಚ್ಚುಗೆ ಪಡೆದುಕೊಂಡಿದ್ದಾರೆ.
ಮೂರ್ಛೆರೋಗದಿಂದ ಕುಸಿದು ಬಿದ್ದಿದ್ದ ಯುವಕನಿಗೆ ಕೂಡಲೇ ಕರ್ತವ್ಯದ ಮೇಲಿದ್ದ ಪೊಲೀಸರು ಚಿಕಿತ್ಸೆಯನ್ನು ನೀಡಿ ಕಳಿಸಿಕೊಟ್ಟರು.ನಗರದ ಚೆನ್ನಮ್ಮ ವೃತ್ತದ ಬಳಿ ಕುಸಿದು ಬಿದ್ದ ಯುವಕ ಕುಂದಾಪುರ ಮೂಲದ ನಾಗರಾಜ ಮೂರ್ಛೆ ರೋಗದಿಂದ ಬಿದ್ದಿದ್ದ ಯುವಕನಿಗೆ ಚಿಕಿತ್ಸೆ ನೀಡಿ ಕಳಿಸಿಕೊಟ್ಟರು.
ಸ್ಥಳದಲ್ಲಿದ್ದ ಪೊಲೀಸರಿಂದ ಯುವಕನಿಗೆ ಸಹಾಯ ಮಾಡಿ ದರು.ಯುವಕನಿಗೆ ಕೀ ಕೊಟ್ಟು,ಕೈ ಉಜ್ಜಿ ಪ್ರಥಮ ಚಿಕಿತ್ಸೆ ನೀಡಿದ ಪೊಲೀಸರು ಕಳಿಸಿಕೊಟ್ಟರು.
ಹುಬ್ಬಳ್ಳಿಯ ಉಪನಗರ ಪೊಲೀಸ್ ಸಿಬ್ಬಂದಿಯಿಂದ ಮಾನವೀಯ ಕಾರ್ಯ ಕಂಡು ಬಂದಿತು.ಪೊಲೀಸರ ಮಾನವೀಯ ಕಾರ್ಯಕ್ಕೆ ಸ್ಥಳೀಯರ ಮೆಚ್ಚುಗೆ ವ್ಯಕ್ತವಾಗಿದೆ.