OPS ಗಾಗಿ ಶೀಘ್ರದಲ್ಲೇ CM ಜೊತೆ ಚರ್ಚೆ ಮಾಡಿ ಪೈನಲ್ ಮಾಡುತ್ತೇನೆ ಶಾಸಕ ಅಪ್ಪಚ್ಚುರಂಜನ್ – ಸರ್ಕಾರಿ ನೌಕರರು ನೆಮ್ಮದಿಯಿಂದ ಜೀವನ ನಡೆಸಬೇಕಾದರೆ ಹಳೆ ಪಿಂಚಣಿ ಯೋಜನೆ ಅವಶ್ಯಕವಿದೆ ಎಂದ ಶಾಸಕರು

Suddi Sante Desk
OPS ಗಾಗಿ ಶೀಘ್ರದಲ್ಲೇ CM ಜೊತೆ ಚರ್ಚೆ ಮಾಡಿ ಪೈನಲ್ ಮಾಡುತ್ತೇನೆ ಶಾಸಕ ಅಪ್ಪಚ್ಚುರಂಜನ್ –  ಸರ್ಕಾರಿ ನೌಕರರು ನೆಮ್ಮದಿಯಿಂದ ಜೀವನ ನಡೆಸಬೇಕಾದರೆ ಹಳೆ ಪಿಂಚಣಿ ಯೋಜನೆ ಅವಶ್ಯಕವಿದೆ ಎಂದ ಶಾಸಕರು

ಮಡಿಕೇರಿ

ಹಳೆ ಪಿಂಚಣಿ ವಿಚಾರದಲ್ಲಿ ಈಗಾಗಲೇ ಮುಖ್ಯಮಂತ್ರಿ ಅವರೊಂದಿಗೆ ಮಾತನಾಡಿ ಚರ್ಚೆಯನ್ನು ಮಾಡಲಾಗಿದ್ದು ಶೀಘ್ರದಲ್ಲೇ ಈ ಕುರಿತಂತೆ ಪುನಃ ಇನ್ನೊಮ್ಮೆ ಮಾತುಕತೆಯನ್ನು ಮಾಡಿ ಇದನ್ನು ಅಂತಿಮಗೊಳಿಸೊದಾಗಿ ಶಾಸಕ ಅಪ್ಪಚ್ಚುರಂಜನ್ ಹೇಳಿದರು.ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್‌) ಬದಲಾಗಿ ಹಳೆ ಪಿಂಚಣಿ ಯೋಜನೆ (ಒಪಿಎಸ್)ಯನ್ನೇ ಮುಂದುವರಿಸಬೇಕು.ಮಡಿಕೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ದಲ್ಲಿ ಹಮ್ಮಿಕೊಂಡಿದ್ದ ಕೊಡಗು ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ ದರು.

ಈ ಸಂಬಂಧ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಮತ್ತೊಮ್ಮೆ ಮುಖ್ಯಮಂತ್ರಿ ಜೊತೆ ಸಮಾಲೋಚನೆ ನಡೆಸುವಂತೆ ಹೇಳಲಾಗಿದೆ ಹೀಗಾಗಿ  ಹಳೆ ಪಿಂಚಣಿ ಯೋಜನೆ ಜಾರಿಯಾ ಗುತ್ತದೆ ಎಂದ ಹೇಳಿದರು.ಸರ್ಕಾರಿ ನೌಕರರು ನೆಮ್ಮದಿಯಿಂದ ನಿವೃತ್ತಿ ಜೀವನ ನಡೆಸಬೇಕು ಇದಕ್ಕಾಗಿ ಹಿಂದೆ ಸರ್ಕಾರಿ ನೌಕರರಿಗೆ ಇದ್ದ ಹಳೆ ಪಿಂಚಣಿ ಯೋಜನೆಯನ್ನೇ ಮುಂದುವರಿಸಬೇಕು

ಆದ್ದರಿಂದ ಎನ್ಪಿಡಎಸ್ ಬದಲಾಗಿ ಒಪಿಎಸ್ ಜಾರಿಯಾಗಬೇಕೆಂದರು.ಸರ್ಕಾರಿ ನೌಕರರು ನಿತ್ಯವೂ ಒಂದಲ್ಲ ಒಂದು ರೀತಿಯಲ್ಲಿ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಾರೆ. ಕ್ರೀಡಾ ಚಟುವಟಿಕೆ ಯಲ್ಲಿ ಪಾಲ್ಗೊಳ್ಳುವುದರಿಂದ ಒಂದು ರೀತಿಯ ಕ್ರಿಯಾಶೀಲ ಚಟುವಟಿಕೆಗೆ ಸಹಕಾರಿಯಾಗಲಿದೆ’ ಎಂದು ಅವರು ಹೇಳಿದರು.ಈ ಒಂದು ಸಂದರ್ಭ ದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಪೊನ್ನಚ್ಚನ ಶ್ರೀನಿವಾಸ ಮಾತನಾಡಿ NPS  ನಲ್ಲಿ ಅನೇಕ ಗೊಂದಲಗಳಿವೆ.

ನಿವೃತ್ತಿ ನಂತರ ನೌಕರರ ಜೀವನ ಕಷ್ಟಸಾಧ್ಯವಾಗ ಲಿದೆ.ಆ ನಿಟ್ಟಿನಲ್ಲಿ ಎಲ್ಲ ಜನಪ್ರತಿನಿಧಿಗಳೂ ಸರ್ಕಾರಿ ನೌಕರರಿಗೆ ಬೆಂಬಲ ನೀಡಬೇಕೆಂದರು ಇನ್ನೂ ಮಡಿಕೇರಿ ನಗರದಲ್ಲಿ ಸರ್ಕಾರಿ ನೌಕರರ ಭವನ ನಿರ್ಮಾಣಕ್ಕೆ ಜಾಗ ನೀಡಲಾಗಿದೆ. ಭವನ ನಿರ್ಮಾಣಕ್ಕಾಗಿ ಹೆಚ್ಚಿನ ಅನುದಾನ ನೀಡಬೇ ಕೆಂದು ಒತ್ತಾಯವನ್ನು ಮಾಡಿದರು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ.ವಿಸ್ಮಯಿ, ಸರ್ಕಾರಿ ನೌಕರರ ಸಂಘದ ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಗುರುರಾಜ್, ಸೋಮವಾರಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ಪ್ರದೀಪ್, ಗೌರವ ಅಧ್ಯಕ್ಷ ಶಿವಕುಮಾರ್ ಇದ್ದರು.

ಸುದ್ದಿ ಸಂತೆ ನ್ಯೂಸ್ ಮಡಿಕೇರಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.