ಉತ್ತರ ಪ್ರದೇಶ –
ಮಹಾಮಾರಿ ಕರೋನ ಗೆ ಸಾಲು ಸಾಲಾಗಿ ಶಿಕ್ಷಕರು ಸಾವಿಗೀಡಾಗಿದ್ದಾರೆ ಇನ್ನೂ ಆಗುತ್ತಿದ್ದಾರೆ ಅದರಲ್ಲೂ ಕಳೆದ ಒಂದು ವಾರದಿಂದಲಂತೂ ಹೆಚ್ಚಿನ ಪ್ರಮಾ ಣದಲ್ಲಿ ಸಾವು ನೋವುಗಳಾಗುತ್ತಿದ್ದು ಇತ್ತ ಉತ್ತರ ಪ್ರದೇಶದಲ್ಲಿ ಚುನಾವಣೆ ಕರ್ತವ್ಯ ಮಾಡಿದ ಶಿಕ್ಷಕರು ಪಂಚಾಯತ್ ಚುನಾವಣಾ ಕರ್ತವ್ಯದ ನಂತರ ಒಟ್ಟು ಈವರೆಗೆ 600 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಮೃತರಾಗಿದ್ದಾರೆ ಈ ಕುರಿತು ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಿವೆ.
ಹೌದು ಸಾಂಕ್ರಾಮಿಕ ರೋಗದ ನಡುವೆ ಮೃತಪಟ್ಟಿ ದ್ದಾರೆ 71 ಜಿಲ್ಲೆಗಳ 600 ಕ್ಕೂ ಹೆಚ್ಚು ಶಿಕ್ಷಕರು ಇವರ ಹೆಸರನ್ನು ಚುನಾವಣಾ ಆಯೋಗಕ್ಕೆ ನೀಡಲಾಗಿದೆ ಎಂದು ಉತ್ತರ ಪ್ರದೇಶದ ಶಿಕ್ಷಕ ಮಹಾಸಂಘದ ಅಧ್ಯಕ್ಷ ದಿನೇಶ್ ಚಂದ್ರ ಶರ್ಮಾ ಹೇಳಿದ್ದಾರೆ.
ಪಂಚಾಯತ ಮತದಾನದ ಕರ್ತವ್ಯದ ಸಮಯ ದಲ್ಲಿ ಕೋವಿಡ್ -19 ರ ಕಾರಣದಿಂದಾಗಿ ಸರ್ಕಾರಿ ನೌಕರರು ಮೃತಪಟ್ಟಿದ್ದಾರೆ ಎಂಬುದಕ್ಕೆ ಸಂಬಂಧಿಸಿ ದಂತೆ ಅಲಹಾಬಾದ್ ಹೈಕೋರ್ಟ್ ಮಂಗಳವಾರ ಎಸ್‌ಇಸಿಗೆ ನೋಟಿಸ್ ಕಳುಹಿಸಿತ್ತು.
ತಮ್ಮ ಜಿಲ್ಲೆಗಳಲ್ಲಿ ಶಿಕ್ಷಕರ ಸಾವಿನ ಬಗ್ಗೆ ವರದಿಗಳ ನ್ನು ಪರಿಶೀಲಿಸಲು ಮತ್ತು 24 ಗಂಟೆಗಳ ಒಳಗೆ ವರದಿ ನೀಡುವಂತೆ ವಿಶೇಷ ಕಾರ್ಯ ಅಧಿಕಾರಿ ಎಸ್.ಕೆ.ಸಿಂಗ್ ಅವರು ಎಲ್ಲಾ ಡಿಎಂ ಮತ್ತು ಎಸ್ಪಿ ಗಳು ಮತ್ತು ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಪತ್ರ ಹೊರಡಿಸಿದ್ದಾರೆ.
ಹಲವಾರು ಜಿಲ್ಲೆಗಳಿಂದ ಚುನಾವಣಾ ಕರ್ತವ್ಯದಲ್ಲಿ ರುವ ಶಿಕ್ಷಕರ ಆರೋಗ್ಯದ ಬಗ್ಗೆ ಇನ್ನೂ ಮಾಹಿತಿ ಬಂದಿಲ್ಲ ಪರಿಸ್ಥಿತಿ ಅತ್ಯಂತ ನಿರ್ಣಾಯಕವಾಗಿದೆ. ಈ ಮೊದಲು ಏಪ್ರಿಲ್ 12 ರಂದು ಪ್ರಕರಣಗಳಲ್ಲಿ ದೊಡ್ಡ ಏರಿಕೆ ಕಂಡು ಬಂದ ನಂತರ ಚುನಾವಣೆ ಮುಂದೂಡುವಂತೆ ಯೂನಿಯನ್ ರಾಜ್ಯ ಚುನಾವ ಣಾ ಆಯೋಗಕ್ಕೆ ಮನವಿ ಮಾಡಿತ್ತು ಆದರೆ ಮನವಿ ಯನ್ನು ಕಡೆಗಣಿಸಲಾಗಿದೆ ಎಂದು ಶರ್ಮಾ ಆರೋ ಪಿಸಿದ್ದಾರೆ.
ಚುನಾವಣಾ ಕರ್ತವ್ಯದಿಂದಾಗಿ ಸಾವಿರಾರು ಜನರು ಕೋವಿಡ್ -19 ರ ಶಾಪ ಅನುಭವಿಸಿದ್ದಾರೆ ಮತ್ತು ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಅವರು ಹೇಳಿದರು.ಅಲ್ಲದೇ ನಾಳೆ ನಡೆಯಲಿರುವ ಎಣಿಕೆಯನ್ನು ಮುಂದೂಡ ಬೇಕೆಂದು ಮನವಿ ಮಾಡಲಾಯಿತು