ಧಾರವಾಡ –
ಬೈಕ್ ಸವಾರೊಬ್ಬನಿಗೆ ವಾಹನವೊಂದು ಹಿಟ್ ಅಂಡ್ ರನ್ ಮಾಡಿದ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡದ ಮರಾಠಾ ಕಾಲೊನಿಯ ಮುಖ್ಯ ರಸ್ತೆಯಲ್ಲಿ ಈ ಒಂದು ಅಪಘಾತ ನಡೆದಿದೆ. ಅಪಘಾತ ಮಾಡಿ ವಾಹನವೊಂದು ಪರಾರಿಯಾಗಿದೆ.
ಇನ್ನೂ ರಸ್ತೆಯಲ್ಲಿ ಬೈಕ್ ಸವಾರ ಬಿದ್ದಿದನ್ನು ನೋಡಿದ ಸಾರ್ವಜನಿಕರು ಅಪಘಾತಕ್ಕಿಡಾದ ಯುವಕನ ರಕ್ಷಣೆಗೆ ಮುಂದಾದರು. ಬರೊಬ್ಬರಿ ಒಂದು ಘಂಟೆಗಳ ಕಾಲ 108 ಗೆ ಕರೆ ಮಾಡಿದ್ದಾರೆ. ಇವರ ಕರೆಗೆ ಯಾರೂ ಕೂಡಾ ಸ್ಪಂದಿಸಿಲ್ಲ.

ರಸ್ತೆ ಮಧ್ಯದಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಯುವಕನ ರಕ್ಷಣೆಗೆ ಯುವಕರು ಸಾರ್ವಜನಿಕರು ಪರದಾಡಿದರು. 108 ನಿಂದ ಹಿಡಿದು ಎಲ್ಲರಿಗೂ ಕರೆ ಮಾಡಿದರು ಯಾರೂ ಕೂಡಾ ಸ್ಪಂದಿಸಲಿಲ್ಲವಂತೆ.
ಕೊನೆಗೂ ಬಿಡದೇ ಕರೆ ಮಾಡಿ ಮಾಡಿ 108 ಕರೆಸಲಾಯಿತು. ಸ್ಥಳಕ್ಕೆ ಅಂಬ್ಯೂಲೆನ್ಸ್ ಆಗಮಿಸಿತು. ಮಮ್ಮಿಗಟ್ಟಿ ಗ್ರಾಮದ ಮಂಜುನಾಥ ಜಿ ಮಳ್ಳೂರ ಎಂಬ ಯುವಕನಿಗೆ ಅಪಘಾತವಾಗಿದೆ. ಅಪಘಾತದಲ್ಲಿ ತಲೆಗೆ ತೀವ್ರವಾದ ಪೆಟ್ಟು ಬಿದ್ದಿದ್ದು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಯಿತು.ಸ್ಥಳದಲ್ಲೇ ಇದ್ದ ಅಶೋಕ ಕನ್ನೂರ ,ಹಂಸರಾಜ ತೇಗೂರ,ಮನೋಹರ ಯಾವಗಲ್ಲ್, ತನ್ವೀರ್ ಹುಸೇನ್ ,ಮೆಕಾನಿಕ್ ರಾಜು ಸೇರಿದಂತೆ ಹಲವು ಯುವಕರು ರಸ್ತೆಯಲ್ಲಿ ಬಿದ್ದಿದ್ದ ಮಂಜುನಾಥನನ್ನು ಆಸ್ಪತ್ರೆಗೆ ಸೇರಿಸಿದರು. ಇತ್ತ ಧಾರವಾಡ ಸಂಚಾರಿ ಪೊಲೀಸರು ಆಗಮಿಸಿ ಪರಿಶೀಲನೆ ಮಾಡಿ ಮಾಹಿತಿಯನ್ನು ಪಡೆದುಕೊಂಡರು.ಒಟ್ಟಾರೆ ಧಾರವಾಡದ ಯುವಕರು ಅಪಘಾತವನ್ನು ನೋಡಿ ಸುಮ್ಮನೇ ಹೋಗದೇ ಮಾನವೀಯತೆ ಮೆರೆದಿದ್ದಾರೆ .