ಬೆಂಗಳೂರು –
ಶಿಕ್ಷಕರ ಸಮಸ್ಯೆಗಳ ಕುರಿತಂತೆ ಚರ್ಚೆ ಮಾಡಲು ಇತ್ತೀಚಿಗಷ್ಟೇ ರಾಜ್ಯ ಸರ್ಕಾರಿ ನೌಕರರ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಕರೆದ ಸಭೆಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಾಲತೇಶ್ ಬಬ್ಬಜ್ಜಿ ಪಾಲ್ಗೊಂಡು ಶಿಕ್ಷಕರ ಸಮಸ್ಯೆ ಸೇರಿದಂತೆ OTS ಕುರಿತು ವೇದಿಕೆಯ ಮೇಲೆ ಧ್ವನಿ ಎತ್ತಿದ್ದರು.ಈ ಒಂದು ಸಭೆಯಲ್ಲಿ ಇವರು ಪಾಲ್ಗೊಂಡಿದ್ದಕ್ಕಾ ಗಿ ಇವರಿಗೆ ಸಂಘಟನೆಯ ನಾಯಕರು ಇದೊಂದು ಮಹಾ ಪರಾಧ ಎಂಬಂತೆ ಮಾಡುತ್ತಿದ್ದಾರಂತೆ
ಹೌದು ಈವರೆಗೆ ಸಂಘವನ್ನು ಬೆಳೆಸುತ್ತಾ ಶಿಕ್ಷಕರ ಸಮಸ್ಯೆ ಗಳ ಕುರಿತಂತೆ ಧ್ವನಿ ಎತ್ತಿರುವ ಮಾಲತೇಶ್ ಬಬ್ಬಜ್ಜಿ ಯವರು ಈಗ ತಮ್ಮ ಸ್ಥಾನಕ್ಕಾಗಿ ರಾಜೀನಾಮೆಯನ್ನು ನೀಡಲು ಮುಂದಾಗಿದ್ದಾರೆ.ಹೌದು ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆಯನ್ನು ನೀಡಲು ತಿರ್ಮಾನವನ್ನು ತಗೆದುಕೊಂಡಿದ್ದು ಸಂಘದಲ್ಲಿನ ಇತ್ತೀಚಿನ ಬೆಳವಣಿಗೆ ಕಂಡು ತುಂಬಾ ಬೇಸರವೆನಿಸಿದೆ,
ಸರ್ಕಾರಿ ನೌಕರ ಸಂಘದ ಸದಸ್ಯನಾಗಿದ್ದು ಮಾತೃ ಸಂಘದ ರಾಜ್ಯಾಧ್ಯಕ್ಷರು ಕರೆದ ಸಭೆಗೆ ಹೋಗಿದ್ದು ಮಹಾ ಅಪರಾಧ ಎಂಬಂತೆ ಬಿಂಬಿಸುತ್ತಿರುವ ವಿಚಾರದಿಂದ ತುಂಬಾ ನೋವಾಗಿದ್ದು ನನಗೆ ಕೆಲಸ ಮಾಡಲು ಯಾವ ಹುದ್ದೆಯೂ ಬೇಕಾಗಿಲ್ಲ ರಾಜ್ಯ ಸಂಘಟನಾ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಲು ಚಿಂತಿಸಿರುವೆ ಎಂದು ಮಾಲತೇಶ್ ಬಬ್ಬಜ್ಜಿಯವರು ಹೇಳಿದ್ದಾರೆ..ಅಲ್ಲದೇ ಈ ಕುರಿತಂತೆ ಆಪ್ತರೊಂದಿಗೆ ಚರ್ಚೆಯನ್ನು ಮಾಡುತ್ತಿದ್ದು ಎಲ್ಲರ ತಿರ್ಮಾನ ನೀವು ತಗೆದುಕೊಂಡಿರುವ ನಿರ್ಧಾರ ಸರಿಯಾಗಿದೆ ಎಂದರೆ ಸಂಘಕ್ಕೆ ಮತ್ತೊರ್ವ ಪ್ರಮುಖ ನಾಯಕ ಗುಡ್ ಬೈ ಹೇಳಲಿದ್ದಾರೆ.