ಹುಬ್ಬಳ್ಳಿ –
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ದ ಸದಸ್ಯತ್ವಕ್ಕೆ ರಾಜೀನಾಮೆಯನ್ನು ನೀಡಿ ನೂರಾ ರು ಜನ ಶಿಕ್ಷಕರು ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯತ್ವವನ್ನು ಪಡೆದುಕೊಂಡಿ ದ್ದಾರೆ.
ನೂರಾರು ಶಿಕ್ಷಕರು. ಹೌದು ಸವದತ್ತಿ ತಾಲ್ಲೂಕಿನ ನೂರಾರು ಶಿಕ್ಷಕರು ಆ ಒಂದು ಸಂಘಟನೆಗೆ ರಾಜೀ ನಾಮೆಯನ್ನು ನೀಡಿ ಹಾಗೇ ಸದಸ್ಯತ್ವ ಹಣವನ್ನು ಯಾವುದೇ ಕಾರಣಕ್ಕೂ ಕಟಾವಣೆಯನ್ನು ಮಾಡ ದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿಯನ್ನು ನೀಡಿದರು.
ಸವದತ್ತಿಯ ಬಿಇಒ ಗೆ ಮನವಿ ನೀಡಿ.ಅತ್ತ ಆ ಒಂದು ಸಂಘಟನೆಗೆ ಸದಸ್ಯತ್ವ ಬೇಡವೆಂದು ಮನವಿ ನೀಡಿದರು ಇತ್ತ ಗ್ರಾಮೀಣ ಶಿಕ್ಷಕರ ಸಂಘ ಟನೆಗೆ ಸದಸ್ಯತ್ವವನ್ನು ಶಿಕ್ಷಕರು ಸಾಮೂಹಿಕವಾಗಿ ಸದಸ್ಯತ್ವವನ್ನು ಪಡೆದುಕೊಂಡರು.ಸವದತ್ತಿ ತಾಲ್ಲೂ ಕಿನಲ್ಲಿಯೇ ಒಂದೇ ದಿನ ನೂರಕ್ಕೂ ಹೆಚ್ಚು ಶಿಕ್ಷಕರು ಸದಸ್ಯತ್ವವನ್ನು ಪಡೆದುಕೊಂಡು ಗ್ರಾಮೀಣ ಶಿಕ್ಷಕರ ಸಂಘಟನೆಗೆ ಜೈ ಎಂದರು.ಇದೇ ವೇಳೆ ಪ್ರತಿ ವರ್ಷ 200 ರೂಪಾಯಿ ಸದಸ್ಯತ್ವವನ್ನು ಕಟಾವಣೆ ಮಾಡಿ ಕೊಳ್ಳುವ ಕುರಿತಂತೆ ಈವರುಷ ಯಾವುದೇ ಕಾರಣ ಕ್ಕೂ ಮಾಡಿಕೊಳ್ಳದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ನೀಡಿದರು.
ಹಿರಿಯ ಶಿಕ್ಷಕ ಸಂಗಮೇಶ ಖನ್ನಿನಾಯ್ಕರ್ ನೇತ್ರತ್ವ ದಲ್ಲಿ ನೂರಾರು ಶಿಕ್ಷಕರು ಈ ಒಂದು ಸಮಯದಲ್ಲಿ ಪಾಲ್ಗೊಂಡು ಮನವಿ ನೀಡಿ ನಂತರ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯತ್ವವನ್ನು ಪಡೆದೂಕೊಂಡರು.