ಸವದತ್ತಿ –

KSPSTA ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯತ್ವವನ್ನು ನಿರಾಕರಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ನೀಡಿದ್ದಾರೆ.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯತ್ವವನ್ನು ವಿರೋಧಿಸಿ ಹಾಗೇ ಹಣವನ್ನು ಕಟಾವಣೆ ಮಾಡ ದಂತೆ ನೂರಾರು ಶಿಕ್ಷಕರು ಬಿಇಓ ಅವರಿಗೆ ಮನವಿ ನೀಡಿದ್ದಾರೆ. ಹೌದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ನೂರಾರು ಶಿಕ್ಷಕರು KSPSTA ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 2021-22. ನೇಯ ಸಾಲಿನ ವಾರ್ಷಿಕ ಸದಸ್ಯತ್ವವನ್ನು ಪಡೆಯಲು ನಿರಾಕರಿಸಿ ಇಂದು ಸವದತ್ತಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅರ್ಜಿ ನೀಡುವುದರ ಮೂಲಕ ಸದಸ್ಯತ್ವವನ್ನು ನಿರಾಕರಿಸಿದರು






ತಾಲ್ಲೂಕು ಅದ್ಯಕ್ಷ ಎಸ್ ಜಿ ಗೂಳಪ್ಪನವರ ನೇತ್ರತ್ವ ದಲ್ಲಿ, ಮನವಿಯನ್ನು ಸಲ್ಲಿಸಲಾಯಿತು ಮಲ್ಲಿಕಾ ರ್ಜುನ ಚರಂತಿಮಠ ಟಿ ಬಿ ಏಗನಗೌಡರ, ಸಂಗಮೇ ಶ ಖನ್ನಿನಾಯ್ಕರ ಸುನೀಲ ಏಗನಗೌಡರ ಮಹಾಂ ತೇಶ ಚಿಕ್ಕೊಪ್ಪ,ಬಿ ಟಿ ಭಜಂತ್ರಿ,ಎಸ್ ವಾಯ್ ಉಪ್ಪಾರ,ಎಂ ಎಂ ಮಬನೂರ,ಪ್ರಕಾಶ ಹೇಮರೆಡ್ಡಿ, ಆರ್ ಎಂ ಕುಡಚಿ,ಯು ಪಿ ನಾಗಪ್ಪಗೋಳ ಮುಂತಾ ದವರು ಹಾಜರಿದ್ದರು ಆ ಸಂಘಕ್ಕೆ ಯಾರು ಸದಸ್ಯ ತ್ವವನ್ನು ಬಯಸಿ ಅರ್ಜಿ ಕೊಡುತ್ತಾರೆ ಅಂತಹ ಶಿಕ್ಷಕರ ಸದಸ್ಯತ್ವದ ಹಣವನ್ನು ಕಟಾವಣೆ ಮಾಡಿ, ಯಾರು ಅರ್ಜಿ ಕೊಡದೆ ಸುಮ್ಮನಿರುತ್ತಾರೆ ಅಂತಹ ಶಿಕ್ಷಕರ ಸದಸ್ಯತ್ವದ ಹಣವನ್ನು ವೇತನದಲ್ಲಿ ಕಟಾ ವಣೆ ಮಾಡಬಾರದು ಎಂದು ಮನವಿ ಮಾಡಿದರು.