ಧಾರವಾಡ –
ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಿಕ್ಷಕರ ಸಮಸ್ಯೆಗಳ ಮನವಿ ಮತ್ತು ಅಸಮ್ಮತಿ ಪತ್ರ ಸಲ್ಲಿಕೆ ಹ
ೌದು ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ್
ಬೊಮ್ಮಕ್ಕನವರ ಅವರಿಗೆ ಗುರು ತಿಗಡಿ ಅಧ್ಯಕ್ಷರ ನೇತೃತ್ವದಲ್ಲಿ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ಗ್ರಾಮೀಣ ಶಿಕ್ಷಕರ ಸಂಘದ ಪದಾಧಿಕಾರಿಗಳ ನಿಯೋ
ಗವು ಭೇಟಿ ಮಾಡಿ ಶಿಕ್ಷಕರ ಸಮಸ್ಯೆಗಳನ್ನು ಸುಧೀರ್ಘ
ವಾಗಿ ಚರ್ಚಿಸಿ ಮನವಿಯನ್ನು ಮತ್ತು KSPSTA ಶಿಕ್ಷಕರ ಸಂಘದ ಸದಸ್ಯತ್ವ ಶುಲ್ಕ 200. ರೂಗಳನ್ನು ವೇತನದಲ್ಲಿ ಕಟಾವಣೆ ಮಾಡದಿರಲು ಅಸಮ್ಮತಿ ಪತ್ರಗಳನ್ನು ನೀಡಲಾಯಿತ
ು
ಚರ್ಚಿಸಿದ ಅಂಶಗಳು
👉 ಶಿಕ್ಷಕರಿಗೆ ಗುರು ಸ್ಪಂದನ ಕಾರ್ಯಕ್ರಮ ಏರ್ಪಡಿಸಿ ಸೇವಾ ಪುಸ್ತಕವನ್ನು ವೀಕ್ಷಿಸಲು ಅವಕಾಶ ನೀಡುವುದು.
👉 ಕೋವಿಡ್ ನಿಮಿತ್ಯ 2020 ಮತ್ತು 2021ರ ಬೇಸಿಗೆ ರಜೆಯಲ್ಲಿ ವಿವಿಧ ಕಾರ್ಯನಿರ್ವಹಿಸಿದ ಶಿಕ್ಷಕರಿಗೆ ಗಳಿಕೆ ರಜೆ ಮಂಜೂರು ಮಾಡುವುದು.
👉 ಬಾಕಿ ಉಳಿದಿರುವ ಎಲ್ಲ ಅರಿಯರ್ಸ ಮಾಡುವುದು
👉 ಕಲಿಕಾ ಚೇತರಿಕೆ ಸಂಬಂಧಿಸಿದಂತೆ ಕಲಿಕಾ ಹಾಳೆಗಳು ಮತ್ತು ಶಿಕ್ಷಕರ ಕೈಪಿಡಿ ಗಳನ್ನು ಆದಷ್ಟು ಬೇಗ ಶಾಲೆಗಳಿಗೆ ಸರಬರಾಜು ಮಾಡುವುದು.
👉 ಮಕ್ಕಳ ಶಿಷ್ಯವೇತನದ ಶಾಲಾ ಹಂತದ ಸಮಸ್ಯೆಗಳು. ಮುಂತಾದ ಸಮಸ್ಯೆಗಳನ್ನು ಸುದೀರ್ಘವಾಗಿ ಚರ್ಚಿಸಲಾಯಿತು.
ಮಾನ್ಯ ಕ್ಷೇತ್ರಶಿಕ್ಷಣಾಧಿಕಾರಿಗಳು ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹಾರವಾಗಿ ಸಕಾರಾತ್ಮಕವಾಗಿ ಸ್ಪಂದಿಸಿ ಪ್ರಗತಿಯನ್ನು ತಿಳಿಸಿದರು. ವಿಶೇಷವಾಗಿ ಗಳಿಕೆ ರಜೆ ಕುರಿತು ತ್ರಿಮ್ಯಾನಕಮಿಟಿ ಕಾರ್ಯವನ್ನು ತಿಳಿಸಿದರು.
👉 ಭೇಟಿ ಮಾಡಿದ ಸಂಘಗಳ ನಿಯೋಗದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶಂಕರ್ ಘಟ್ಟಿ,ರಾಜ್ಯ ಗೌರವಾಧ್ಯಕ್ಷ ಎಲ್ ಐ ಲಕ್ಕಮ್ಮನವರ್ ವಿಭಾಗೀಯ ಸಂಚಾಲಕ ಅಕ್ಬರಲಿ ಸೋಲಾಪುರ,ಧಾರವಾಡ ತಾಲೂಕು ಅದ್ಯಕ್ಷರಾದ ಎಸ್ ಎಸ್ ಧನಿಗೊಂಡ,ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಅಲ್ಲಾಭಕ್ಷ ನದಾಫ್, ಚಂದ್ರಶೇಖರ ತಿಗಡಿ,ಶಾರದಾ ಶಿರಕೋಳ, ಗಂಗವ್ವ ಕೋಟಿ ಗೌಡ್ರ,ಮಹಾದೇವಿ ದೊಡ್ಡಮನಿ,ಗೌರವ್ವ ಹುಡೇದ,ರಮೇಶ್ ಮಂಗೋಡಿ,ಶಿವಾಜಿ ಜಾದವ,ಕೆಎಸ್ ಹಿರೇಮಠ,ಹನುಮಂತ್ ಡೊಕ್ಕಣ್ಣವರ,ರಮೇಶ್ ಸನ್ನ ಮನಿ,ರಾಜೀವ್ ಬೆಟಿಗೇರಿ,ಎನ್,ವಿ ತೋರಣಗಟ್ಟಿ, ಎಚ್ಎಫ್ ಜಿಲ್ಲೆ ನವರ್, ಮುಂತಾದವರಿದ್ದರು.