ಧಾರವಾಡ –
ನಾನು ಸಚಿವ ಸ್ಥಾನದ ಲಾಬಿಗಾಗಿ ಅಮಿತ ಶಾ ಅವರನ್ನು ಭೇಟಿ ಮಾಡಿಲ್ಲ ನಾನು ೬ ತಿಂಗಳ ಹಿಂದೆಯೇ ಅವರಿಗೆ ಭೇಟಿ ಮಾಡಲು ಕೇಳಿದ್ದೆ ಎಂದು ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಹೇಳಿದರು. ಧಾರವಾಡದಲ್ಲಿ ಮಾತನಾಡಿದ ಅವರು ಶಾ ಅವರು ನನ್ನನ್ನು ಕರೆದಿದ್ದರು ಹೀಗಾಗಿ ಭೇಟಿ ಮಾಡಿ ಬಂದಿದ್ದೆನೆ ಎಂದರು.

ಸಚಿವ ಸ್ಥಾನದ ಲಾಬಿಗಾಗಿ ನಾನು ವಿಶೇಷ ಸಂದರ್ಭ ಭೇಟಿಗಾಗಿ ಶಾ ಅವರನ್ನು ಕೇಳಿಲ್ಲ ಏಕಾಎಕಿ ಒಂದು ದಿನ ಮುಂಚೆ ನನಗೆ ಅವರು ಬಂದು ಭೇಟಿ ಮಾಡಲು ಹೇಳಿದ್ರು ಸದ್ಯ ಅಲ್ಲಿ ಪ್ರಸಕ್ತ ರಾಜ್ಯದ ಸ್ಥಿತಿ ಗತಿ ಬಗ್ಗೆ ಚರ್ಚೆ ಮಾಡಿದ್ರು ಎಂದರು.ಇನ್ನೂ ಉತ್ತರ ಕರ್ನಾಟಕ ಹಾಗೂ ನನ್ನ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತುಕತೆ ಆಗಿದೆ ಎಂದರು. ಇನ್ನು ನಾನಂತು ಅವರಿಗೆ ಏನು ಕೇಳೊಕೆ ಹೋಗಿಲ್ಲ, ಡಿಸಿಎಂ ಸ್ಥಾನದಲ್ಲಿ ನಾನು ರೆಸನಲ್ಲಿ ಇರುವರು ಮಾದ್ಯಮ ದವರಿಗೆನೇ ಗೊತ್ತು ಎಂದು ಹೇಳಿದರು.