ಮುಂಬೈ –
ಲಂಚ ಪಡೆಯುತ್ತಾ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪೊಲೀಸ್ ಅಧಿಕಾರಿಯೊಬ್ಬ ಎಸಿಬಿ ಅಧಿಕಾರಿಗಳಿಗೆ ಪಿಸ್ತೂಲ್ ತೋರಿಸಿ ಹಣ ಎತ್ತಿಕೊಂಡು ಪರಾರಿಯಾ ಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ರಾಯಗಡ ಜಿಲ್ಲೆಯ ಮಾನ್ ಗಾಂವ್ ಠಾಣೆ ಸಬ್ ಇನ್ಸ್ಪೆಕ್ಟರ್ ಗಣೇಶ್ ಕಂಡೇಕರ್ ಎಂಬುವರೇ ಹೀಗೆ ಓಡಿ ಹೋಗಿರುವ ಪೊಲೀಸ್ ಅಧಿಕಾರಿಯಾಗಿ ದ್ದಾರೆ.
ಠಾಣೆಯಲ್ಲಿ ದೂರು ಸ್ವೀಕರಿಸಲು 50 ಸಾವಿರ ರೂಪಾಯಿ ಲಂಚ ಕೇಳುತ್ತಿದ್ದಾರೆ ಎಂಬ ದೂರಿನ ಮೇರೆಗೆ (ಎಸಿಬಿ) ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದರು. ಜಾಲ ಬೀಸಿದಾಗ, ಎಸ್ಐ ಕಂಡೇಕರ್ ದೂರು ಸ್ವೀಕರಿಸಲು 25,000 ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಸಾಕ್ಷಿ ಸಮೇತ ಹಿಡಿಯಲು ಮುಂದಾದರು.
ಎಚ್ಚೆತ್ತುಕೊಂಡ ಕಂಡೇಕರ್, ಎಸಿಬಿ ಯ ಇನ್ಸ್ಪೆಕ್ಟರ್ ಮತ್ತು ಪೇದೆ ಅವರನ್ನು ಬಂಧಿಸಲು ಹೋದಾಗ ತಮ್ಮ ಸರ್ವಿಸ್ ಪಿಸ್ತೂಲ್ ನ್ನು ತೋರಿಸಿದ್ದಾರೆ. ನಂತರ ಪೇದೆಗೆ ಬೈಕ್ ನಿಂದ ಗುದ್ದಿ ಪರಾರಿಯಾಗಿ ದ್ದಾರೆ. ಎಸಿಬಿ ಪೇದೆಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಯಗಡ ಎಸಿಬಿ ಯು ಪ್ರಕರಣ ದಾಖಲಿಸಿದ್ದು, ಪರಾರಿಯಾಗಿ ರುವ ಎಸ್ಐ ಗಣೇಶ್ ಕಂಡೇಕರ್ ಅವರ ಪತ್ತೆ ಕಾರ್ಯ ಆರಂಭವಾಗಿದೆ.